ಪ್ರಜಾಪ್ರಭುತ್ವಕ್ಕೆ ವಿರೋಧ ಪಕ್ಷ ಬೇಕು, ದೇಶದ್ರೋಹಿಗಳ ವಿರೋಧ ಪಕ್ಷವಲ್ಲ: ಅನಂತ್ ಕುಮಾರ್ ಹೆಗಡೆ

Public TV
1 Min Read
ANANT KUMAR HEGDE 1

ಕಾರವಾರ: ಪ್ರಜಾಪ್ರಭುತ್ವಕ್ಕೆ ವಿರೋಧ ಪಕ್ಷ ಬೇಕೇ ಹೊರತು ದೇಶದ್ರೋಹಿಗಳ ವಿರೋಧ ಪಕ್ಷವಲ್ಲ ಎಂದು ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ (Anant Kumar Hegade) ಕಾಂಗ್ರೆಸ್ (Congress) ವಿರುದ್ಧ ಕಿಡಿಕಾರಿದ್ದಾರೆ.

ಇಂದು ಸಿದ್ದಾಪುರ ತಾಲೂಕಿನ ಕಾನಸೂರಿನಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲಾ ಭಗವಂತನ ಇಚ್ಛೆ. ಇವತ್ತು ದೇಶದಲ್ಲಿ ಏನು ನಡೆಯುತ್ತಿದೆಯೋ ಅವೆಲ್ಲವೂ ಭಗವಂತನ ಇಚ್ಛೆ. ನಾವು ತೀರ್ಮಾನ ಮಾಡಿದ್ದೇನೂ ಇಲ್ಲ, ಜಗತ್ತಿಗೆ ಈ ಭಾರತ ಬೇಕು. ದೇಶಕ್ಕೆ ಬಿಜೆಪಿ (BJP) ಬೇಕು ಎಂದರು.

ಒಮ್ಮೆ ಗೆದ್ದರೆ ಸಾಕಾಗೋದಿಲ್ಲ ಅಂತಿಮದ ತನಕ ನಾವೇ ಗೆಲ್ಲುತ್ತಿರಬೇಕು. ಏನದು ಅಂತಿಮ ಗೆಲುವು ಎಂದರೆ ನಮ್ಮ ಗೆಲುವು, ನಮ್ಮ ಗುರಿ ಹಿಂದೂರಾಷ್ಟ್ರ ಎಂದ ಅವರು ಮುಂದೆ ಎಲ್ಲವೂ ಸರಿಹೋಗುತ್ತದೆ. ಜಾತಿ ಧರ್ಮ ಅದು ಇದು, ವ್ಯವಸ್ಥೆ ಸಹ ಸರಿ ಹೋಗುತ್ತೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.  ಇದನ್ನೂ ಓದಿ: ಅನಂತ್‌ಕುಮಾರ್ ಹೆಗಡೆ ಒಬ್ಬ ಹುಚ್ಚ: ಮಧು ಬಂಗಾರಪ್ಪ

ಪ್ರಜಾಪ್ರಭುತ್ವಕ್ಕೆ ವಿರೋಧ ಪಕ್ಷ ಬೇಕು, ದೇಶದ್ರೋಹಿಗಳ ವಿರೋಧ ಪಕ್ಷವಲ್ಲ. ಲಾಲ್ ಬಹದ್ದೂರ್ ಶಾಸ್ತ್ರಿ ಕೊಲೆ ನಂತರ 15 ದಿವಸದ ನಂತರ ಜಹಂಗೀರ್ ಬಾಬ ಹತ್ಯೆಯಾಯಿತು. ಸಾರಾಬಾಯಿ ಕೊಲೆಯಾಯಿತು. ಇದ್ಯಾವುದೂ ಸಾವಲ್ಲ, ನನ್ನ ಶಬ್ಧದಲ್ಲಿ ಸ್ಪಷ್ಟತೆ ಇದೆ. ಇಂತಹ ಘಟನೆಗಳು ಸರಣಿ ಸರಣಿಯಲ್ಲಿ ನಮ್ಮ ದೇಶದಲ್ಲಿ ನಡೆದಿದೆ. ಈ ದೇಶವನ್ನು ಮುಗಿಸಬೇಕು ಎಂದು ಸಂಚು ನಡೆದಿತ್ತು ಎಂದು ಹಿಂದಿನ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

Share This Article