ಬಾಲಿವುಡ್ ಕಿರುತೆರೆ ನಾಗಿನ್, ಕೆಜಿಎಫ್ ಬೆಡಗಿ ಮೌನಿ ರಾಯ್ ಇತ್ತೀಚೆಗೆ ಫೋಟೋಶೂಟ್ ಮಾಡಿಸಿದ್ದು, 84 ಸಾವಿರ ರೂ. ಸೀರೆ ಧರಿಸಿ ಮಿಂಚುತ್ತಿದ್ದಾರೆ.
ಅಭಿಮಾನಿಗಳೊಂದಿಗೆ ಯಾವಾಗಲೂ ಕನೆಕ್ಟ್ ಆಗಿರುವ ಮೌನಿ ತಮ್ಮ ಅಪ್ಡೇಟ್‍ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಕಳೆದ ತಿಂಗಳು ಸೂರಜ್ ನಂಬಿಯಾರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೌನಿ, ತಮ್ಮ ವಿಶೇಷ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಶೂಟ್ ಏಕೆ ಮಾಡಿಸಿದ್ದಾರೆ ಎಂಬುದನ್ನು ಸಹ ಮೌನಿ ಹಂಚಿಕೊಂಡಿದ್ದು, ಮತ್ತೆ ತಾನು ವೃತ್ತಿ ಜೀವನಕ್ಕೆ ಮರಳುತ್ತಿರುವ ಬಗ್ಗೆ ತಿಳಿಸಿದ್ದಾರೆ. ಇದನ್ನೂ ಓದಿ: ಶಿಲ್ಪಾ ಶೆಟ್ಟಿ ಧರಿಸಿರುವ ಗೌನ್ ಬೆಲೆಯಷ್ಟು ಗೊತ್ತಾ? ಲಕಲಕ ಹೊಳಿತಿದ್ದಾಳೆ ರವಿಮಾಮನ ಬೆಡಗಿ
View this post on Instagram
ಮೌನಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋ ಶೇರ್ ಮಾಡಿದ್ದು, ನೀವು ಏನು ನೋಡುತ್ತೀರಿ ಎಂಬುದು ಮುಖ್ಯವಲ್ಲ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಮೌನಿ ಗ್ಲಾಮರಸ್ ಆಗಿ ಕಾಣುತ್ತಿದ್ದು, ಕ್ಯಾಮರಾಗೆ ಸಖತ್ ಆಗಿ ಪೋಸ್ ಕೊಟ್ಟಿದ್ದಾರೆ. ಮೌನಿ ಲುಕ್ ನೋಡಿದ ಅಭಿಮಾನಿಗಳು ಮತ್ತು ಸೆಲೆಬ್ರೆಟಿಗಳು ‘ವಾವ್ಹ್’ ಎಂದು ಕಾಮೆಂಟ್ ಮಾಡಿದ್ದಾರೆ.
ಈ ಫೋಟೋದಲ್ಲಿ ಮೌನಿ ಕೇಶವಿನ್ಯಾಸ ಸಹ ಭಿನ್ನವಾಗಿ ಮಾಡಿಸಿಕೊಂಡಿದ್ದು, ಕಣ್ಣುಗಳು ಹೆಚ್ಚು ಐಲೆಟ್ ಆಗುವ ರೀತಿ ಮೇಕಪ್ ಮಾಡಿಸಿಕೊಂಡಿದ್ದಾರೆ. ಆಡಂಬರದ ಯಾವುದೇ ಆಭರಣಗಳನ್ನು ಧರಿಸದ ಮೌನಿ ಸಿಂಪಲ್ ಆಗಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.
ಸೂಪರ್ ಡ್ಯಾನ್ಸರ್ ಆಗಿರುವ ಈ ನಟಿ ಡ್ಯಾನ್ಸ್ ಶೋಗೆ ತೀರ್ಪುಗಾರ್ತಿಯಾಗಿ ಮರಳಿದ್ದಾರೆ. ಇವರ ಡ್ಯಾನ್ಸ್ ನೋಡಿ ಫಿದಾ ಆಗಿದ್ದ ಜನರು ಇವರನ್ನು ಮತ್ತೆ ಡ್ಯಾನ್ಸ್ ಶೋ ಮೂಲಕವೇ ನೋಡಲು ಸಂತೋಷಗೊಂಡಿದ್ದಾರೆ. ಮೌನಿ ಇದೇ ಮೊದಲ ಬಾರಿಗೆ ಶೋವೊಂದರ ತೀರ್ಪುಗಾರ್ತಿಯಾಗಿದ್ದು, ಮತ್ತೆ ಇವರನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಇದನ್ನೂ ಓದಿ: ಕಾರು ಡ್ರೈವಿಂಗ್ ಮಾಡ್ಕೊಂಡೆ ಆಸ್ಪತ್ರೆಗೆ – ಹೆಣ್ಣು ಮಗುವಿನ ತಾಯಿಯಾದ ದಿಶಾ ಮದನ್