ಚಲಿಸುತ್ತಿದ್ದ ವ್ಯಾಗನಾರ್ ಕಾರ್‍ನಲ್ಲಿ ಬೆಂಕಿ- ನಾಲ್ವರು ಪ್ರಾಣಾಪಾಯದಿಂದ ಪಾರು

Public TV
0 Min Read
rcr fire 1

ರಾಯಚೂರು: ಇಲ್ಲಿನ ಚಿಕ್ಕಸುಗೂರು ಕ್ರಾಸ್ ಬಳಿ ಚಲಿಸುತ್ತಿದ್ದ ಮಾರುತಿ ವ್ಯಾಗನಾರ್ ಕಾರು ಏಕಾಏಕಿ ಹೊತ್ತಿ ಉರಿದಿದೆ.

ಅದೃಷ್ಟವಶಾತ್ ವಾಹನದಲ್ಲಿದ್ದ ನಾಲ್ಕು ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಂಜಳ್ಳಿ ಗ್ರಾಮದ ಬಾಷಾ ಎನ್ನುವರಿಗೆ ಸೇರಿದ ವಾಹನ ಅಗ್ನಿ ಅವಘಡದಿಂದ ಸಂಪೂರ್ಣ ಭಸ್ಮವಾಗಿದೆ.

rcr fire 4

ರಾಯಚೂರಿನಿಂದ ಶಕ್ತಿನಗರ ಕಡೆಗೆ ಹೊರಟಿದ್ದ ವಾಹನ ಚಲಿಸುತ್ತಿದ್ದಾಗಲೇ ಪೆಟ್ರೋಲ್ ಸೋರಿಕೆಯಿಂದ ಬೆಂಕಿ ಕಾಣಿಸಿಕೊಂಡಿತ್ತು. ಇದನ್ನ ಅರಿತು ವಾಹನದಲ್ಲಿದ್ದ ನಾಲ್ವರು ಹೊರಬಂದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಡು ರಸ್ತೆಯಲ್ಲೆ ಕಾರು ಹೊತ್ತಿ ಉರಿದಿದ್ದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಠಿಯಾಗಿತ್ತು.

rcr fire 2

ಘಟನೆ ಹಿನ್ನೆಲೆಯಲ್ಲಿ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

rcr fire 3

Share This Article
Leave a Comment

Leave a Reply

Your email address will not be published. Required fields are marked *