ಸಿನಿಮಾಟೋಗ್ರಾಫ್ (ತಿದ್ದುಪಡಿ) ಮಸೂದೆ 2023ಕ್ಕೆ (Cinematograph Bill) ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. ಇದರಿಂದಾಗಿ ಸಿನಿಮಾಗಳ ಪೈರಸಿ (Piracy) ತಡೆಗಟ್ಟುವಲ್ಲಿ ಈ ಮಸೂದೆ ರಕ್ಷಾಕವಚವಾಗಿ ನಿಲ್ಲಲಿದೆ. ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್ (Anurag Thakur), ‘ಇಂಟರ್ ನೆಟ್ ನಲ್ಲಿ ಸಿನಿಮಾ ಪೈರಸಿ ಪಸರಿಸುವುದನ್ನು ಈ ಮಸೂದೆ ಕಟ್ಟುನಿಟ್ಟಾಗಿ ತಡೆಗಟ್ಟುತ್ತದೆ’ ಎಂದಿದ್ದಾರೆ.
Advertisement
ಅಷ್ಟೇ ಅಲ್ಲದೇ ಸೆನ್ಸಾರ್ (Censorship) ಮಂಡಳಿಯು ಕೊಡುವ ಚಲನಚಿತ್ರ ಪ್ರಮಾಣಪತ್ರದಲ್ಲೂ ಬದಲಾವಣೆ ಆಗಲಿದೆ. ಈಗಾಗಲೇ ಯಾವ ವಯಸ್ಸಿನವರು ಎಂತಹ ಸಿನಿಮಾ ನೋಡಬಹುದು ಎನ್ನುವುದಕ್ಕೆ ಯುಎ, ಯು, ಎ, ಸಿ ಪ್ರಮಾಣಪತ್ರವನ್ನು ಕೊಡಲಾಗುತ್ತಿದೆ. ಈ ಪ್ರಮಾಣ ಪತ್ರದಲ್ಲಿ ಬದಲಾವಣೆ ಆಗಲಿದೆ ಎನ್ನುತ್ತದೆ ಮಸೂದೆ. ಇದನ್ನೂ ಓದಿ:ಲಿಫ್ಟ್‌ನಲ್ಲಿ ಪತಿ ನಿಕ್ ಜೋನಸ್ ಜೊತೆ ಪ್ರಿಯಾಂಕಾ ಚೋಪ್ರಾ ರೊಮ್ಯಾನ್ಸ್
Advertisement
Advertisement
ಈ ಮಸೂದೆಯನ್ನು ಮುಂದಿನ ಸಂಸತ್ ಕಲಾಪದ ವೇಳೆ ಮಂಡಿಸಲು ಸಿದ್ಧತೆ ಮಾಡಿಕೊಂಡಿದ್ದು, ಯಾವುದೇ ವಿವಾದಗಳು ಇಲ್ಲದೇ ಈ ಮಸೂದೆ ಪಾಸಾಗಲಿದೆ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ ಅನುರಾಗ್ ಠಾಕೂರ್. ವಯಸ್ಸಿನ ಆಧಾರದ ಮೇಲೆ ಸಿನಿಮಾಗಳನ್ನು ವಿಂಗಡಿಸಿ ಎನ್ನುವ ಬೇಡಿಕೆ ತಮ್ಮುಂದೆ ಇದ್ದ ಕಾರಣಕ್ಕಾಗಿ ಮಸೂದೆ ತರಲಾಗಿದೆ ಎಂದಿದ್ದಾರೆ.