– ಕಾಂಗ್ರೆಸ್, ಸಿದ್ದರಾಮಯ್ಯಗೆ ಇಲ್ಲದ ಸಭ್ಯತೆ ಬಿಜೆಪಿಯವರಿಗ್ಯಾಕೆ?
ಕಾರವಾರ: ಸಂಸ್ಕೃತಿಯ ಬಗ್ಗೆ ಹೇಳುವ ಸಿದ್ದರಾಯ್ಯನವರು ಬಹಿರಂಗವಾಗಿ ಚರ್ಚೆಗೆ ಬರಲಿ. ಹಿಂದೂ ಸಮಾಜ ಅಂದ್ರೆ ಬೇವರ್ಸಿ ಸಮಾಜಾನಾ ಎಂದು ಸಂಸದ ಅನಂತ್ ಕುಮಾರ್ ಹೆಗಡೆ (Anantkumar Hegde) ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
Advertisement
ಶಿರಸಿಯ ನಿವಾಸದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸಂಸ್ಕೃತಿಯ ಬಗ್ಗೆ ಹೇಳುವ ಸಿದ್ದರಾಯ್ಯನವರು (Siddaramaiah) ಬಹಿರಂಗವಾಗಿ ಚರ್ಚೆಗೆ ಬರಲಿ. ಹಿಂದೂ ಸಮಾಜ ಅಂದ್ರೆ ಬೇವರ್ಸಿ ಸಮಾಜಾನಾ? 20% ಮತಕ್ಕಾಗಿ ಎಷ್ಟೊಂದು ಜೊಲ್ಲು ಸುರಿಸಿ ಮಾತನಾಡುತ್ತಾರೆ? 80% ರಿಂದ 85% ಇರುವ ಹಿಂದೂ ಸಮಾಜದ ಬಗ್ಗೆ ನಿಮಗೆ ಗೌರವ ಯಾಕಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಆ ಮೂಲಕ ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಅನಂತ್ ಕುಮಾರ್, ಸಿದ್ದರಾಮಯ್ಯ ಕಾಲಿನ ಧೂಳಿಗೂ ಸಮನಲ್ಲ: ತಂಗಡಗಿ ವಾಗ್ದಾಳಿ
Advertisement
Advertisement
ಸಿಎಂ ಸಿದ್ದರಾಮಯ್ಯ ಮೋದಿ ಅವರನ್ನ ಏಕವಚನದಲ್ಲಿ ಮಾಸ್ ಮರ್ಡರ್ ಎಂದು ಕರೆದರು. ಕಾಂಗ್ರೆಸ್ ನವರಿಗೆ, ಸಿದ್ದರಾಮಯ್ಯ ಅವರಿಗೆ ಇಲ್ಲದ ಸಭ್ಯತೆ ಬಿಜೆಪಿಯವರಿಗ್ಯಾಕೆ? ಇದು ನನ್ನ ಪ್ರಧಾನಿ, ನನ್ನ ದೇಶ, ನನ್ನ ಧರ್ಮದ ಬಗ್ಗೆ ಹೇಳಿರುವ ಹೇಳಿಕೆಯಲ್ಲಿ ಯಾವುದೇ ಹಿಂಜರಿಕೆ ಇಲ್ಲ. ದಿಗ್ವಿಜಯ ಸಿಂಗ್, ಮೋದಿಯವರನ್ನ ರಾವಣ ಅಂತಾ ಕರೆದರು. ಜಯರಾಂ ರಮೇಶ್ ಭಸ್ಮಾಸೂರ ಅಂತಾ ಕರೆದ್ರು, ಮಣಿಶಂಕರ್ ಅಯ್ಯರ್ ವಿಷ ಸರ್ಪ ಅಂತಾ ಕರೆದ್ರು. ಇನ್ನೂ ಏನ್ರಿ ಹೇಳಿಸಿಕೊಳ್ಳಬೇಕು ನಾವು ಎಂದು ಗರಂ ಆಗಿದ್ದಾರೆ.
Advertisement
ನನ್ನ ಹೇಳಿಕೆಯನ್ನ ಖಂಡಿಸುವುದು ಸಹಜ. ಇದು ನನ್ನ ವೈಯಕ್ತಿಕ ಹೇಳಿಕೆ. ಇದು ಪಕ್ಷದ ಹೇಳಿಕೆ ಅಲ್ಲ. ವಿಜಯೇಂದ್ರ ಹೇಳಿರುವ ಮಾತು ಸರಿ ಇದೆ. ಸಂಸ್ಕೃತಿ ಬಗ್ಗೆ ಸಿದ್ದರಾಮಯ್ಯ ನನ್ನ ಎದುರು ಬಂದು ಮಾತನಾಡಲಿ. ಇದೆಲ್ಲದರ ಬಗ್ಗೆ ನಾವಿಬ್ರೂ ಕೂತ್ಕೊಂಡು ಜನರ ಮುಂದೆ ಚರ್ಚೆ ಮಾಡೋಣ. ಎಲ್ಲೋ ಕೂತ್ಕೊಂಡು ಸಭೆಯಲ್ಲಿ ಮಾತನಾಡುವುದು ಸರಿ ಅಲ್ಲ. ಯಡಿಯೂರಪ್ಪನವರ ಬಗ್ಗೆ, ಮೋದಿಯವರ ಬಗ್ಗೆ ನಮ್ಮ ದೇವಸ್ಥಾನದ ಬಗ್ಗೆ ಅಸಭ್ಯವಾಗಿ ಮೊದಲು ಮಾತನಾಡಿದ್ದು, ನಮ್ಮ ದೇವಸ್ಥಾನದ ಬಗ್ಗೆ ಅಷ್ಟು ಕೀಳಾಗಿ ಮಾತನಾಡುವುದು (ಕಾಂಗ್ರೆಸ್) ಯಾಕೆ ಬೇಕಿತ್ತು. ನಮ್ಮ ಪ್ರಧಾನಿ ಮೋದಿ, ಅಮಿತ್ ಶಾ ಬಗ್ಗೆ ಯಾರೆಲ್ಲ ಏನೇನು ಮಾತಾಡಿದ್ದಾರೆ ಹೇಳಬೇಕಾ? ಸಲ್ಮಾನ್ ಖುರ್ಷಿದ್ ಕಪ್ಪೆ, ಮಂಗ, ನಪಸುಂಕ ಎಂದು ಕರೆದರು. ಶರದ್ ಪವಾರ್, ಮೋದಿಯವರನ್ನ ಹಿಟ್ಲರ್ ಅಂತಾ ಕರೆದ್ರು. ಕಾಂಗ್ರೆಸ್ ಬಹುತೇಕ ನಾಯಕರು, ಹಿಟ್ಲರ್ ಎಂದು ಕರೆದಿದ್ದಾರೆ ಎಂದು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಸಂಸದ ಅನಂತ್ ಕುಮಾರ್ ಹೆಗ್ಡೆ ವಿರುದ್ಧ ಪ್ರಕರಣ ದಾಖಲು
ಕಾಂಗ್ರೆಸ್ ನಾಯಕರು ಎಲ್ರೂ ನನ್ನ ಮುಂದೆ ಬಂದು ಸಂಸ್ಕೃತಿ ಬಗ್ಗೆ ಚರ್ಚೆ ಮಾಡಲಿ. ಸಭ್ಯತೆ ಎಂದ್ರೆ ಏನು ಅಂತಾ ನಾನು ಪಾಠ ಮಾಡ್ತೀನಿ. ಏನೂ ಮಾತನಾಡಬೇಕು ಅಂತಾ ನಾನು ಹೇಳ್ತೀನಿ. ಯಾರಿಗೆ ಯಾವ ಭಾಷೆಯಲ್ಲಿ ಹೇಗೆ ಮಾತಾಡಬೇಕು ಹಾಗೆ ಮಾತಾಡಬೇಕು. ಸಭ್ಯತೆ ಅಂದ್ರೆ ಏನು ಎಂಬುವುದನ್ನ ನೀವೂ ತಿಳಿದುಕೊಳ್ಳಿ. ಸಿದ್ದರಾಮಯ್ಯ ಕಳೆದ ಚುನಾವಣೆಯಲ್ಲಿ ಮೋದಿಯವರಿಗೆ ಏಕವಚನದಲ್ಲಿ ಏನೆಲ್ಲ ಮಾತಾಡಿದ್ರು. ಅವರಿಗೊಂದು ನ್ಯಾಯ ನಮಗೊಂದು ನ್ಯಾಯನಾ? ಅದೆಲ್ಲ ನಮಗೆ ಗೊತ್ತಿಲ್ಲ. ಯಾರಿಗೆ ಹೇಗೆ ಮಾತಾಡಬೇಕು ನಮಗೆ ಗೊತ್ತು. ನನ್ನ ನಾಯಕರನ್ನು ಪ್ರೀತಿ ಮಾಡುವ ಜನ, ಅದಕ್ಕೂ ಹೆಚ್ಚು ನನ್ನ ಧರ್ಮವನ್ನೂ ಪ್ರಿತಿ ಮಾಡುವವ ಜನ. ರಾಮಮಂದಿರ ಬಗ್ಗೆ ಎಷ್ಟ ಅವಹೇಳನವಾಗಿ ಮಾತಾಡಿದ್ರು. ಎಷ್ಟು ಕೀಳಾಗಿ ಹಿಂದೂ ಸಮಾಜದ ಬಗ್ಗೆ ಮಾತಡಿದ್ರು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಸಂಸ್ಕೃತಿ ಬಗ್ಗೆ ಮಾತನಾಡುವ ಸಿದ್ದರಾಮಯ್ಯನವರೇ ನನ್ನ ಮುಂದೆ ಬರಲಿ. ಲೈವ್ ಡಿಬೆಟ್ ಮಾಡೋಣ. ರಾಜ್ಯದ ಜನರಿಗೆ ಗೊತ್ತಿಲ್ಲ. ನಾಲ್ಕೂವರೆ ವರ್ಷ ಎಲ್ಲಿದ್ರು? ಕುಂಭಕರ್ಣ ಎಂಬ ಕಾಂಗ್ರೆಸ್ ಟೀಕೆ ಮಾಡಿದೆ. ಅದಕ್ಕೆಲ್ಲ ನಾನು ಮುಂದಿನ ದಿನಗಳಲ್ಲಿ ಉತ್ತರ ಕೊಡ್ತೇನೆ. ಎಲ್ಲದಕ್ಕೂ ಉತ್ತರ ಕೊಡ್ತೀನಿ. ಯಾವುದಕ್ಕೂ ಬಡ್ಡಿ ಗಿಡ್ಡಿ ಇಟ್ಟಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.