ನಾನ್‌ವೆಜ್ ಎಂದರೆ ಬೇಡ ಎನ್ನುವವರು ಬಹಳ ವಿರಳ. ಪ್ರತಿಯೊಬ್ಬ ನಾನ್‌ವೆಜ್ ಪ್ರಿಯರು ಭಿನ್ನ ವಿಭಿನ್ನ ರುಚಿಗಳಿಗೆ ಅಭಿಮಾನಿಯಾಗಿರುತ್ತಾರೆ. ನಾವಿಂದು ಸುಲಭವಾಗಿ ಮಟನ್‌ನಿಂದ ಬೋಟಿ ಕಬಾಬ್ (Boti Kebab) ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ಈ ರೆಸಿಪಿ ಒಮ್ಮೆ ಟ್ರೈ ಮಾಡಿ, ನಿಮ್ಮ ಬಾಯಲ್ಲಿ ನೀರೂರುವುದನ್ನು ಯಾರಿಂದಲೂ ತಡೆಯಲಾಗದು.
Advertisement
ಬೇಕಾಗುವ ಪದಾರ್ಥಗಳು:
ಮಟನ್ – ಅರ್ಧ ಕೆಜಿ (ಬೋನ್‌ಲೆಸ್ ಹಾಗೂ ಸಣ್ಣ ತುಂಡುಗಳನ್ನು ಬಳಸಿ)
ಹಸಿ ಪಪ್ಪಾಯಿ ಪೇಸ್ಟ್ – 2 ಟೀಸ್ಪೂನ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 2 ಟೀಸ್ಪೂನ್
ಹಸಿಮೆಣಸಿನ ಪೇಸ್ಟ್ – ಅರ್ಧ ಟೀಸ್ಪೂನ್
ಮೆಣಸಿನ ಪುಡಿ – ಅರ್ಧ ಟೀಸ್ಪೂನ್
ಗರಂ ಮಸಾಲಾ ಪುಡಿ – ಅರ್ಧ ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಬೆಣ್ಣೆ – ಕಾಲು ಕಪ್
ಸ್ಪ್ರಿಂಗ್ ಆನಿಯನ್ – ಅಲಂಕಾರಕ್ಕೆ ಇದನ್ನೂ ಓದಿ: ಸಿಹಿ, ಖಾರ ಮಿಶ್ರಿತ ಹನಿ ಚಿಲ್ಲಿ ಎಗ್ ಮಾಡಿ ಬಾಯಿ ಚಪ್ಪರಿಸಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಮಟನ್ ತುಂಡುಗಳನ್ನು ಚೆನ್ನಾಗಿ ತೊಳೆಯಿರಿ.
* ಮಟನ್ ತುಂಡುಗಳಿಗೆ ಪಪ್ಪಾಯಿ ಪೇಸ್ಟ್, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸಿನ ಪೇಸ್ಟ್, ಮೆಣಸಿನ ಪುಡಿ, ಉಪ್ಪು ಹಾಗೂ ಗರಂ ಮಸಾಲಾ ಪುಡಿ ಹಾಕಿ ಕಲಸಿ.
* ಈಗ ಮಟನ್ ಅನ್ನು ಫ್ರಿಡ್ಜ್‌ನಲ್ಲಿ 3-4 ಗಂಟೆಗಳ ಕಾಲ ಇಡಿ.
* ಬಳಿಕ ಕುಕ್ಕರ್‌ಗೆ 2 ಕಪ್ ನೀರು ಹಾಕಿ, 4 ಸೀಟಿ ಬರುವವರೆಗೆ ಮಟನ್ ಅನ್ನು ಬೇಯಿಸಿ.
* ಜಾಗರೂಕರಾಗಿ ವಿಶಲ್ ಅನ್ನು ತೆಗೆದು, ಕುಕ್ಕರ್‌ನಲ್ಲಿ ನೀರು ಉಳಿದಿದೆಯೇ ಎಂಬುದನ್ನು ಪರಿಶೀಲಿಸಿ. ನೀರು ಉಳಿದಿದ್ದರೆ ಅದು ಆವಿಯಾಗುವವರೆಗೆ ಬೇಯಿಸಿಕೊಳ್ಳಿ.
* ಈಗ ಮಟನ್ ತುಂಡುಗಳನ್ನು ಒಂದು ಪಾತ್ರೆಗೆ ವರ್ಗಾಯಿಸಿ.
* ಗ್ರಿಲ್ಲರ್ ಅಥವಾ ಪ್ಯಾನ್‌ನಲ್ಲಿ ಅವುಗಳನ್ನು ಗ್ರಿಲ್ ಮಾಡಿ.
* ಮಟನ್ ತುಂಡುಗಳಿಗೆ ಬೆಣ್ಣೆ ಹಚ್ಚಿ ಸಣ್ಣ ಉರಿಯಲ್ಲಿ 15-20 ನಿಮಿಷಗಳ ಕಾಲ ಬೇಯಿಸಿ.
* ಮಟನ್ ಚೆನ್ನಾಗಿ ಬೆಂದ ಬಳಿಕ ಕಬಾಬ್‌ಗಳನ್ನು ಪ್ಲೇಟ್‌ಗೆ ಹಾಕಿ, ಸ್ಪ್ರಿಂಗ್ ಆನಿಯನ್‌ನಿಂದ ಅಲಂಕರಿಸಿ ಸವಿಯಿರಿ. ಇದನ್ನೂ ಓದಿ: ಗೋಡಂಬಿ ಬಳಸಿ ಮಾಡಿ ರುಚಿಯಾದ ಚಿಕನ್ ಗ್ರೇವಿ
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k