ಟೆಲ್ ಅವಿವ್: ಇಸ್ರೇಲ್ ರಕ್ಷಣಾ ಪಡೆಗಳು (IDF) ವಿಶ್ವಸಂಸ್ಥೆಗೆ ನಿರ್ಣಾಯಕ ನಿರ್ದೇಶನವನ್ನು ತಿಳಿಸಿದೆ. ಉತ್ತರ ಗಾಝಾದಲ್ಲಿರುವ ಪ್ಯಾಲೆಸ್ತೀನ್ ನಿವಾಸಿಗಳು 24 ಗಂಟೆಗಳ ಒಳಗಾಗಿ ದಕ್ಷಿಣ ಗಾಝಾಕ್ಕೆ ಸ್ಥಳಾಂತರಗೊಳ್ಳುವಂತೆ ತಿಳಿಸಿದ್ದಾಗಿ ಇಸ್ರೇಲ್ (Israel) ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಇಸ್ರೇಲ್ ಗಾಝಾ (Gaza) ನಿವಾಸಿಗಳಿಗೆ ನೀಡಿರುವ ಮಹತ್ವದ ಸೂಚನೆ ಭಾರೀ ಆಕ್ರಮಣದ ಸುಳಿವು ನೀಡಿದೆ. ಸರಿಸುಮಾರು 11 ಲಕ್ಷ ಪ್ಯಾಲೆಸ್ತೀನಿಯನ್ನರು ಗಾಝಾದ ಉತ್ತರ ಭಾಗದಲ್ಲಿ ನೆಲೆಸಿದ್ದಾರೆ. ಈ ಹಿನ್ನೆಲೆ ಅಲ್ಲಿನ ನಿವಾಸಿಗಳಿಗೆ ಪ್ರಾಣಾಪಾಯದಿಂದ ಪಾರಾಗಲು ಸ್ಥಳಾಂತರಕ್ಕೆ ಮಹತ್ವದ ಸೂಚನೆ ನೀಡಲಾಗಿದೆ. ಇದನ್ನೂ ಓದಿ: 60 ಉಗ್ರರ ಕೊಂದು 250 ಒತ್ತೆಯಾಳುಗಳನ್ನು ಸುರಕ್ಷಿತವಾಗಿ ರಕ್ಷಿಸಿದ ಇಸ್ರೇಲ್ ಸೈನಿಕರು
ಗಾಝಾ ನಗರದ ಸುರಂಗಗಳಲ್ಲಿ ಹಮಾಸ್ ಉಗ್ರರು ಅಡಗಿರುವ ಹಿನ್ನೆಲೆ ಐಡಿಎಫ್ ನಾಗರಿಕರಿಗೆ ಸ್ಥಳಾಂತರದ ಸೂಚನೆ ನೀಡಿದೆ. ಗಾಝಾ ನಿವಾಸಿಗಳೇ, ನಿಮ್ಮ ವೈಯಕ್ತಿಕ ಸುರಕ್ಷತೆ ಮತ್ತು ನಿಮ್ಮ ಕುಟುಂಬಗಳಿಗಾಗಿ ದಕ್ಷಿಣಕ್ಕೆ ತೆರಳಿ. ನಿಮ್ಮನ್ನು ಮಾನವ ಗುರಾಣಿಯಾಗಿ ಬಳಸುತ್ತಿರುವ ಹಮಾಸ್ ಭಯೋತ್ಪಾದಕರಿಂದ ದೂರವಿರಿ. ಮುಂಬರುವ ದಿನಗಳಲ್ಲಿ ಐಡಿಎಫ್ ಗಾಝಾ ನಗರದಲ್ಲಿ ದೊಡ್ಡ ಕಾರ್ಯಾಚರಣೆ ನಡೆಸುವುದನ್ನು ಮುಂದುವರಿಸಲಿದೆ. ಈ ಹಿನ್ನೆಲೆ ನಾಗರಿಕರಿಗೆ ಹಾನಿಯಾಗುವುದನ್ನು ತಡೆಯಲು ಈ ಸೂಚನೆ ನೀಡಲಾಗುತ್ತಿದೆ ಎಂದು ಇಸ್ರೇಲ್ ರಕ್ಷಣಾ ಪಡೆ ಹೇಳಿದೆ. ಇದನ್ನೂ ಓದಿ: Operation Ajay: ಇಸ್ರೇಲ್‌ನಿಂದ 230 ಮಂದಿ ಭಾರತೀಯರ ಆಗಮನ – ಕನ್ನಡಿಗರಿಗೆ ಟಿ.ಬಿ ಜಯಚಂದ್ರ ಆತ್ಮೀಯ ಸ್ವಾಗತ
Web Stories