ಬೆಂಗಳೂರು: ನಿಹಾರಿಕಾ ಮೂವೀಸ್ ಲಾಂಛನದಲ್ಲಿ ಶ್ರೀಹರಿ ನಿರ್ಮಿಸಿರುವ ‘ಮೌನಂ’ ಚಿತ್ರಕ್ಕೆ ಚಂದ್ರಾ ಲೇಔಟ್‍ನಲ್ಲಿರುವ ವೈನಾಟ್ ಸ್ಟುಡಿಯೋವಿನಲ್ಲಿ ಡಬ್ಬಿಂಗ್ ಕಾರ್ಯ ಪೂರ್ಣಗೊಂಡಿದೆ.
ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ- ರಾಜ್ ಪಂಡಿತ್, ಛಾಯಾಗ್ರಹಣ – ಶಂಕರ್, ಸಂಗೀತ – ಆರವ್ ರಿಶಿಕ್, ಸಂಕಲನ – ಗುರುಮೂರ್ತಿ ಹೆಗಡೆ, ಸಾಹಸ – ಕೌರವ ವೆಂಕಟೇಶ್, ಅಲ್ಟಿಮೇಟ್ ಶಿವು, ಸಾಹಿತ್ಯ – ಆಕಾಶ್ ಎಸ್., ಸಹ ನಿರ್ದೇಶಕರು- ರಿತೇಶ್, ಗುಣವಂತ ಮಂಜು, ತಾರಾಗಣದಲ್ಲಿ – ಅವಿನಾಶ್- (6 ಶೇಡ್‍ಗಳಿರುವ ವಿಶಿಷ್ಟ ಪಾತ್ರದಲ್ಲಿ ಅಭಿನಯಿಸಿದ್ದಾರೆ.) ಮಯೂರಿ (ಕೃಷ್ಣಲೀಲಾ) ಹೋಮ್ಲಿ ಮತ್ತು ಆಕ್ಷನ್ ಸೀಕ್ವೆನ್ಸ್‍ಗಳಲ್ಲಿ ಮಿಂಚಿದ್ದಾರೆ.
Advertisement
Advertisement
ಬಾಲಾಜಿ ಶರ್ಮ (ಅಮೃತವರ್ಷಿಣಿ ಖ್ಯಾತಿ), ಹನುಮಂತೇಗೌಡ, ರಿತೇಶ್, ಕೆಂಪೇಗೌಡ, ಗುಣವಂತ ಮಂಜು, ನಯನ (ಕಾಮಿಡಿ ಕಿಲಾಡಿಗಳು), ಸಿಂಚನ, ಮಂಜುಳಾ ರೆಡ್ಡಿ, ಮುಂತಾದವರಿದ್ದಾರೆ. ಮನುಷ್ಯನಿಗೆ ಮನುಷ್ಯನೇ ಶತ್ರು, ನಾವೇ ನಮ್ಮ ಹೊರಗಡೆ ಇರುವ ಶತ್ರುವನ್ನು ಮಟ್ಟಹಾಕುವ ಮೊದಲು ನಮ್ಮ ಒಳಗಡೆ ಇರುವ ಶತ್ರುವನ್ನು ಮಟ್ಟಹಾಕಬೇಕು ಎಂಬ ಅಂಶದ ಸುತ್ತ ಕತೆ ಸಾಗುತ್ತದೆ.