Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮುಧೋಳ ಬಿಸಿಎಂ ಕಚೇರಿಯನ್ನು ತಾಲೂಕು ಆಡಳಿತ ಭವನಕ್ಕೆ ಸ್ಥಳಾಂತರಿಸಿ, ಇಲ್ಲವೇ ಬಂದ್ ಮಾಡಿ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bagalkot | ಮುಧೋಳ ಬಿಸಿಎಂ ಕಚೇರಿಯನ್ನು ತಾಲೂಕು ಆಡಳಿತ ಭವನಕ್ಕೆ ಸ್ಥಳಾಂತರಿಸಿ, ಇಲ್ಲವೇ ಬಂದ್ ಮಾಡಿ!

Bagalkot

ಮುಧೋಳ ಬಿಸಿಎಂ ಕಚೇರಿಯನ್ನು ತಾಲೂಕು ಆಡಳಿತ ಭವನಕ್ಕೆ ಸ್ಥಳಾಂತರಿಸಿ, ಇಲ್ಲವೇ ಬಂದ್ ಮಾಡಿ!

Public TV
Last updated: August 12, 2025 11:28 pm
Public TV
Share
2 Min Read
Move the Mudola BCM office to the Taluk Administration Building 2
SHARE

– ಮುಧೋಳ  ಹಿಂದುಳಿದ ವರ್ಗಗಳ ಕಲ್ಯಾಣ ಕಚೇರಿಗೆ ಬರುತ್ತಿಲ್ಲ ಜನ
– ನಗರದಿಂದ 3 ಕಿ.ಮೀ ದೂರದಲ್ಲಿದೆ ಆಫೀಸ್‌

ಬಾಗಲಕೋಟೆ: ಸರ್ಕಾರದ ಯೋಜನೆಗಳನ್ನು ಪಡೆಯಬೇಕು ಎನ್ನುವ ಕನಸು, ಆಸೆ ಎಲ್ಲ ಹಿಂದುಳಿದ ವರ್ಗದವರಿಗೂ ಇರುತ್ತದೆ. ಆದರೆ ಮೂರು ಮೈಲಿ ದೂರದಲ್ಲಿರುವ ಕಚೇರಿ ತಲುಪುವುದೇ ಹರಸಾಹಸ. ಕಚೇರಿ ಮೆಟ್ಟಿಲು ಹತ್ತುವುದೊರಳಗೆ ಸಾಕಪ್ಪ ಸಾಕು ಎನಿಸಿ ಬಿಡುತ್ತದೆ.

ಹೌದು, ಬಾಗಲಕೋಟೆ (Bagalkote) ಜಿಲ್ಲೆಯಲ್ಲಿ, ಹಿಂದುಳಿದ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿರುವ ಅದರಲ್ಲೂ ಹಿಂದುಳಿದವರಿಗಾಗಿ ಮೀಸಲಿರುವ ಹಿಂದುಳಿದ ವರ್ಗಗಳ ತಾಲೂಕ ಕಚೇರಿಯ ಕಥೆ-ವ್ಯಥೆ ಇದು. ಮುಧೋಳ (Mudhol) ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ (BCM Office) ಕಛೇರಿಯ ಸ್ಥಿತಿ ಇದು. ನಗರದ ಪ್ರಮುಖ ಜನ ವಸತಿ ಪ್ರದೇಶ, ಪ್ರಮುಖ ಬೀದಿಗಳಲ್ಲಿ ಇರಬೇಕಿದ್ದ ಇಲಾಖೆ ಕಚೇರಿ, ನಗರದಿಂದ ಬರೋಬ್ಬರಿ 3 ಕಿ.ಮೀ ದೂರದಲ್ಲಿದೆ. ಇದು ಸಾರ್ವಜನಿಕರಿಗೆ ವರದಾನ ಆಗುವ ಬದಲು ನತದೃಷ್ಟ ಇಲಾಖೆ ಎನ್ನುವ ಹಣೆಪಟ್ಟಿ ಕಟ್ಟಿಕೊಂಡಿದೆ.

ಅತೀ ಹೆಚ್ಚಿನ ಪ್ರಮಾಣದಲ್ಲಿ ಯೋಜನೆಗಳು ಇರುವುದೇ ಹಿಂದುಳಿದ ವರ್ಗಗಗಳ ಇಲಾಖೆಯಲ್ಲ. ಮುಖ್ಯವಾಗಿ ವಿದ್ಯಾರ್ಥಿಗಳ ಶಿಕ್ಷಣ, ವಸತಿ, ರೈತರಿಗೆ ಗಂಗಾ ಕಲ್ಯಾಣ ಸೇರಿ ಅನೇಕ ಯೋಜನೆಗಳು ಜಾರಿಯಲ್ಲಿವೆ. ಮುಧೋಳ ತಾಲೂಕಿನಲ್ಲಿ ಹತ್ತಾರು ಸರ್ಕಾರಿ ವಸತಿ ನಿಲಯಗಳು ಈ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಈವರೆಗೆ ಸ್ವಂತ ಜಾಗ, ಕಟ್ಟಡ ಹೊಂದಿಲ್ಲ. ಈ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ಹರಿಸಿಲ್ಲ ಎನ್ನುವುದೇ ದುರಂತದ ಸಂಗತಿ. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ರಹಸ್ಯ – 13ನೇ ಸ್ಥಳದಲ್ಲಿ ಮೂಳೆ ಸಿಗದೇ ಇದ್ರೆ ತನಿಖೆ ಸ್ಥಗಿತ?

Move the Mudola BCM office to the Taluk Administration Building 1 1

ಬೀಳಗಿ, ಗಲಗಲಿ ರಸ್ತೆ ಪಕ್ಕದ ಸೈಯದಸಾಬ ದರ್ಗಾ ಹಿಂಭಾಗದಲ್ಲಿರುವ ದೇವರಾಜ ಅರಸು ಭವನ ಕಟ್ಟಡದಲ್ಲಿ ಹಿಂದುಳಿದ ವರ್ಗಗಳ ಇಲಾಖೆ ಕಚೇರಿ ಕಾರ್ಯನಿರ್ವಹಿಸುತ್ತಿದೆ. ಅದು ಕೂಡ ಕಳಪೆ ಕಟ್ಟಡ ಎನ್ನುವುದು ಕಚೇರಿ ಒಳಗೆ ಕಾಲಿಟ್ಟರೆ ಸಾಕು ಗೋಡೆಗಳೇ ಸಾರಿ ಸಾರಿ ಹೇಳುತ್ತವೆ. ಈ ಕಚೇರಿ ತಲುಪಬೇಕಾದರೆ ಸ್ವಂತ ವಾಹನ ಖಂಡಿತ ಬೇಕು. ಇಲ್ಲವಾದಲ್ಲಿ ಕಾಲ್ನಡಿಗೆಯಲ್ಲಿ ಕನಿಷ್ಠ ಮೂರು ಕಿಲೋ ಮೀಟರ್ ನಡೆದೇ ಸಾಗಬೇಕು. ಕಚೇರಿ ತಲುಪಬೇಕಾದ್ರೆ ಸರ್ಕಾರಿ ಬಸ್, ವಾಹನದ ಸೌಲಭ್ಯ ಇಲ್ಲ. ಅದರಲ್ಲೂ ಗ್ರಾಮೀಣ ಪ್ರದೇಶದ ಜನರು ಈ ಕಚೇರಿಯನ್ನೇ ಅವಲಂಬಿಸಿದ್ದಾರೆ.

ಕಚೇರಿ ಸ್ಥಳ ಪತ್ತೆ ಮಾಡಲು ಪರದಾಡುವುದನ್ನು ನೋಡಿದರ ಅಯ್ಯೋ ಭಗವಂತ ಯಾಕ ಬೇಕು ಹರಸಾಹಸ ಅಂತ ಅನಿಸಿ ಬಿಡುತ್ತದೆ. ನಿರ್ಜನ ಪ್ರದೇಶವಾಗಿರುವುದರಿಂದ ಆಟೋ ಸಂಚಾರ ದುರ್ಲಭ. ಜನಸಂದಣಿ ಇಲ್ಲದಿರುವುದು ಮತ್ತು ಪಕ್ಕದಲ್ಲಿ ಸ್ಮಶಾನ, ಕಲ್ಲಿನ ಕಣಿವೆಗಳು ಇರುವುದರಿಂದ ಒಂಟಿಯಾಗಿ ಮಹಿಳೆಯರು, ವಯೋವೃದ್ಧರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕಚೇರಿಗೆ ಹೋಗಲು ಭಯ ಪಡುತ್ತಿದ್ದಾರೆ. ಕಚೇರಿ ಒಳಪ್ರವೇಶ ಮಾಡಲು ಅಂಗವಿಕಲರಿಗೆ ಬಹಳಷ್ಟು ತೊಂದರೆ ಎದುರಾಗುತ್ತದೆ. ಅವರ ಗೋಳಾಟ ದೇವರೇ ಬಲ್ಲ. ಕಚೇರಿಗೆ ದೂರವಾಣಿ ಸಂಪರ್ಕವೂ ಇಲ್ಲ. ಕಚೇರಿಯಲ್ಲಿನ ಅಧಿಕಾರಿಗಳು, ಸಿಬ್ಬಂದಿಯ ನಿಷ್ಕಾಳಜಿ, ಅಸಮರ್ಪಕ ಕಾರ್ಯನಿರ್ವಹಣೆ ಬೇಸರ ಉಂಟು ಮಾಡುತ್ತದೆ. ಆಡಳಿತ ವ್ಯವಸ್ಥೆ ಜನರಿಗೆ ಹತ್ತಿರವಿರಲಿ ಅಂತ ಸರ್ಕಾರ ಬಯಸುತ್ತಿದೆ. ಆದರೆ ಮುಧೋಳ ಹಿಂದುಳಿದ ವರ್ಗಗಳ ಇಲಾಖೆ ಜನರ ಸೇವೆಯಿಂದ ಬಹು ದೂರವಾಗುತ್ತಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕು ಕಚೇರಿ ನಗರದಿಂದ ಮೂರು ಕಿ.ಮೀ. ದೂರದಲ್ಲಿದೆ. ಪಕ್ಕದಲ್ಲಿ ಸ್ಮಶಾನ, ಕಲ್ಲಿನ ಕ್ವಾರಿ ಇದೆ. ಜನರ ಓಡಾಟ ಇಲ್ಲವೇ ಇಲ್ಲ. ಸೌಲಭ್ಯ ಪಡೆಯಲು ಹರಸಾಹಸ ಪಡಬೇಕು. ತಾಲೂಕು ಆಡಳಿತ ಭವನಕ್ಕೆ ಸ್ಥಳಾಂತರ ಮಾಡಬೇಕು. ಇಲ್ಲವೆ ಬಂದ್ ಮಾಡುವುದು ಒಳಿತು ಎಂದು ಜನರು ಆಕ್ರೋಶ ಹೊರ ಹಾಕ್ತಿದ್ದಾರೆ.

TAGGED:bagalkoteBCM Officemudholಬಾಗಲಕೋಟೆಬಿಸಿಎಂ ಕಚೇರಿಮುಧೋಳ
Share This Article
Facebook Whatsapp Whatsapp Telegram

Cinema news

Rishab Shetty
ಕೊಲ್ಲೂರು ಮೂಕಾಂಬಿಕಾ ದೇವಿ ದರ್ಶನ ಪಡೆದ ರಿಷಬ್ ದಂಪತಿ
Cinema Districts Karnataka Latest Sandalwood Top Stories
Rachita Ram
ಪ್ರೇಮಿಗಳ ದಿನದಂದೆ I Love You ಅಂತ ರಚ್ಚು ಪ್ರಪೋಸ್‌ – ಹೇಳಿದ್ದು ಯಾರಿಗೆ?
Bengaluru City Cinema Latest Main Post Sandalwood
ranveer singh 2
ಬಿಷ್ಣೋಯ್ ಗ್ಯಾಂಗ್‌ನಿಂದ ಮತ್ತೆ ರಣವೀರ್ ಸಿಂಗ್‌ಗೆ ಬೆದರಿಕೆ
Cinema Latest Top Stories
Joe Simon
ಫಿಲ್ಮ್‌ ಚೇಂಬರ್‌ನಲ್ಲೇ ಹೃದಯಾಘಾತ – ಸಾಹಸಸಿಂಹ ಚಿತ್ರದ ನಿರ್ದೇಶಕ ಜೊ ಸೈಮನ್ ನಿಧನ
Cinema Latest Main Post

You Might Also Like

Byrati Basavaraj 1
Bengaluru City

ಬಿಕ್ಲು ಶಿವ ಕೊಲೆ ಕೇಸ್‌ – ಶಾಸಕ ಬೈರತಿ ಬಸವರಾಜ್ 7 ದಿನ ಸಿಐಡಿ ಕಸ್ಟಡಿಗೆ

Public TV
By Public TV
11 minutes ago
Chamarajanagar Hills
Chamarajanagar

ಬಿಳಿಗಿರಿರಂಗನ ಬೆಟ್ಟದಲ್ಲಿ ಅನುಮಾನಾಸ್ಪದವಾಗಿ ಹುಲಿ ಸಾವು

Public TV
By Public TV
19 minutes ago
Ishan Kishan
Cricket

ಅಂದು ಅಭಿಷೇಕ್‌ ಇಂದು ಇಶಾನ್‌ ಕಿಶನ್‌ – ಅಫ್ರಿದಿಗೆ ಬಿಸಿ ಮುಟ್ಟಿಸಿದ ಓಪನರ್ಸ್‌

Public TV
By Public TV
22 minutes ago
Kalaburagi
Districts

ಕಲಬುರಗಿ ಕೋಟೆಯೊಳಗಡೆ ಶಿವಲಿಂಗ ಪೂಜೆಗೆ ಮುಂದಾಗಿದ್ದ ಹಿಂದೂ ಕಾರ್ಯಕರ್ತರು ಪೊಲೀಸರ ವಶಕ್ಕೆ

Public TV
By Public TV
44 minutes ago
Davanagere Youth Heart Attack
Davanagere

ಹೋಟೆಲ್ ಉದ್ಘಾಟನಾ ಕಾರ್ಯಕ್ರಮದ ವೇಳೆ ಹೃದಯಾಘಾತ – ಯುವಕ ಸಾವು

Public TV
By Public TV
52 minutes ago
Central Bank Digital Currency based Public Distribution System Launched in Gujarat Pralhad Joshi 3
Latest

ದೇಶದ ಪಡಿತರ ವ್ಯವಸ್ಥೆಗೆ ಡಿಜಿಟಲ್ ಕರೆನ್ಸಿಯ ಸ್ಪರ್ಶ – ಪಾರದರ್ಶಕತೆಯತ್ತ ಕೇಂದ್ರದಿಂದ ಮತ್ತೊಂದು ದಿಟ್ಟ ಹೆಜ್ಜೆ

Public TV
By Public TV
58 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?