ಬೆಂಗಳೂರು: ವಾಹನ ಸವಾರರೇ ಇನ್ಮುಂದೆ ವಾಹನ ಚಲಾಯಿಸುವಾಗ ಎಚ್ಚರವಾಗಿರಿ. ಅದರಲ್ಲೂ ಕಾರು ಚಾಲಕರು ಇದನ್ನು ಗಮನಿಸಲೇಬೇಕು. ಇನ್ನು ಮುಂದೆ ಸೀಟ್ ಬೆಲ್ಟ್ (Seat Belt) ಧರಿಸದೇ ಹೋದಲ್ಲಿ 1,000 ರೂ. ದಂಡ (Fine) ಕಟ್ಟಬೇಕಾಗುತ್ತದೆ.
ಹೌದು, ಕೇಂದ್ರ ಸರ್ಕಾರದ ಹೊಸ ಆದೇಶದ ಅನ್ವಯ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿ ಈ ಆದೇಶ ಹೊರಡಿಸಿದೆ. ರಾಜ್ಯದ ಎಲ್ಲಾ ಕಮಿಷನರೇಟ್ ಮತ್ತು ಎಸ್‌ಪಿ ಕಚೇರಿಗೆ ಈ ಆದೇಶ ಪ್ರತಿ ರವಾನೆಯಾಗಿದೆ. ಇದನ್ನೂ ಓದಿ: ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿಗೆ ಏಷ್ಯಾದಿಂದಲೇ ಮೊದಲು, ಕೋಲಾರದ ಮಹಿಳೆ ನೇಮಕ
Advertisement
Advertisement
ಸೀಟ್ ಬೆಲ್ಟ್ ಧರಿಸದೇ ಜನರು ವಾಹನ ಚಲಾಯಿಸುವುದರಿಂದ ರಸ್ತೆ ಅಪಘಾತಗಳ (Road Accident) ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಹೊಸದಾಗಿ ದಂಡವನ್ನು ಹೆಚ್ಚಿಸಲಾಗಿದೆ. ಈ ಹಿಂದೆ ಸೀಟ್ ಬೆಲ್ಟ್ ಹಾಕದೇ ಕಾರನ್ನು ಚಲಾಯಿಸುತ್ತಿದ್ದವರಿಗೆ 500 ರೂ. ದಂಡ ಹಾಕಲಾಗುತ್ತಿತ್ತು. ಆದರೆ ಇದೀಗ ದಂಡವನ್ನು ದುಪ್ಪಟ್ಟು ಮಾಡಲಾಗಿದೆ. ಇದನ್ನೂ ಓದಿ: ದೀಪಾವಳಿಯಲ್ಲಿ ನಿಷೇಧಿತ ಪಟಾಕಿ ಸಿಡಿಸಿದ್ರೆ 6 ತಿಂಗಳು ಜೈಲು ಶಿಕ್ಷೆ