ಭೋಪಾಲ್: ಪಡಿತರ ಅಂಗಡಿಯಲ್ಲಿ ಸೀಮೆ ಎಣ್ಣೆ ವಿತರಿಸುತ್ತಿರೋ ಸಂದರ್ಭದಲ್ಲಿ ಸೀಮೆ ಎಣ್ಣೆ ಡ್ರಮ್ ಗೆ ಆಕಸ್ಮಿಕ ಬೆಂಕಿ ಹತ್ತಿಕೊಂಡ ಪರಿಣಾಮ 13ಕ್ಕೂ ಹೆಚ್ಚು ಮಂದಿ ಸಜೀವ ದಹನವಾದ ಘಟನೆ ಮಧ್ಯಪ್ರದೇಶದ ಛಿಂದ್ವಾರ ಜಿಲ್ಲೆಯಲ್ಲಿ ಶುಕ್ರವಾರ ಸಂಜೆ ನಡೆದಿದೆ.
Advertisement
ಘಟನೆ ವಿವರ: ಮಧ್ಯಪ್ರದೇಶದ ಛಿಂದ್ವಾರ ಜಿಲ್ಲೆಯ ಬಾರ್ಗಿ ಗ್ರಾಮದ ಸಹಕಾರಿ ಸೊಸೈಟಿಯಲ್ಲಿ ಸೀಮೆಎಣ್ಣೆ ಸೇರಿದಂತೆ ಪಡಿತರ ಹಂಚಿಕೆ ಮಾಡೋ ವೇಳೆ ಸುಮಾರು 50 ಮಂದಿ ಗ್ರಾಮಸ್ಥರು ಸಾಲಲ್ಲಿ ನಿಂತಿದ್ರು. ಈ ವೇಳೆ 100 ಲೀಟರ್ ಸೀಮೆಎಣ್ಣೆ ಡ್ರಮ್‍ಗೆ ಆಕಸ್ಮಿಕ ಬೆಂಕಿ ತಗುಲಿ ಈ ಅನಾಹುತ ಸಂಭವಿಸಿದೆ. ಡ್ರಮ್‍ನಲ್ಲಿ ಅರ್ಧ ಮಾತ್ರ ಸೀಮೆಎಣ್ಣೆ ಇದ್ದದ್ರಿಂದ ಸಾವಿನ ಸಂಖ್ಯೆ ಕಡಿಮೆಯಾಗಿದೆ ಅಂತಾ ಹೇಳಲಾಗುತ್ತಿದೆ.
Advertisement
Advertisement
ಸ್ಫೋಟ ನಡೆದಾಗ ಸೊಸೈಟಿಯ ಒಳಗೆ ಸುಮಾರು 25 ಮಂದಿ ಇದ್ರು. ಅದ್ರಲ್ಲಿ 13 ಮಂದಿ ಸಜೀವ ದಹನವಾಗಿದ್ದಾರೆ. ಘಟನೆಯಲ್ಲಿ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಗ್ರಾಮಸ್ಥರು 18 ಮಂದಿ ಸತ್ತಿದ್ದಾರೆ ಅಂತ ಹೇಳಿದ್ರೆ, 14 ಮಂದಿ ಮೃತಪಟ್ಟಿರೋದಾಗಿ ಡಿಐಜಿ ಹೇಳಿದ್ದಾರೆ.
Advertisement
ಪ್ರಧಾನಿ ಸಂತಾಪ: ಘಟನೆಯ ಬಳಿಕ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ. `ಘಟನೆಯಲ್ಲಿ ಗಾಯಗೊಂಡವರು ಶೀಘ್ರ ಗುಣಮುಖರಾಗುವಂತೆ ಆ ದೇವರಲ್ಲಿ ಪ್ರಾರ್ಥಿಸುತ್ತೇನೆ. ಘಟನೆಯ ಕುರಿತು ರಾಜ್ಯ ಸರ್ಕಾರ ಕ್ರಮಕೈಗೊಳ್ಳಲಿ ಅಂತಾ ತಿಳಿಸಿದ್ದಾರೆ.
ಪರಿಹಾರ ಘೋಷಣೆ: ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಮೃತರ ಕುಟುಂಬಗಳಿಗೆ 4 ಲಕ್ಷ ರೂ. ಪರಿಹಾರ ಧನ ಘೋಷಿಸಿದ್ದಾರೆ. ಸೀಮೆ ಎಣ್ಣೆ ಹಂಚಿತ್ತಿರೋ ಸಂದರ್ಭದಲ್ಲಿ ನಡೆದ ಈ ದುರ್ಘಟನೆಯಿಂದ ನನಗೆ ತುಂಬಾ ನೋವಾಗಿದೆ. ಮೃತ ಕುಟುಂಬಗಳಿಗೆ ದುಃಖ ಭರಿಸುವ ಹಾಗೂ ಘಟನೆಯಲ್ಲಿ ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಅಂತಾ ದೇವರಲ್ಲಿ ಪ್ರಾರ್ಥಿಸುವುದಾಗಿ ಚೌಹಾಣ್ ಟ್ವೀಟ್ ಮಾಡಿದ್ದಾರೆ.
छिंदवाड़ा के बारगी में हुई दुर्घटना में हताहत हुए दिवंगत आत्माओं की शांति और घायलों के शीघ्र स्वस्थ होने की प्रार्थना करता हूँ।
— ShivrajSingh Chouhan (@ChouhanShivraj) April 21, 2017
छिंदवाड़ा के बारगी में हुई दुर्घटना में मृतकों के परिजनों को 4-4 लाख और गंभीर घायलों को
50-50 हज़ार रुपये सहायता राशि प्रदान की जायेगी।
— ShivrajSingh Chouhan (@ChouhanShivraj) April 21, 2017
छिंदवाड़ा के बारगी में हुई इस दुर्घटना में हताहत हुए परिजनों को अंतिम संस्कार के लिए 10
हज़ार रुपये अतिरिक्त सहायता राशि दी जायेगी।
— ShivrajSingh Chouhan (@ChouhanShivraj) April 21, 2017