ಬೆಂಗಳೂರು: ಇದೊಂದು ರಾಜಕೀಯ ಪ್ರೇರಿತ ಷಡ್ಯಂತ್ರ ಅಷ್ಟೇ ಅಲ್ಲ. ಅತ್ಯಂತ ನೀಚತನದ ಪರಮಾವಧಿ. ಧಿಕ್ಕಾರವಿರಲಿ ಇಂತಹ ರಾಜಕಾರಣಕ್ಕೆ ಎಂದು ಸಂಸದ ಅನಂತ್ ಕುಮಾರ್ ಹೆಗ್ಡೆಯವರು ಪ್ರಧಾನಿ ಮೋದಿಗೆ ಎದುರಾದ ಭದ್ರತಾ ಲೋಪ ಸಂಬಂಧ ಕಿಡಿಕಾರಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಅವರು, ದೇಶದ ಪ್ರಧಾನಿಗಳ ಭದ್ರತಾ ನಿಯಮಗಳನ್ನು ಗಾಳಿಗೆ ತೂರಿದ ಪಂಜಾಬ್ ರಾಜ್ಯ ಸರ್ಕಾರ ಸರಕಾರವೇ ಅಲ್ಲ ಬದಲಾಗಿ ಅದೊಂದು ಆರಾಜಕತೆಯ ಆಗರ. ಇದೊಂದು ರಾಜಕೀಯ ಪ್ರೇರಿತ ಷಡ್ಯಂತ್ರ ಅಷ್ಟೇ ಅಲ್ಲ. ಅತ್ಯಂತ ನೀಚತನದ ಪರಮಾವಧಿ. ಧಿಕ್ಕಾರವಿರಲಿ ಇಂತಹ ರಾಜಕಾರಣಕ್ಕೆ ಎಂದು ಆಕ್ರೋಶ ಹೊರಹಾಕಿದ್ದಾರೆ.
Advertisement
Advertisement
ಫೇಸ್ ಬುಕ್ ನಲ್ಲಿ ಬರೆದಿದ್ದೇನು..?
ಭದ್ರತಾ ವೈಫಲ್ಯ ಎಂಬ ಸಂಚು..!
1) ಪಂಜಾಬ್ ಮುಖ್ಯಮಂತ್ರಿ ಪ್ರಧಾನಿಯವರನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಹೋಗಲಿಲ್ಲ!
2) ಪಂಜಾಬ್ ಮುಖ್ಯಮಂತ್ರಿ ಮತ್ತು ಡಿಜಿಪಿ ಫೋನ್ ಕರೆಗಳನ್ನೇ ಸ್ವೀಕರಿಸಲಿಲ್ಲ!
3) ಪ್ರಧಾನಿಯವರು ಭಧ್ರತಾ ತಂಡದ ಸಮೇತ ಫ್ಲೈ ಓವರ್ ಮೇಲೆ ತಿರುವುಗಳನ್ನು ತೆಗೆದುಕೊಳ್ಳಲೂ ಸಾಧ್ಯವಾಗದಂತಹ ಸ್ಥಿತಿಯಲ್ಲಿ 20 ನಿಮಿಷಗಳ ಕಾಲ ಅಕ್ಷರಶಃ ಬಂಧನದ ಸ್ಥಿತಿಯಲ್ಲಿ ಇದ್ದದ್ದು!
4) ಈ ಘಟನೆಗೆ ಆರಿಸಿಕೊಂಡಿದ್ದು ಪಾಕಿಸ್ತಾನ ಗಡಿಯ ಕೇವಲ 10 ಕಿ ಮೀ ದೂರದಲ್ಲಿದ್ದ ಸೇತುವೆಯ ಮೇಲೆ!
5) ಪಂಜಾಬ್ ಡಿಜಿಪಿ ಪ್ರಧಾನಿಯವರ ತಂಡದ ಸಂಚಾರಕ್ಕೆ ಅನುಮತಿ ಕೊಟ್ಟನಂತರ ನಿನ್ನೆ ಭಧ್ರತೆಯ ರಿಹರ್ಸಲ್ ನಡೆಸಿದ ನಂತರವೂ ತಾನು ಸ್ಥಳದಲ್ಲಿ ಇರದಿದ್ದದ್ದು ಮತ್ತು ಫೋನ್ ಕಾಲ್ ಗಳನ್ನೂ ಸ್ವೀಕರಿಸದಿದ್ದದ್ದು! ಇದನ್ನೂ ಓದಿ: ನಾನು ಜೀವಂತವಾಗಿ ಬಂದಿದ್ದೇನೆ, ನಿಮ್ಮ ಸಿಎಂಗೆ ಧನ್ಯವಾದ ಹೇಳಿ ಎಂದ ಮೋದಿ
Advertisement
Advertisement
6) ಘಟನೆಯ ಕೆಲವೇ ನಿಮಿಷದ ಒಳಗೆ ಕಾಂಗ್ರೆಸ್ ನಾಯಕರು ಘಟನೆಯನ್ನು ಸಂಭ್ರಮಿಸಿ ಟ್ವೀಟ್ ಮಾಡುತ್ತಿದ್ದದ್ದು!
7) ದೇಶದ ಪ್ರಧಾನಿಗಳ ಭದ್ರತೆ ನಿಯಮಗಳನ್ನು ನಿರ್ಲಕ್ಷಿಸಿದ ಪಂಜಾಬ್ ಸರ್ಕಾರಕ್ಕೆ ಧಿಕ್ಕಾರ. ಇದೊಂದು ರಾಷ್ಟ್ರೀಯ ಭದ್ರತೆಗೆ ಎಸೆದ ಸವಾಲು ಮತ್ತು ಸಂಚು.
8) ದೇಶದ ಪ್ರಧಾನಿಗಳ ಭದ್ರತಾ ನಿಯಮಗಳನ್ನು ಗಾಳಿಗೆ ತೂರಿದ ಪಂಜಾಬ್ ರಾಜ್ಯ ಸರ್ಕಾರ ಸರಕಾರವೇ ಅಲ್ಲ ಬದಲಾಗಿ ಅದೊಂದು ಆರಾಜಕತೆಯ ಆಗರ. ಇದೊಂದು ರಾಜಕೀಯ ಪ್ರೇರಿತ ಷಡ್ಯಂತ್ರ ಅಷ್ಟೇ ಅಲ್ಲ. ಅತ್ಯಂತ ನೀಚತನದ ಪರಮಾವಧಿ. ಧಿಕ್ಕಾರವಿರಲಿ ಇಂತಹ ರಾಜಕಾರಣಕ್ಕೆ. ಇದನ್ನೂ ಓದಿ: ಭದ್ರತಾ ಲೋಪವಾಗಿಲ್ಲ, ಜನರಿಲ್ಲದೇ ಖಾಲಿ ಕುರ್ಚಿಗಳಿದ್ದ ಕಾರಣ ಪಿಎಂ ರ‍್ಯಾಲಿ ರದ್ದು: ಪಂಜಾಬ್ ಸಿಎಂ
ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಪಂಜಾಬ್‍ಗೆ ನಿನ್ನೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದ ವೇಳೆ ಭಾರೀ ಭದ್ರತಾ ಲೋಪವಾಗಿತ್ತು. ಬಟಿಂಡಾದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನರೇಂದ್ರ ಮೋದಿ ಪಂಜಾಬ್‍ಗೆ ಆಗಮಿಸಿದ್ದರು. ಮಧ್ಯಾಹ್ನ ಹುಸೇನಿವಾಲಾದಲ್ಲಿ ರಾಷ್ಟ್ರೀಯ ಹುತಾತ್ಮರ ಸ್ಮಾರಕ ಸ್ಥಳಕ್ಕೆ ತೆರಳಲು ಹೋಗುತ್ತಿದ್ದಾಗ ಭದ್ರತಾ ಲೋಪವಾಗಿದೆ. ಕಾರ್ಯಕ್ರಮಕ್ಕೆ ಕಾರಿನಲ್ಲಿ ಭದ್ರತಾ ಸಿಬ್ಬಂದಿ ಜೊತೆ ಫ್ಲೈ ಓವರ್‍ನಲ್ಲಿ ತೆರಳುತ್ತಿದ್ದಾಗ ರೈತರು ಪ್ರತಿಭಟನೆ ಮಾಡುತ್ತಿರುವುದು ಗೊತ್ತಾಗಿದೆ. ಭದ್ರತಾ ಲೋಪದಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‍ನ ಫ್ಲೈಓವರ್‍ನಲ್ಲಿ ಸುಮಾರು 20 ನಿಮಿಷಗಳ ಕಾಲ ಸಿಲುಕಿಕೊಂಡಿದ್ದರು. ಬಳಿಕ ಬಟಿಂಡಾಕ್ಕೆ ಮರಳಿದ್ದರು.