ನಾಳೆ ಮಧ್ಯರಾತ್ರಿ ಕನ್ನಡದ ಎರಡು ಸಿನಿಮಾಗಳು ಶಿವರಾತ್ರಿಗಾಗಿ (Shivratri) ಕಾಯುತ್ತಿವೆ. ಈ ಬಾರಿಯ ಜಾಗರಣೆಯನ್ನು ಸಿನಿಮಾ ನೋಡುವ ಮೂಲಕ ಕಳೆಯಲಿದ್ದಾರೆ ರಿಷಬ್ (Rishabh Shetty) ಮತ್ತು ಪುನೀತ್ ರಾಜ್ ಕುಮಾರ್ (Puneeth Rajkumar) ಅಭಿಮಾನಿಗಳು. ಹೈದರಾಬಾದ್ ನ ಸಪ್ತಗಿರಿ ಚಿತ್ರಮಂದಿರದಲ್ಲಿ ಫೆ.19 ರಂದು ಬೆಳಗ್ಗೆ 12 ಗಂಟೆಗೆ ಮತ್ತು 3 ಗಂಟೆಗೆ ಕಾಂತಾರ (Kantara) ಸಿನಿಮಾ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಈಗಾಗಲೇ ನೂರಾರು ಕೋಟಿ ಗಳಿಸಿರುವ ಈ ಸಿನಿಮಾ, ಕಿರುತೆರೆಯಲ್ಲೂ ಪ್ರಸಾರವಾಗಿದೆ. ಓಟಿಟಿಯಲ್ಲೂ ಇದೆ. ಆದರೂ, ಶಿವರಾತ್ರಿಗಾಗಿ ಸ್ಪೆಷಲ್ ಶೋ ಆಯೋಜನೆ ಮಾಡಲಾಗಿದೆ.
Advertisement
ಪುನೀತ್ ರಾಜಕುಮಾರ್ ನಟನೆಯ ಸೂಪರ್ ಹಿಟ್ ಸಿನಿಮಾಗಳಲ್ಲಿ ‘ರಾಜಕುಮಾರ’ (Rajkumar) ಕೂಡ ಒಂದು. ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಮೂಡಿ ಬಂದ ಈ ಸಿನಿಮಾ ಹಲವಾರು ದಾಖಲೆಗಳನ್ನು ಬರೆದಿದೆ. ಶತದಿನೋತ್ಸವದ ಜೊತೆಗೆ ಕನ್ನಡ ಸಿನಿಮಾ ಇತಿಹಾಸದಲ್ಲೇ ಮೊದಲ ಬಾರಿಗೆ 75 ಕೋಟಿ ರೂಪಾಯಿ ಬಾಚಿದ ಸಿನಿಮಾ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ. ಶಿವರಾತ್ರಿಗಾಗಿ ಈ ಸಿನಿಮಾವನ್ನು ಮತ್ತೆ ಮರುಬಿಡುಗಡೆ ಮಾಡಲಾಗುತ್ತಿದೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ `ಜೊತೆ ಜೊತೆಯಲಿ’ ಶಿಲ್ಪಾ ಅಯ್ಯರ್
Advertisement
ಶಿವರಾತ್ರಿಯನ್ನು ವಿಶೇಷವಾಗಿ ಆಚರಿಸುವುದಕ್ಕಾಗಿಯೇ ಫೆಬ್ರವರಿ 19ರಂದು ಬೆಂಗಳೂರಿನ ಪೀಣ್ಯ ಏರಿಯಾದ ಭಾರತಿ ಚಿತ್ರಮಂದಿರದಲ್ಲಿ ಮಧ್ಯರಾತ್ರಿ 12.30ಕ್ಕೆ ಈ ವಿಶೇಷ ಪ್ರದರ್ಶನವನ್ನು ಆಯೋಜನೆ ಮಾಡಲಾಗಿದೆ. ಶಿವರಾತ್ರಿಯ ಜಾಗರಣೆ ಮುಗಿಸಿಕೊಂಡು, ರಾಜಕುಮಾರ ಸಿನಿಮಾ ನೋಡಬಹುದು ಎಂದಿದ್ದಾರೆ ಆಯೋಜಕರು.
Advertisement
Advertisement
ಶಿವರಾತ್ರಿಗಾಗಿ ನಗೆಜಾಗರಣೆ, ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುವುದು ಸಾಮಾನ್ಯವಾಗಿತ್ತು. ಆದರೆ, ಈ ಬಾರಿ ವಿಶೇಷವಾಗಿ ಸಿನಿಮಾ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಈ ಮೂಲಕ ಪುನೀತ್ ರಾಜ್ ಕುಮಾರ್ ಅವರಿಗೆ ನಮನ ಸಲ್ಲಿಸುವ ಉದ್ದೇಶವೂ ಇದರ ಹಿಂದಿದೆಯಂತೆ. ಈಗಾಗಲೇ ಟಿಕೆಟ್ ಬುಕ್ಕಿಂಗ್ ಅನ್ನು ಥಿಯೇಟರ್ ಮಾಲೀಕರು ಆರಂಭಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k