ಉಡುಪಿ: ದೇವಾಲಯಗಳ ನಗರಿ ಉಡುಪಿಯಲ್ಲಿ ಇಂದು ಮಾತೆ ಮರಿಯಮ್ಮನ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಏಸುಕ್ರಿಸ್ತನ ತಾಯಿ ಮೇರಿಯನ್ನು ತೊಟ್ಟಿಲಿನಲ್ಲಿ ತೂಗಿ-ಬಣ್ಣಬಣ್ಣದ ಹೂವು ಎಸೆದು ಭೂಮಿಗೆ ಸ್ವಾಗತಿಸಲಾಯಿತು.
ಕರಾವಳಿ ಕ್ರೈಸ್ತರಲ್ಲಿ ಇಂದು ಹಬ್ಬದ ಸಂಭ್ರಮವಿತ್ತು. ಇಂದು ಮಾತೆ ಮೇರಿಯಮ್ಮನ ಜನ್ಮದಿನ. ಏಸುಕ್ರಿಸ್ತನ ತಾಯಿ ಮಾತೆ ಮೇರಿ ಇಂದು ಹುಟ್ಟಿದ ದಿನ. ಹೀಗಾಗಿ ಎಲ್ಲಾ ಕೆಥೋಲಿಕ್ ಪಂಗಡದ ಚರ್ಚ್ ಗಳಲ್ಲೂ ಇಂದು ಮೋತಿ ಫೆಸ್ಟನ್ನು ಆಚರಿಸಿದರು. ಮದರ್ ಆಫ್ ಸಾರೋಸ್ ಚರ್ಚ್ ನಲ್ಲಿ ಅದ್ಧೂರಿಯಾಗಿ ಮೋಂತಿ ಫೆಸ್ಟ್ ನಡೆಯಿತು. ಧರ್ಮಗುರುಗಳು ಮಾತೆ ಮೇರಿಯನ್ನು ತೊಟ್ಟಿಲಿನಲ್ಲಿ ಹೊತ್ತು ತರುವ ಮೆರವಣಿಗೆಯ ನೇತೃತ್ವ ವಹಿಸಿದ್ದರು. ಶಿಸ್ತುಬದ್ಧ ವಾದ್ಯಗೋಷ್ಠಿಯ ಹಿನ್ನೆಲೆಯಲ್ಲಿ ಪೂಜಾವಿಧಿ ನಡೆಯಿತು.
Advertisement
Advertisement
ಚರ್ಚ್ ಗೆ ಬರುವ ಭಕ್ತರು ಮನೆಯಲ್ಲೇ ಬೆಳೆದ ಹೂವನ್ನು ತರುತ್ತಾರೆ. ಪೂಜಾವಿಧಿ ಸಂದರ್ಭ ಭಕ್ತರು ಮಾತೆ ಮೇರಿಯನ್ನು ಮಲಗಿಸಿದ ತೊಟ್ಟಿಲಿನತ್ತ ಬಣ್ಣಬಣ್ಣದ ಹೂವು ಎಸೆಯುತ್ತಾರೆ. ವಿವಿಧ ಬಣ್ಣದ ಹೂವುಗಳು ತೊಟ್ಟಿಲಿನತ್ತ ತೂರಿಬರುವ ಸುಂದರ ದೃಶ್ಯವನ್ನು ಕಣ್ತುಂಬಿಕೊಳ್ಳುವುದೇ ಚೆಂದ. ಮಾಂಸಪ್ರಿಯ ಕ್ರೈಸ್ತ ಸಮುದಾಯದವರು ಇಂದು ಶುದ್ಧ ಸಸ್ಯಾಹಾರಿಗಳು. ಮನೆಯಲ್ಲೇ ಬೆಳೆದ ಹೂವುಗಳನ್ನು- ತರಕಾರಿಗಳನ್ನು ಚರ್ಚ್ ಗೆ ತಂದು ಪೂಜಿಸುತ್ತಾರೆ. ಧರ್ಮಗುರುಗಳು ಚರ್ಚ್ ಗೆ ಬಂದ ಭಕ್ತರಿಗೆ ತೆನೆಗಳನ್ನು ವಿತರಿಸುತ್ತಾರೆ.
Advertisement
Advertisement
ಮೈಕಲ್ ರೋಡ್ರೀಗಸ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಏಸುಕ್ರಿಸ್ತ ನಮ್ಮ ದೇವರು. ದೇವರನ್ನು ಹೆತ್ತು ಭೂಮಿಗೆ ತಂದ ಮಾತೆ ಮರಿಯಮ್ಮನ ಜನ್ಮದಿನವನ್ನು ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸಿದ್ದೇವೆ. ಬೇರೆ ಹಬ್ಬಗಳಿಗೆ ಹೋಲಿಸಿದರೆ ಮೋಂತಿ ಫೆಸ್ಟ್ ಕರಾವಳಿ ಜಿಲ್ಲೆಯಲ್ಲಿ ಬಹಳ ವಿಭಿನ್ನವಾಗಿ ಆಚರಿಸಲ್ಪಡುವ ಹಬ್ಬ ಅಂತ ಹೇಳಿದರು.
ಮೋಂತಿ ಹಬ್ಬವನ್ನು ತೆನೆ ಹಬ್ಬ ಅಂತಾನೂ ಕರೆಯುತ್ತಾರೆ. ಹಿಂದೂಗಳು ಹೊಸತು ಹಬ್ಬ ಅಚರಿಸ್ತಾರೆ. ವಿದೇಶದಲ್ಲಿರುವ ಕುಟುಂಬ ಸದಸ್ಯರಿಗೆ ಹೊಸ ತೆನೆಯನ್ನು ವಿದೇಶಕ್ಕೂ ಕಳುಹಿಸಿಕೊಡಲಾಗುತ್ತದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv