ನವದೆಹಲಿ: ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆಯಾದ ಮೊಟೊರೊಲ ಭಾರತದಲ್ಲಿ ತನ್ನ ನೂತನ ಮೊಟೊ 6 ಫ್ಲಸ್ ಆವೃತ್ತಿಯನ್ನು ಮಾರುಕಟ್ಟೆಗೆ ಬಿಡುಗಡೆಮಾಡಿದೆ.
ನೂತನ ಮೊಟೊ 6 ಪ್ಲಸ್ ಆವೃತ್ತಿಯಲ್ಲಿ ಸೆಲ್ಫಿಗಾಗಿ 8 ಎಂಪಿ ಹೆಚ್‍ಡಿಆರ್ ಕ್ಯಾಮೆರಾ, ಹಿಂದುಗಡೆ 12+5 ಎಂಪಿ ಹೆಚ್‍ಡಿಆರ್ ಜೊತೆಗೆ ಡ್ಯುಯಲ್ ಟೋನ್ ಫ್ಲಾಶ್ ಹೊಂದಿದೆ. ಗೋಲ್ಡ್, ಡೀಪ್ ಇಂಡಿಗೋ ಹಾಗೂ ನಿಮ್‍ಬಸ್ ಬಣ್ಣಗಳಲ್ಲಿ ಫೋನ್ ಲಭ್ಯವಿದ್ದು, ಮೊಟೊರೊಲ ಆಫ್‍ಲೈನ್, ಆನ್‍ಲೈನ್ ಸ್ಟೋರ್ ಹಾಗೂ ಅಮೇಜಾನ್ ಜಾಲತಾಣದಲ್ಲಿ ಸಿಗಲಿದೆ.
Advertisement
Advertisement
ಮೊಟೊ 6 ಪ್ಲಸ್ ಫೋನಿನ ಮೇಲೆ ಪೇಟಿಎಂ ಗ್ರಾಹಕರು 3,000 ರೂಪಾಯಿಗಳ ಕ್ಯಾಶ್ ಡಿಸ್ಕೌಂಟ್ ನೀಡಲಾಗಿದ್ದು, ಗ್ರಾಹಕರು ಆಫ್‍ಲೈನ್ ಮಾರುಕಟ್ಟೆಗಳಲ್ಲಿ ಪೇಟಿಎಂ ಆ್ಯಪ್ ಮೂಲಕ ಹಣ ಪಾವತಿಸಿದರೆ, ತಕ್ಷಣವೇ ಡಿಸ್ಕೌಂಟ್ ಹಣ ಖಾತೆಗೆ ವರ್ಗಾವಣೆಗೊಳ್ಳುತ್ತದೆ.
Advertisement
ಇದಲ್ಲದೇ ಜಿಯೋ ಆ್ಯಪ್ ಗ್ರಾಹಕರು ಸಹ 4,500 ರೂಪಾಯಿ ವರೆಗಿನ ಕ್ಯಾಶ್ ಡಿಸ್ಕೌಂಟ್ ಇದೆ. ಗ್ರಾಹಕರು ಜಿಯೋದ 198 ಹಾಗೂ 299 ರೂಪಾಯಿಗಳನ್ನು ರೀಚಾರ್ಜ್ ಮಾಡಿಸಿದರೆ ಕೂಡಲೇ 2,200 ರೂಪಾಯಿ ಕ್ಯಾಶ್ ಡಿಸ್ಕೌಂಟ್ ಜೊತೆಗೆ, 1,250 ರೂಪಾಯಿ ಮೌಲ್ಯದ ಕ್ಲಿಯರ್ ಟ್ರಿಪ್ ಕ್ಯಾಶ್‍ಬ್ಯಾಕ್ ವೋಚರ್ ಹಾಗೂ 1,000 ರೂಪಾಯಿ ಮೌಲ್ಯದ Ajio.com ಡಿಸ್ಕೌಂಟ್ ವೋಚರ್ ಪಡೆದುಕೊಳ್ಳಬಹುದು.
Advertisement
ಮೊಟೊ 6 ಪ್ಲಸ್ ಫೋನಿನ ಗುಣವೈಶಿಷ್ಟ್ಯಗಳು:
ಬೆಲೆ ಎಷ್ಟು?
6 ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿಗೆ 22,499 ರೂಪಾಯಿ ಬೆಲೆ ನಿಗದಿ ಪಡಿಸಿದೆ. ಭಾರತದಲ್ಲಿ ಒಂದೇ ಆವೃತ್ತಿ ಲಭ್ಯವಿರಲಿದೆ.
ಬಾಡಿ ಮತ್ತು ಡಿಸ್ಪ್ಲೇ:
160 x 75.5 x 8 ಮಿ.ಮೀ., 167 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ), 5.9 ಇಂಚಿನ ಐಪಿಸಿ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್ (1080×2160 ಪಿಕ್ಸೆಲ್, 18:9 ಅನುಪಾತ 409ಪಿಪಿಐ)
ಪ್ಲಾಟ್‍ಫಾರಂ ಮತ್ತು ಮೆಮೊರಿ:
ಆಂಡ್ರಾಯ್ಡ್ 8.0 (ಓರಿಯೋ), ಸ್ನ್ಯಾಪ್ ಡ್ರಾಗನ್ 636 ಅಕ್ಟಾ ಕೋರ್ ಪ್ರೊಸೆಸರ್, 2.2 ಗೀಗಾಹರ್ಟ್ಸ್ ಸ್ಪೀಡ್, ಅಡ್ರಿನೊ 508 ಗ್ರಾಫಿಕ್ ಪ್ರೊಸೆಸರ್, 6 ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿ, ಹೆಚ್ಚುವರಿಯಾಗಿ 256 ಜಿಬಿ ವರೆಗೆ ವಿಸ್ತರಿಸಬಹುದು.
ಕ್ಯಾಮೆರಾ ಹಾಗೂ ಇತರೆ ಫೀಚರ್ ಗಳು:
ಮುಂಭಾಗ 8 ಎಂಪಿ, ಸಾಫ್ಟ್ ಟೋನ್ ಸೆಲ್ಫಿ ಕ್ಯಾಮೆರಾ, ಹಿಂಭಾಗ 12+5 ಎಂಪಿ ಆಟೋಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್ ಹೊಂದಿದೆ. ಜೊತೆಗೆ ಫಿಂಗರ್ ಪ್ರಿಂಟ್ ಸೆನ್ಸರ್, 3,200 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿ ಹಾಗೂ 15 ವೋಟ್ಸ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ.
Say hello to the all the new #motog6plus! Packed with a smart dual rear camera system & google lens, blazing-fast 6 GB RAM, a large 15 cm (5.9) full HD+ 18:9 max vision display & more, it is now available in stores and on Amazon India for Rs.22,499. pic.twitter.com/AjJtnYDF12
— Motorola India (@motorolaindia) September 10, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv