Connect with us

ಯುವತಿಯ ಫೋಟೋ ಕ್ಲಿಕ್ಕಿಸಿದ ಮೌಲ್ವಿ ಬಂಧನ

ಯುವತಿಯ ಫೋಟೋ ಕ್ಲಿಕ್ಕಿಸಿದ ಮೌಲ್ವಿ ಬಂಧನ

ಹಾವೇರಿ: ಯುವತಿಯ ಫೋಟೋ ಕ್ಲಿಕ್ಕಿಸಿದ ಮೌಲ್ವಿಯನ್ನ ಜಿಲ್ಲೆಯ ಬ್ಯಾಡಗಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನ ಮೊಹಮ್ಮದ್ ಶಹಜಮಾಲ್ ಎಂದು ಗುರುತಿಸಲಾಗಿದೆ. ಮೊಹಮ್ಮದ್ ಶಹಜಮಾಲ್ ಮೂಲತಃ ಪಶ್ಚಿಮ ಬಂಗಾಳದ ಇಸ್ಲಾಂಪುರ ನಿವಾಸಿ ಎನ್ನಲಾಗಿದೆ. ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಧರ್ಮ ಬೋಧನೆ ಮಾಡಿಕೊಂಡಿದ್ದನು.

ಭಾನುವಾರ ಯುವತಿ ದರ್ಗಾದ ಬಳಿ ಇದ್ದ ಅಂಗಡಿವೊಂದಕ್ಕೆ ತೆರಳಿದ್ದಾರೆ. ಈ ವೇಳೆ ಮೌಲ್ವಿ ಯುವತಿಯ ಫೋಟೋ ತೆಗೆದಿದ್ದಾನೆ. ಅದನ್ನು ಗಮನಿಸಿದ ಯುವತಿ ಮೌಲ್ವಿಯ ಮೊಬೈಲ್ ಕಸಿದುಕೊಂಡು ತಂದೆಗೆ ವಿಚಾರ ತಿಳಿಸಿದ್ದಾರೆ. ನಂತರ ತಂದೆ ಜೊತೆಗೆ ಹೋಗಿ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಸಂಬಂಧ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಮೌಲ್ವಿಯನ್ನು ಬಂಧಿಸಿದ್ದಾರೆ.