ಸಿದ್ದರಾಮಯ್ಯ ಧಮ್ ಇದ್ರೆ ಹಿಂದೂ ರಾಷ್ಟ್ರ ಆಗೋದನ್ನ ತಡೆಯಲಿ: ಸಂಸದ ಅನಂತಕುಮಾರ್ ಹೆಗಡೆ

Public TV
2 Min Read
ananth kumar hegade

ಕಾರವಾರ: ಸಿದ್ದರಾಮಯ್ಯನವರಿಗೆ (Siddaramaiah) ಧಮ್ ಇದ್ರೆ ಹಿಂದೂ ರಾಷ್ಟ್ರ ಆಗೋದನ್ನ ತಡೆಯಲಿ. ಹಿಜಬ್‌ನ ಹಿಂದೆ ತಿರುಗುವ ಈ ಸರ್ಕಾರಕ್ಕೆ ಹೆಚ್ಚು ದಿನ ಉಳಿಗಾಲವಿಲ್ಲ. ಸಿದ್ದರಾಮಯ್ಯನ ಸರ್ಕಾರ ಹುಚ್ಚು ಮಹಮ್ಮದ್‌ನ ಸರ್ಕಾರ ಎಂದು ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ (Ananth Kumar Hegade) ಕಿಡಿಕಾರಿದ್ದಾರೆ.

ಶಿರಸಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತರ ವೋಟುಗಳು ಇಲ್ಲದೇ ಕಾಂಗ್ರೆಸ್ ಬದುಕಲು ಸಾಧ್ಯವಿಲ್ಲ. ಯಾವತ್ತೂ ಕಾಂಗ್ರೆಸ್ ಬಹುಸಂಖ್ಯಾತರ ರಾಜಕಾರಣ ಮಾಡಿಲ್ಲ. ಮನಸ್ಸಿಗೆ ಬಂದಂತೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ ಪೂಜಾ ಗಾಂಧಿ ದಂಪತಿ

siddaramaiah 1

ಈ ರಾಜ್ಯದ ಜನತೆ ತೆಗೆದಿಟ್ಟ ವ್ಯಕ್ತಿ ಟಿಪ್ಪು. ಈ ರಾಜ್ಯವನ್ನು ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ತೊಂದರೆಗೀಡು ಮಾಡಿದ ವ್ಯಕ್ತಿ. ಅವನ ಹೆಸರನ್ನೇ ತೆಗದುಕೊಂಡು ಕಾಂಗ್ರೆಸ್ ರಾಜಕಾರಣ ಮಾಡುತ್ತೆ ಎಂದರೇ ಕಾಂಗ್ರೆಸ್‌ಗೆ ಮುಂದಿನ ದಿನ ಜನತೆ ಹೇಗೆ ಉತ್ತರ ಕೊಡುತ್ತಾರೆ ಎಂಬುದನ್ನು ಯೋಚನೆ ಮಾಡಬೇಕು ಎಂದು ತಿಳಿಸಿದ್ದಾರೆ.

ಹಿಜಬ್ ವಿಷಯದಲ್ಲಿ ಸಿದ್ದರಾಮಯ್ಯ ಅವರ, ಯಾರು ಬೇಕಾದ್ರು ಏನು ಬೇಕಾದ್ರು ಡ್ರೆಸ್ ಹಾಕಿಕೊಂಡು ಹೋಗಬಹುದು ಎಂಬ ಹೇಳಿಕೆ ಮುಂದಿನ ದಿನ ಆತಂಕಕಾರಿ ಬೆಳವಣಿಗೆಗೆ ಕಾರಣ ಆಗುತ್ತೆ. ನಮ್ಮವರು ಕೇಸರಿ ಶಾಲು ಹಾಕಿಕೊಂಡು ಹೋಗ್ತಾರೆ. ಅವರು ಹಿಜಬ್ ಹಾಕಿಕೊಂಡು ಹೋಗ್ತಾರೆ. ಒಂದು ಚೌಕಟ್ಟಿನ ಕಲ್ಪನೆ ಸರ್ಕಾರಕ್ಕೆ ಇಲ್ಲಾ ಎಂದಾದರೇ ಸರ್ಕಾರ ಇದೆ ಎಂದು ಅನಿಸುವುದಿಲ್ಲ. ಸಿದ್ದರಾಮಯ್ಯನವರಿಗೆ ಧಮ್‌ ಇದ್ರೆ ಹಿಂದೂ ರಾಷ್ಟ್ರ ಆಗೋದನ್ನ ತಡೆಯಲಿ ಎಂದು ಸವಾಲು ಹಾಕಿದ್ದಾರೆ. ಇದನ್ನೂ ಓದಿ: ಬೈರತಿ ಸುರೇಶ್‌ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ

ಸಿದ್ದರಾಮಯ್ಯನ ದುರಂಹಕಾರಿ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ. ಕರ್ನಾಟಕದಲ್ಲಿ ಹಿಂದೂ ವಿರೋಧಿ ಸರ್ಕಾರ ಇರಲು ಸಾಧ್ಯವೇ ಇಲ್ಲ. ಕಾಂಗ್ರೆಸ್‌ನವರು ಬದುಕಬೇಕು ಎಂದರೆ ಮುಸ್ಲಿಮರ ಹಿಜಬ್‌ನ್ನು ಹಿಡಿದುಕೊಂಡೇ ವೋಟು ತಗೋಬೇಕು. ಹಿಜಬ್‌ನ ಹಿಂದೆ ತಿರುಗುವ ಈ ಸರ್ಕಾರಕ್ಕೆ ಹೆಚ್ಚು ದಿನ ಉಳಿಗಾಲವಿಲ್ಲ. ಕರ್ನಾಟಕದಲ್ಲಿ ಮುಂದಿನ ದಿನದಲ್ಲಿ ಬಿಜೆಪಿ ಬರುತ್ತದೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಯನ್ನು ಖಂಡಿಸಿದ ಅವರು, ಆರ್ಥಿಕ ಸುಭದ್ರತೆಯ ಕಲ್ಪನೆಯೇ ಇಲ್ಲದಂಥ ಕೆಲವರು ಮಾಡಿದಂತಹ ಉಪದ್ರವ ಇದು. ಜನರಿಗೂ ಸಹ ಇದು ಬೇಕಾಗಿಲ್ಲ. ಇದರ ಪರಿಣಾಮ ಅಭಿವೃದ್ಧಿಗೆ ಹಣವಿಲ್ಲ. ಸಾಲ ತಂದು ಈ ಸರ್ಕಾರ ಫ್ರೀ ಬೀಸ್ ಕೊಟ್ಟಿರುವುದು ಹುಚ್ಚು ಮಹಮ್ಮದ್‌ನ ಸರ್ಕಾರವಾಗಿದೆ. ರಾಮಮಂದಿರ ಉದ್ಘಾಟನೆ ಆಗುತ್ತಿರುವುದು ಇದು ಹಿಂದೂ ಸಮಾಜದ ವಿಜಯ. ಇದು ಹಿಂದೂ ಸಮಾಜದ ನಿರ್ಮಾಣದ ಮೊದಲ ಹೆಜ್ಜೆಯ ಗುರುತು ಎಂದಿದ್ದಾರೆ. ಇದನ್ನೂ ಓದಿ: ಕಲುಷಿತ ಕಾಂಗ್ರೆಸ್‌ಗೆ ಹಿಂದುತ್ವ ರುಚಿಸಲ್ಲ, ವಿದೇಶಿ ಜೀನ್ಸ್‌ ಎಂದೂ ಭಾರತೀಯತೆಯನ್ನು ಒಪ್ಪಲ್ಲ: ಜೆಡಿಎಸ್‌ ಕಿಡಿ

Share This Article