ನವದೆಹಲಿ: ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆಯಾದ ಮೊಟೊರೊಲ ಭಾರತದಲ್ಲಿ ಮೊಟೊ ಒನ್ ಪವರ್ ಫೋನನ್ನು ಮಾರುಕಟ್ಟೆಗೆ ಬಿಡುಗಡೆಮಾಡಿದೆ.
ಈ ಫೋನಿನಲ್ಲಿ ಸೆಲ್ಫಿಗಾಗಿ 12 ಎಂಪಿ ಹೆಚ್‍ಡಿಆರ್ ಕ್ಯಾಮೆರಾ, ಹಿಂದುಗಡೆ 16+5 ಎಂಪಿ ಹೆಚ್‍ಡಿಆರ್ ಜೊತೆಗೆ ಡ್ಯುಯಲ್ ಟೋನ್ ಫ್ಲಾಶ್ ಹೊಂದಿದೆ. ಕೇವಲ ಒಂದೇ ಒಂದು ಮಿಡ್‍ನೈಟ್ ಬ್ಲಾಕ್ ಬಣ್ಣಗಳಲ್ಲಿ ಫೋನ್ ಲಭ್ಯವಿದೆ. ಅಕ್ಟೋಬರ್ 11ರಿಂದ ಮೊಟೊ ಹಬ್ ಹಾಗೂ ಫ್ಲಿಪ್‍ಕಾರ್ಟ್ ಆನ್‍ಲೈನ್ ಜಾಲತಾಣಗಳಲ್ಲಿ ಸಿಗಲಿದೆ.
Advertisement
Advertisement
ಮೊಟೊ ಒನ್ ಪವರ್ ಫೋನಿನ ಗುಣವೈಶಿಷ್ಟ್ಯಗಳು:
ಬೆಲೆ ಎಷ್ಟು?
4 ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿಗೆ 15,999 ರೂಪಾಯಿ ಬೆಲೆ ನಿಗದಿ ಪಡಿಸಿದೆ. ಭಾರತದಲ್ಲಿ ಒಂದೇ ಆವೃತ್ತಿ ಲಭ್ಯವಿರಲಿದೆ.
Advertisement
ಬಾಡಿ ಮತ್ತು ಡಿಸ್ಪ್ಲೇ:
156 x 76 x 8.4 ಮಿ.ಮೀ., 205 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ), 6.2 ಇಂಚಿನ ಐಪಿಸಿ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(1080×2246 ಪಿಕ್ಸೆಲ್, 18.7:9 ಅನುಪಾತ 403 ಪಿಪಿಐ)
Advertisement
ಪ್ಲಾಟ್‍ಫಾರಂ ಮತ್ತು ಮೆಮೊರಿ:
ಆಂಡ್ರಾಯ್ಡ್ 8.1 (ಓರಿಯೋ), ಸ್ನಾಪ್ ಡ್ರಾಗನ್ 636 ಅಕ್ಟಾ ಕೋರ್ ಪ್ರೊಸೆಸರ್, 1.8 ಗೀಗಾಹರ್ಟ್ಸ್ ಸ್ಪೀಡ್, ಅಡ್ರಿನೊ 509 ಗ್ರಾಫಿಕ್ ಪ್ರೊಸೆಸರ್, 4 ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿ, ಹೆಚ್ಚುವರಿಯಾಗಿ 256 ಜಿಬಿ ವರೆಗೆ ವಿಸ್ತರಿಸಬಹುದು.
ಕ್ಯಾಮೆರಾ ಹಾಗೂ ಇತರೆ ಫೀಚರ್ ಗಳು:
ಮುಂಭಾಗ 12 ಎಂಪಿ, ಸಾಫ್ಟ್ ಟೋನ್ ಸೆಲ್ಫಿ ಕ್ಯಾಮೆರಾ, ಹಿಂಭಾಗ 16+5 ಎಂಪಿ ಆಟೋಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್ ಹೊಂದಿದೆ. ಜೊತೆಗೆ ಫಿಂಗರ್ ಪ್ರಿಂಟ್ ಸೆನ್ಸರ್, 5,000 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿ ಹಾಗೂ 15 ವೋಟ್ಸ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ.
ಫೋನ್ ಖರೀದಿಸಿದ್ರೆ ಲಾಭ ಏನು?
15 ನಿಮಿಷದಲ್ಲಿ 6 ತಾಸಿನ ಬ್ಯಾಟರಿ ಚಾರ್ಜ್ ಆಗುತ್ತದೆ. ಗೂಗಲ್ ಡ್ರೈವ್‍ನಲ್ಲಿ ಅನಿಯಮಿತ ಸ್ಟೋರೆಜ್ ಮಾಡಬಹುದು (ಸದ್ಯ ಎಲ್ಲಾ ಸ್ಮಾರ್ಟ್ ಫೋನ್‍ಗಳಿಗೆ ಗೂಗಲ್ 15 ಜಿಬಿ ವರೆಗೆ ಮಾತ್ರ ಅವಕಾಶ ನೀಡಿದೆ. ಗೂಗಲ್ ಫೋಟೋ ಅನಿಯಮಿತ ಸ್ಟೋರೇಜ್ ಮಾಡಬಹುದು) ಮೊಟೊ ಒನ್ ಪವರ್ ಪ್ಯೂರ್ ಆಂಡ್ರಾಯ್ಡ್ ಓಎಸ್ ಆಗಿರುವುದರಿಂದ ಆಂಡ್ರಾಯ್ಡ್ ಬಿಡುಗಡೆ ಮಾಡುವ ಯಾವುದೇ ಅಪ್‍ಡೇಟ್‍ಗಳನ್ನು ಸುಲಭವಾಗಿ ಮಾಡಿಕೊಳ್ಳಬಹುದು. ಇತರೇ ಆಂಡ್ರಾಯ್ಡ್ ಫೋನ್ ಗಳಲ್ಲಿ ಆಂಡ್ರಾಯ್ಡ್ ಅಪ್‍ಡೇಟ್ ಕೂಡಲೇ ಸಿಗುವುದಿಲ್ಲ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=AD-K7dmB68g