ಮುಂಬರುವ 2023ರ ವಿಧಾನಸಭಾ ಚುನಾವಣೆಗೆ (Politics) ಮತ್ತೊಬ್ಬ ಸಿನಿಮಾ ಸ್ಟಾರ್ ಎಂಟ್ರಿ ಕೊಡುವ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಈ ನಟ ಹಾಲಿ ಶಾಸಕ ಮುನಿರತ್ನ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಲಿದ್ದಾರೆ ಎನ್ನುವುದು ಸಿಕ್ಕಿರುವ ಮಾಹಿತಿ. ಈ ಸ್ಟಾರ್ ಎಂಟ್ರಿಯಿಂದಾಗಿ ಯಾವ ಪಕ್ಷಕ್ಕೆ ಲಾಭ ಯಾವ ಪಕ್ಷಕ್ಕೆ ನಷ್ಟ ಎನ್ನುವ ಕುರಿತು ಚರ್ಚೆ ಆಗುತ್ತಿದೆ.
Advertisement
ಸ್ವತಂತ್ರ ಅಭ್ಯರ್ಥಿಯಾಗಿ ಈ ನಟ ಕಣಕ್ಕಿಳಿಯುವ ಸಾಧ್ಯತೆ ಇದ್ದು, ಈ ಸ್ಟಾರ್ ನಟನ ಹಿಂದೆ ತೆರೆ ಮರೆಯಲ್ಲಿ ರಾಜಕೀಯ ದಿಗ್ಗಜರು ಇದ್ದಾರೆ ಎಂದು ಹೇಳಲಾಗುತ್ತಿದೆ. ಆ ಸ್ಟಾರ್ ನಟ ಬೇರೆ ಯಾರೂ ಅಲ್ಲ ಚೇತನ್ ಚಂದ್ರ (Chetan Chandra). ಬರೋಬ್ಬರಿ 15 ವರ್ಷದಿಂದ ಕನ್ನಡ ಚಿತ್ರರಂಗದಲ್ಲಿರೋ ಚೇತನ್ ಚಂದ್ರ. ಪಿಯುಸಿ, ಪ್ರೇಮಿಸಂ, ರಾಜಧಾನಿ, ಕುಂಬರಾಶಿ, ಜಾತ್ರೆ, ಹುಚ್ಚುಡುಗ್ರು, ಸಂಯುಕ್ತ 2, ಪ್ಲಸ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಾಯಕರಾಗಿ ನಟಿಸಿದ್ದಾರೆ. ಇದನ್ನೂ ಓದಿ: ತೆರೆಗೆ ಅಪ್ಪಳಿಸಲು ಸಜ್ಜಾದ ರಕ್ಷಿತ್ ನಟನೆಯ `ಸಪ್ತಸಾಗರದಾಚೆ ಎಲ್ಲೋ’ ಚಿತ್ರ
Advertisement
Advertisement
ಚೇತನ್ ಚಂದ್ರ ಅಭಿನಯದ ಇತ್ತೀಚಿನ ಚಿತ್ರ ‘ಪ್ರಭುತ್ವ’ ಚಿತ್ರ ಇದೀಗ ಬಿಡುಗಡೆಗೆ ಸಜ್ಜಾಗಿದೆ. ಇಂದಿನ ರಾಜಕೀಯ ಸ್ಥಿತಿ, ಸರ್ಕಾರದ ವ್ಯವಸ್ಥೆ ಬಗ್ಗೆ ಮಾತನಾಡೋ ಸಿನಿಮಾ ಇದಾಗಿದ್ದು, ಇತ್ತೀಚೆಗಷ್ಟೆ ಟ್ರೈಲರ್ ಬಿಡುಗಡೆ ಮಾಡಲಾಗಿತ್ತು. ಇದ್ರಲ್ಲಿ ಚೇತನ್ ಕ್ರಾಂತಿಕಾರಿ ಯುವಕನಾಗಿ ಕಾಣಿಸಿಕೊಂಡಿದ್ದಾರೆ. ವ್ಯವಸ್ಥೆ ಮತ್ತು ಮತದಾನದ ಬಗ್ಗೆ ಹೊಡೆದಿರೋ ಡೈಲಾಗ್ಸ್ ಸಿನಿಮಾದ ಹೈಲೈಟ್ ಆಗಿದೆ.
Advertisement
ಸ್ಥಿತಿವಂತ ಹಿನ್ನೆಲೆ ಇರೋ ಚೇತನ್ ಚಂದ್ರಗೆ ಈ ಹಿಂದೆಯೇ ಕಾರ್ಪೋರೇಟರ್ ಎಲೆಕ್ಷನ್ಗೆ ಆಫರ್ ಬಂದಿತ್ತು. ಆದರೆ, ಮುಂದಾಲೋಚನೆ ದೊಡ್ಡದಿಟ್ಟುಕೊಂಡಿದ್ದ ಅವರು ಈ ಬಾರಿ ಚುನಾವಣೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡೋ ಯೋಜನೆಯನ್ನು ಐದು ವರ್ಷದ ಹಿಂದೆಯೇ ರೂಪಿಸಿದ್ದರಂತೆ. ಅದಕ್ಕೆ ತಕ್ಕಂತೆ ಇದೀಗ ಅದು ಚಾಲ್ತಿಗೆ ಬಂದಿದೆ. ಅದಕ್ಕೆ ಕಾಕತಾಳೀಯ ಎಂಬಂತೆ ಈಗ ಪ್ರಭುತ್ವ ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿದೆ.
ಎಲೆಕ್ಷನ್ಗೂ ಮೊದ್ಲೇ ಪ್ರಭುತ್ವ ಸಿನಿಮಾ ರಿಲೀಸ್ ಆಗೋದು ಕನ್ಫರ್ಮ್ ಆಗಿದ್ದು, ಈ ಸಿನಿಮಾ ಬಂದ್ಮೇಲೆ ಚೇತನ್ ಚಂದ್ರ ಸಿನಿಮಾ ನಸೀಬು ಏನಾಗುತ್ತೋ ಗೊತ್ತಿಲ್ಲ ಆದ್ರೆ ರಾಜಕೀಯವಾಗಿ ಹಣೆಬರಹ ಬದಲಾಗೋ ಎಲ್ಲಾ ಸೂಚನೆ ಸಿಕ್ತಿದೆ. ಇದಿಷ್ಟು ತೆರೆಮರೆಯಲ್ಲಿ ಸಿಕ್ಕಿರೋ ಮಾಹಿತಿ ಅಧಿಕೃತವಾಗಿ ಸದ್ಯದಲ್ಲೇ ಚೇತನ್ ಚಂದ್ರ ಈ ವಿಚಾರವನ್ನ ಬಹಿರಂಗ ಪಡಿಸಲಿದ್ದಾರಂತೆ.