Advertisements

ಕೆಜಿಎಫ್ ಚಿತ್ರದಲ್ಲಿ ಹೆಜ್ಜೆ ಹಾಕಿ ಯಶ್ ಬಗ್ಗೆ ಹೀಗೆ ಹೇಳಿದ್ರು ಮೌನಿ ರಾಯ್

ಮುಂಬೈ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷೆಯ ಹಿಂದಿಯ ಕೆಜಿಎಫ್ ಚಿತ್ರದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದು ತುಂಬ ಖುಷಿಯಾಯ್ತು ಎಂದು ಬಾಲಿವುಡ್ ನಟಿ ಮೌನಿ ರಾಯ್ ಹೇಳಿದ್ದಾರೆ.

Advertisements

ಸ್ಯಾಂಡಲ್‍ವುಡ್, ಬಾಲಿವುಡ್, ಟಾಲಿವುಡ್ ಸೇರಿದಂತೆ ಪಂಚ ಭಾಷೆಯಲ್ಲಿ ರಿಲೀಸ್ ಆಗುತ್ತಿರುವ ಕೆಜಿಎಫ್ ಚಿತ್ರ ಟ್ರೇಲರ್ ಮೂಲಕವೇ ಹೊಸ ಕ್ರೇಜ್ ಹುಟ್ಟುಹಾಕಿದೆ. ಹಿಂದಿಯಲ್ಲಿ ಬರಲಿರುವ ಕೆಜಿಎಫ್ ಚಿತ್ರದ ಐಟಂ ಸಾಂಗ್‍ನಲ್ಲಿ `ಗಲಿ ಗಲಿ ಮೇ’ ಹಾಡಿಗೆ ಮೌನಿ ರಾಯ್ ಸಖತ್ತಾಗಿ ಸ್ಟೆಸಪ್ಸ್ ಹಾಕಿದ್ದಾರಂತೆ.

Advertisements

ಕೆಜಿಎಫ್ ಚಿತ್ರದ ಸಂದರ್ಶನವೊಂದರಲ್ಲಿ ಮಾತನಾಡಿದ ಮೌನಿ ರಾಯ್, ಯಶ್ ಅವರ ಜೊತೆ ಹೆಜ್ಜೆ ಹಾಕಿದ್ದು ಖುಷಿಯಾಯ್ತು. ಈ ಚಿತ್ರದ ಎರಡು ಟ್ರೇಲರ್‌ಗಳನ್ನು ನಾನು ನೋಡಿದ್ದೇನೆ, ನನಗೆ ತುಂಬಾ ಇಷ್ಟವಾಗಿದೆ. ಅದರಲ್ಲು ಯಶ್ ಅವರ ಜೊತೆ ಕೆಲಸ ಮಾಡಿ ಸಂತೋಷವಾಗಿದೆ. `ಗಲಿ ಗಲಿ ಮೇ’ ಹಾಡಿಗೆ ಗಣೇಶ್ ಮಾಸ್ಟರ್ ಕೊರಿಯೋಗ್ರಾಫಿ ಮಾಡಿದ್ದಾರೆ. ಇದರಲ್ಲಿ ಇರುವ ಸ್ಟೆಪ್ಸ್ ಚೆನ್ನಾಗಿದೆ. ಹಾಡಿಗೆ ಫುಲ್ ಜೋಶ್‍ನಲ್ಲಿ ಹೆಜ್ಜೆ ಹಾಕಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.

ಕೆಜಿಎಫ್ ಚಿತ್ರ ನಿಜವಾಗಿಯೂ ಒಂದು ವಿಭಿನ್ನ ಪ್ರಯತ್ನ. ಚಿತ್ರವನ್ನು ಇಲ್ಲರು ಚಿತ್ರಮಂದಿರಕ್ಕೆ ಹೋಗಿ ನೋಡಿ. ನಾನು ಹೆಜ್ಜೆ ಹಾಕಿರುವ ಸಾಂಗ್ ಸೂಪರ್ ಆಗಿ ಮೂಡಿಬಂದಿರುತ್ತೇ ಅಂತ ಆಶಿಸುತ್ತೇನೆ. ಚಿತ್ರವನ್ನು ನೋಡಲು ಕುತೂಹಲದಿಂದ ಕಾಯುತ್ತಿದ್ದೇನೆ ಅಂತ ಕೆಜಿಎಫ್ ಸಿನಿಮಾಗೆ ಮೌನಿ ರಾಯ್ ಶುಭ ಹಾರೈಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Advertisements
Advertisements
Exit mobile version