ತುಪ್ಪದೊಂದಿಗೆ ಹಲವು ಮಸಾಲೆ ಪದಾರ್ಥನ್ನು ಹುರಿದು ಮಾಡುವ ಪನೀರ್ ಗೀ ರೋಸ್ಟ್ (Paneer Ghee Roast) ಅದ್ಭುತ ಸ್ಟಾರ್ಟರ್ ಎಂದರೆ ತಪ್ಪಾಗಲಾರದು. ಇದನ್ನು ಚಪಾತಿ, ರೋಟಿಯೊಂದಿಗೂ ಸೈಡ್ ಡಿಶ್ ಆಗಿ ಆನಂದಿಸಬಹುದು. ಸಾಮಾನ್ಯವಾಗಿ ಚಿಕನ್, ಮಟನ್‌ಗಳ ಗೀ ರೋಸ್ಟ್ ಹೆಚ್ಚು ಫೇಮಸ್. ಆದರೂ ಸಸ್ಯಾಹಾರದ ಆಯ್ಕೆ ಮಾಡಬೇಕೆಂದರೆ ಪನೀರ್ ಇದಕ್ಕೆ ಪರ್ಫೆಕ್ಟ್. ನಾವಿಂದು ರುಚಿಕರವಾದ ಪನೀರ್ ಗೀ ರೋಸ್ಟ್ ಮಾಡುವ ವಿಧಾನವನ್ನು ಹೇಳಿಕೊಡುತ್ತೇವೆ. ನೀವೂ ಇದನ್ನು ಮಾಡಿ ಆನಂದಿಸಿ.
Advertisement
ಬೇಕಾಗುವ ಪದಾರ್ಥಗಳು:
ಮಸಾಲಾ ಪೇಸ್ಟ್ ತಯಾರಿಸಲು:
ತುಪ್ಪ – 1 ಟೀಸ್ಪೂನ್
ಒಣಗಿದ ಕೆಂಪು ಮೆಣಸಿನಕಾಯಿ – 5
ಕೊತ್ತಂಬರಿ ಬೀಜ – 1 ಟೀಸ್ಪೂನ್
ಜೀರಿಗೆ – 1 ಟೀಸ್ಪೂನ್
ಮೆಂತ್ಯ – ಕಾಲು ಟೀಸ್ಪೂನ್
ಸೋಂಪು – ಅರ್ಧ ಟೀಸ್ಪೂನ್
ಕರಿ ಮೆಣಸು – ಅರ್ಧ ಟೀಸ್ಪೂನ್
ಬೆಳ್ಳುಳ್ಳಿ – 4 ಎಸಳು
ಹುಣಸೆಹಣ್ಣಿನ ಸಾರ – 2 ಟೀಸ್ಪೂನ್
ನೀರು – ಕಾಲು ಕಪ್
Advertisement
Advertisement
ಪನೀರ್ ಹುರಿಯಲು:
ತುಪ್ಪ – 1 ಟೀಸ್ಪೂನ್
ಪನೀರ್ – 1 ಕಪ್
ಗೀ ರೋಸ್ಟ್ ಮಾಡಲು:
ತುಪ್ಪ – 2 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಈರುಳ್ಳಿ – ಅರ್ಧ
ಕರಿಬೇವಿನ ಎಲೆ – ಕೆಲವು
ಅರಿಶಿನ – ಕಾಲು ಟೀಸ್ಪೂನ್
ಮೊಸರು – 2 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಬೆಲ್ಲ – ಅರ್ಧ ಟೀಸ್ಪೂನ್ ಇದನ್ನೂ ಓದಿ: ಕೆಎಫ್‌ಸಿ ಸ್ಟೈಲ್‌ನ ಟೇಸ್ಟಿ ಪಾಪ್‌ಕಾರ್ನ್ ಚಿಕನ್
Advertisement
ಮಾಡುವ ವಿಧಾನ:
* ಮೊದಲಿಗೆ ಮಸಾಲಾ ಪೇಸ್ಟ್ ತಯಾರಿಸಲು ಬಾಣಲೆಯಲ್ಲಿ ತುಪ್ಪ, ಒಣಗಿದ ಕೆಂಪು ಮೆಣಸಿನಕಾಯಿ, ಕೊತ್ತಂಬರಿ ಬೀಜ, ಜೀರಿಗೆ, ಮೆಂತ್ಯ, ಸೋಂಪು ಮತ್ತು ಕರಿಮೆಣಸು ಹಾಕಿ ಹುರಿಯಿರಿ.
* ಈಗ ಬೆಳ್ಳುಳ್ಳಿ ಸೇರಿಸಿ, ಸ್ವಲ್ಪ ಫ್ರೈ ಮಾಡಿ, ಬಳಿಕ ತಣ್ಣಗಾಗಲು ಬಿಡಿ.
* ಈಗ ಹುರಿದ ಪದಾರ್ಥಗಳನ್ನು ಬ್ಲೆಂಡರ್‌ಗೆ ವರ್ಗಾಯಿಸಿ, ಅದಕ್ಕೆ ಹುಣಸೆಹಣ್ಣಿನ ಸಾರ ಹಾಗೂ ಕಾಲು ಕಪ್ ನೀರು ಹಾಕಿ ನಯವಾದ ಪೇಸ್ಟ್ ತಯಾರಿಸಿ ಪಕ್ಕಕ್ಕಿಡಿ.
* ಈಗ ಮತ್ತೊಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಪನೀರ್ ತುಂಡುಗಳನ್ನು ತಿಳಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಮಧ್ಯಮ ಜ್ವಾಲೆಯಲ್ಲಿ ಹುರಿದು ಪಕ್ಕಕ್ಕಿಡಿ.
* ಈಗ ದೊಡ್ಡ ಕಡಾಯಿಯಲ್ಲಿ ತುಪ್ಪ ಬಿಸಿ ಮಾಡಿ, ಅದಕ್ಕೆ ಈರುಳ್ಳಿ, ಕರಿಬೇವಿನ ಎಲೆಗಳನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ.
* ಅದಕ್ಕೆ ಅರಿಶಿನ ಹಾಕಿ, ಹುರಿಯಿರಿ.
* ಈಗ ತಯಾರಿಸಿಟ್ಟ ಮಸಾಲೆ ಪೇಸ್ಟ್ ಅನ್ನು ಹಾಕಿ, 10-15 ನಿಮಿಷಗಳ ಕಾಲ ಕೈ ಆಡಿಸುತ್ತಾ ಚೆನ್ನಾಗಿ ಬೇಯಿಸಿ.
* ತುಪ್ಪ ಮಸಾಲೆಯಿಂದ ಬೇರ್ಪಡುತ್ತಾ ಬರುವಾಗ ಮೊಸರನ್ನು ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ.
* ಈಗ ಮಸಾಲೆಗೆ ಉಪ್ಪು ಮತ್ತು ಬೆಲ್ಲ ಹಾಕಿ ಚೆನ್ನಾಗಿ ಬೆರೆಸಿ.
* ಹುರಿದಿಟ್ಟಿದ್ದ ಪನೀರ್ ಅನ್ನು ಸೇರಿಸಿ, 1 ನಿಮಿಷ ಬೇಯಿಸಿ.
* ಇದೀಗ ಪನೀರ್ ಗೀ ರೋಸ್ಟ್ ತಯಾರಾಗಿದ್ದು, ಇದನ್ನು ಸ್ಟಾರ್ಟರ್ ಅಥವಾ ರೋಟಿ, ಚಪಾತಿಯೊಂದಿಗೂ ಸವಿಯಬಹುದು. ಇದನ್ನೂ ಓದಿ: ತುಂಬಾ ಸಿಂಪಲ್ ಆಗಿ ಮಾಡಿ ಗೀರೈಸ್