ಟಿಪ್ಪು ಸುಲ್ತಾನ್ ಕುರಿತು ಸಿನಿಮಾ ಘೋಷಣೆ : 40 ಲಕ್ಷ ಹಿಂದೂಗಳ ಮತಾಂತರ ಕಥೆ ವ್ಯಥೆ

Public TV
1 Min Read
tipu sultan 4

ರ್ನಾಟಕದಲ್ಲಿ ಟಿಪ್ಪು ಸುಲ್ತಾನ್ (Tipu Sultan) ಕುರಿತಾಗಿ ಪರ ವಿರೋಧದ ಚರ್ಚೆ ನಡೆಯುತ್ತಲೇ ಇದೆ. ಕಾಂಗ್ರೆಸ್ ಪಕ್ಷ ಮತ್ತು ಮುಸ್ಲಿಂ ಪರ ಸಂಘಟನೆಗಳು ಟಿಪ್ಪುವನ್ನು ಸ್ವಾತಂತ್ರ್ಯ ಹೋರಾಟಗಾರ, ಅದ್ಭುತ ಆಡಳಿತಗಾರ ಎಂದು ಬಣ್ಣಿಸುತ್ತಿದ್ದರೆ, ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳು ಟಿಪ್ಪುವನ್ನು ಮತಾಂಧ ಎಂದು ಬಿಂಬಿಸುತ್ತಿವೆ. ಈ ವಾದ ವಿವಾದ ಹಲವು ವರ್ಷಗಳಿಂದ ನಡೆಯುತ್ತಲೇ ಇದೆ. ಈ ಸಮಯದಲ್ಲಿ ಟಿಪ್ಪು ಕುರಿತಾಗಿ ಸಿನಿಮಾವೊಂದು (Cinema) ಮೂಡಿ ಬರುತ್ತಿದೆ.

tipu sultan 2

ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಈ ಸಿನಿಮಾ ನಿರ್ಮಾಣವಾಗಲಿದ್ದು, ಚಿತ್ರಕ್ಕೆ ‘ಟಿಪ್ಪು’ ಎಂದೇ ಹೆಸರಿಡಲಾಗಿದೆ. ಈಗಾಗಲೇ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿದ್ದು, ಈ ಮೋಷನ್ ಪೋಸ್ಟರ್ ವಿಡಿಯೋದಲ್ಲಿ ಹಲವಾರು ವಿಷಯಗಳನ್ನು ಹೇಳಲಾಗಿದೆ. ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಹೊತ್ತಿನಲ್ಲೇ ಈ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿದ್ದು ಅಚ್ಚರಿಗೆ ಕಾರಣವಾಗಿದೆ. ಇದನ್ನೂ ಓದಿ:ಮತ್ತೆ ಹಾಟ್ ಅವತಾರದಲ್ಲಿ ಕಾಣಿಸಿಕೊಂಡ ‘ಸೀತಾರಾಮಂ’ ನಟಿ

tipu sultan 1

ರಿಲೀಸ್ ಆಗಿರುವ ಮೋಷನ್ ಪೋಸ್ಟರ್ ನಲ್ಲಿ ‘8 ಸಾವಿರ ದೇವಾಲಯಗಳ ನಾಶ, 27 ಚರ್ಚ್‍ ಗಳ ಧ್ವಂಸ, 50 ಲಕ್ಷ ಹಿಂದೂಗಳ ಮತಾಂತರ, ಅಲ್ಲದೇ ಗೋಮಾಂಸ ತಿನ್ನುವಂತೆ ಒತ್ತಾಯ ಸೇರಿದಂತೆ ಹಲವು ವಿಚಾರಗಳನ್ನು ಹೇಳಲಾಗಿದೆ. ಟಿಪ್ಪು ಕಾಲದಲ್ಲೇ ಅತೀ ಹೆಚ್ಚು ಮತಾಂತರ ನಡೆದಿದೆ ಎಂದು ಬಿಂಬಿಸಲಾಗಿದೆ.

tipu sultan 3

ಪವನ್ ಶರ್ಮಾ (Pawan Sharma) ಎನ್ನುವವರು ಈ ಸಿನಮಾವನ್ನು ನಿರ್ದೇಶನ ಮಾಡುತ್ತಿದ್ದು,  ಈಗಾಗಲೇ ಟಿಪ್ಪು ಕುರಿತಾಗಿ ಅವರು ಸಂಶೋಧನೆಯನ್ನೂ ಮಾಡಿದ್ದಾರಂತೆ. ತಾರಾಗಣದ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳದ ಪವನ್, ಈ ಸಿನಿಮಾವನ್ನು ಈಗಾಗಲೇ ಸಾವರ್ಕರ್, ಅಟಲ್ ಸಿನಿಮಾವನ್ನು ಮಾಡಿದ್ದ ಸಂದೀಪ್ ಶರ್ಮಾ (Sandeep Sharma) ಇದರ ನಿರ್ಮಾಪಕರು.

Share This Article