– ಪರಿಸರ ದಿನದಂದು ಘನ ತ್ಯಾಜ್ಯ ಪ್ರದರ್ಶನ
ಕಠ್ಮಂಡು: ನಮ್ಮ ದೇಶದಲ್ಲಿ ಗಂಗಾ ನದಿ ಸ್ವಚ್ಛತಾ ಅಭಿಯಾನದಂತೆ ನೇಪಾಳದಲ್ಲೂ ಬೃಹತ್ ಸ್ವಚ್ಛತಾ ಅಭಿಯಾನವೊಂದು ಆರಂಭವಾಗಿದೆ.
ಜಗತ್ತಿನ ಎತ್ತರದ ಮೌಂಟ್ ಎವರೆಸ್ಟ್ ಶಿಖರದ ಸ್ವಚ್ಛತಾ ಕಾರ್ಯ ಆರಂಭವಾಗಿದೆ. ನೇಪಾಳದಲ್ಲಿ ಹೊಸ ವರ್ಷದ ಆಚರಣೆಯ ಅಂಗವಾಗಿ ಮೌಂಟ್ ಎವರೆಸ್ಟ್ ಪರ್ವತ ಶ್ರೇಣಿಯಲ್ಲಿ ಸ್ವಚ್ಛತಾ ಕಾರ್ಯವನ್ನು ಅಲ್ಲಿನ ಪ್ರವಾಸೋದ್ಯಮ ಇಲಾಖೆ ಹಮ್ಮಿಕೊಂಡಿದೆ.
Advertisement
Advertisement
ಏಪ್ರಿಲ್ 14 ರಿಂದ ಆರಂಭವಾಗಿರುವ ಮೌಂಟ್ ಎವರೆಸ್ಟ್ ಪರ್ವತ ಶ್ರೇಣಿಯ ಸ್ವಚ್ಛತಾ ಅಭಿಯಾನ ಮೇ 29ಕ್ಕೆ ಮುಗಿಯಲಿದೆ. ಈಗಾಗಲೇ ಸುಮಾರು 3,000 ಕೆಜಿ ಘನ ತ್ಯಾಜ್ಯವನ್ನು ಎವರೆಸ್ಟ್ ಪರ್ವತ ಶ್ರೇಣಿಯಿಂದ ಸಂಗ್ರಹಿಸಲಾಗಿದೆ. ಒಟ್ಟು ಸುಮಾರು 10,000 ಕೆಜಿಯಷ್ಟು ತ್ಯಾಜ್ಯ ಸಂಗ್ರಹ ಗುರಿ ಹೊಂದಲಾಗಿದೆ. ಎವರೆಸ್ಟ್ ಬೇಸ್ ಕ್ಯಾಂಪಿನಲ್ಲಿ 5,000 ಕೆಜಿಗೂ ಅಧಿಕ ತ್ಯಾಜ್ಯ ಸಂಗ್ರಹವಾಗುವ ನಿರೀಕ್ಷೆಯಿದೆ. ಕ್ಯಾಂಪ್ 2 ಹಾಗೂ 3 ಸೇರಿದಂತೆ 3000 ಕೆಜಿ ತ್ಯಾಜ್ಯ ಸಂಗ್ರಹ ಗುರಿಯಿದೆ.
Advertisement
Advertisement
ತ್ಯಾಜ್ಯದ ಜೊತೆಗೆ ಟ್ರೆಕ್ಕಿಂಗ್ ಸಂದರ್ಭದಲ್ಲಿ ಮೃತಪಟ್ಟು ಅಲ್ಲೇ ಉಳಿದ ಶವಗಳಿದ್ದರೆ, ಅವುಗಳನ್ನು ಕೆಳಗಿಳಿಸಲಾಗುತ್ತದೆ. ಜೂನ್ 5ರ ಪರಿಸರ ದಿನದಂದು ಈ ಬೃಹತ್ ಘನ ತ್ಯಾಜ್ಯವನ್ನು ಪ್ರದರ್ಶನ ಮಾಡಿ ನಂತರ ಮರು ಬಳಕೆಗೆ ಸಂಸ್ಕರಣೆ ಮಾಡಲಾಗುತ್ತದೆ.