ರಸ್ತೆ ಬದಿಯಲ್ಲಿ ಸಿಗೋ ನೂಡಲ್ಸ್ ಎಂದರೆ ಚೈನೀಸ್ ಅಡುಗೆ ಎಂಬುದು ಎಲ್ಲರಿಗೂ ತಕ್ಷಣಕ್ಕೆ ನೆನಪಾಗುತ್ತದೆ. ಚೈನೀಸ್ ರೆಸಿಪಿಗಳೆಂದರೆ ಎಲ್ಲರ ಬಾಯಲ್ಲೂ ನೀರೂರದೇ ಇರಲಾರದು. ನೀವಿಂದು ಮನೆಯಲ್ಲಿ ಏನಾದರೂ ಖಾರವಾದ ಅಡುಗೆ ಮಾಡಲು ಬಯಸಿದರೆ ಒಮ್ಮೆ ಚಿಕನ್ ಚೌ ಮಿನ್ (Chicken Chow Mein) ರೆಸಿಪಿಯನ್ನು ಟ್ರೈ ಮಾಡಬಹುದು. ಸುಲಭದ ಚಿಕನ್ ಚೌ ಮಿನ್ ರೆಸಿಪಿ ಇಲ್ಲಿದೆ.
Advertisement
ಬೇಕಾಗುವ ಪದಾರ್ಥಗಳು:
ಎಣ್ಣೆ – 1 ಟೀಸ್ಪೂನ್
ಚಿಕನ್ ಬ್ರೆಸ್ಟ್ – ಕಾಲು ಕೆಜಿ
ಒಣ ಚೌ ಮಿನ್ ನೂಡಲ್ಸ್ – ಅರ್ಧ ಕೆಜಿ
ಹೆಚ್ಚಿದ ಈರುಳ್ಳಿ – ಅರ್ಧ ಕಪ್
ಹೆಚ್ಚಿದ ಕ್ಯಾರೆಟ್ – ಅರ್ಧ ಕಪ್
ಹೆಚ್ಚಿದ ಕೊತ್ತಂಬರಿ ಸೊಪ್ಪು – ಕಾಲು ಕಪ್
ತುರಿದ ಬೆಳ್ಳುಳ್ಳಿ – 1 ಟೀಸ್ಪೂನ್
ಹೆಚ್ಚಿದ ಕ್ಯಾಬೆಜ್ – 1 ಕಪ್
ಸೋಯಾ ಸಾಸ್ – ಕಾಲು ಕಪ್
ಜೇನುತುಪ್ಪ – 2 ಟೀಸ್ಪೂನ್
ಎಳ್ಳೆಣ್ಣೆ – 1 ಟೀಸ್ಪೂನ್
ಹೆಚ್ಚಿದ ಸ್ಪ್ರಿಂಗ್ ಆನಿಯನ್ – ಕಾಲು ಕಪ್ ಇದನ್ನೂ ಓದಿ: ಟ್ರೈ ಮಾಡಿ ಗ್ರೀಕ್ ಲೆಮನ್ ಚಿಕನ್
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ಪಾತ್ರೆಯಲ್ಲಿ ಸಾಕಷ್ಟು ನೀರು ಹಾಕಿ, ಕುದಿಸಿ, ಬಳಿಕ ಚೌ ಮಿನ್ ನೂಡಲ್ಸ್ ಹಾಕಿ ಬೇಯಿಸಿಕೊಳ್ಳಿ.
* ಚಿಕನ್ ಬ್ರೆಸ್ಟ್ ಅನ್ನು ಒಂದೊಂದು ಇಂಚಿನಷ್ಟು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿಡಿ.
* ಒಂದು ದೊಡ್ಡ ಬಾಣಲೆಯಲ್ಲಿ ಎಣ್ಣೆ ಹಾಕಿ, ಚಿಕನ್ ತುಂಡುಗಳನ್ನು ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಕರಿಮೆಣಸಿನಪುಡಿ ಸೇರಿಸಿ ಬೇಯಿಸಿಕೊಳ್ಳಿ.
* ಚಿಕನ್ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಫ್ರೈ ಮಾಡಿಕೊಳ್ಳಿ.
* ಈಗ ಅದಕ್ಕೆ ಈರುಳ್ಳಿ, ಕ್ಯಾರೆಟ್, ಕೊತ್ತಂಬರಿ ಸೊಪ್ಪು ಸೇರಿಸಿ, ಮೃದುವಾಗುವವರೆಗೆ ಬೇಯಿಸಿ.
* ಬೆಳ್ಳುಳ್ಳಿ ಹಾಗೂ ಕ್ಯಾಬೆಜ್ ಸೇರಿಸಿ ಅರ್ಧ ನಿಮಿಷ ಬೇಯಿಸಿಕೊಳ್ಳಿ.
* ಈಗ ಅದಕ್ಕೆ ನೂಡಲ್ಸ್ ಅನ್ನು ನೀರಿನಿಂದ ಬಸಿದು, ಬಾಣಲೆಗೆ ಹಾಕಿ ಮಿಕ್ಸ್ ಮಾಡಿ.
* ಈಗ ಒಂದು ಬೌಲ್ ತಗೆದುಕೊಂಡು, ಅದರಲ್ಲಿ ಸೋಯಾ ಸಾಸ್, ಜೇನುತುಪ್ಪ ಹಾಗೂ ಎಳ್ಳೆಣ್ಣೆಯನ್ನು ಹಾಕಿಕೊಂಡು ಮಿಶ್ರಣ ಮಾಡಿ.
* ಸಾಸ್ ಮಿಶ್ರಣವನ್ನು ಈಗ ನೂಡಲ್ಸ್ಗೆ ಸೇರಿಸಿ, ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.
* ಈಗ ಸ್ಪ್ರಿಂಗ್ ಆನಿಯನ್ ಅನ್ನು ಸೇರಿಸಿ, 1-2 ನಿಮಿಷ ಬೇಯಿಸಿ.
* ಇದೀಗ ಸಖತ್ ಟೇಸ್ಟಿ ಚಿಕನ್ ಚೌ ಮಿನ್ ತಯಾರಾಗಿದ್ದು ಬಿಸಿಬಿಸಿಯಾಗಿ ಸವಿಯಿರಿ. ಇದನ್ನೂ ಓದಿ: ಚೈನೀಸ್ ಸ್ಟೈಲ್‌ನ ಯಮ್ಮೀ ಯಮ್ಮೀ ಆರೆಂಜ್ ಚಿಕನ್ ರೆಸಿಪಿ