ಬೆಂಗಳೂರು: ಹೊಸ ವರ್ಷಕ್ಕೆ ದಿನಗಣನೆ ಶುರುವಾಗಿದೆ. ಅತ್ತ ನವಮಾಸ ತುಂಬುತ್ತಿರುವ ಅಮ್ಮಂದಿರು ಹೊಸ ವರ್ಷಕ್ಕೆ ಹೆರಿಗೆ ಮಾಡಿಸಲು ದುಂಬಾಲು ಬೀಳುತ್ತಿದ್ದಾರೆ. ಕೇವಲ ಹೊಸ ವರ್ಷ ನಯಾ ದಿನ ಅನ್ನುವ ಕಾರಣವಲ್ಲ. ಆ ದಿನ ಹುಟ್ಟುವ ಮಗುವಿನ ಅದೃಷ್ಟವೇ ಬದಲಾಗುತ್ತೆ.
ನವಮಾಸವೂ ತನ್ನ ಕಂದನಿಗಾಗಿ ಚಡಪಡಿಸುವ ಅಮ್ಮ ತನ್ನ ಕರುಳ ಕುಡಿ ಒಳ್ಳೆಯ ದಿನವೇ ಪ್ರಪಂಚ ನೋಡಬೇಕು ಅಂತಾ ಬಯಸುತ್ತಾರೆ. ಆದರೆ ಈಗ ಫ್ಯಾನ್ಸಿ ನಂಬರ್ ಗಳ ಸೆಳೆತ, ಒಳ್ಳೆಯ ದಿನ ನೋಡಿಯೇ ಡೆಲಿವರಿ ಡೇಟ್ ಅಡ್ಜೆಸ್ಟ್ ಮೆಂಟ್ ಮಾಡುವ ಟ್ರೆಂಡ್ ಸಿಕ್ಕಾಪಟ್ಟೆ ಜೋರಾಗಿದೆ. ಅದರಲ್ಲೂ ಹೆರಿಗೆಗೆ ಅಸುಪಾಸಿನಲ್ಲಿರುವವರು ಹೊಸ ವರ್ಷ ಜನವರಿ ಒಂದರಂದು ಡೆಲಿವರಿ ಮಾಡಿಸಲು ವೈದ್ಯರಿಗೆ ಡಿಮ್ಯಾಂಡ್ ಇಡುತ್ತಿದ್ದಾರೆ. ರಿಸ್ಕಿ ಇಲ್ಲದ ಡೆಲಿವರಿಗಳನ್ನು ಅವರಿಚ್ಚೆಯ ದಿನವೇ ಮಾಡಬಹುದು. ಆದರೆ ಸ್ವಾಭಾವಿಕವಾಗಿ ಹೆರಿಗೆ ನೋವು ಬಂದಾಗ ನಾವು ಏನೂ ಮಾಡಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳುತ್ತಾರೆ.
ಸಾಮಾನ್ಯವಾಗಿ ಮಂಗಳವಾರ ಡೆಲಿವರಿ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಾರೆ. ಆದರೆ ಈ ಬಾರಿ ಜನವರಿ ಒಂದು ಮಂಗಳವಾರ ಬಂದರೂ ಅಂದೇ ಆಗಬೇಕು ಅಂತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಜ್ಯೋತಿಷಿಗಳ ಸಲಹೆ. ಜನವರಿ ಒಂದರಂದು ಸ್ವಾತಿ ನಕ್ಷತ್ರ, ತುಲಾ ರಾಶಿ ಇರುವುದರಿಂದ ಅದೃಷ್ಟದ ಸಂಕೇತವಾಗಿರುತ್ತದೆ. ಹೀಗಾಗಿ ಈ ಡೇಟ್ ಗೆ ಡಿಮ್ಯಾಂಡ್ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.
ಹೊಸ ವರ್ಷ ಅಂದರೆ ಒಂಥರ ಹೊಸ ಬದುಕಿನ ಪ್ರಾರಂಭ. ಆ ದಿನ ಕಂದನ ಆಗಮನಕ್ಕೆ ಕಾಯುವ ಅಮ್ಮಂದಿರು. ಅಮ್ಮನ ತವಕ ಗರ್ಭದೊಳಗಿನ ಕಂದಮ್ಮಗೆಲ್ಲ ಅರ್ಥವಾಗುತ್ತಾ? ಒಳ್ಳೆ ದಿನದ ಡೆಲಿವರಿಗೆ ಆಸೆಗೆ ಬಿದ್ದು ತೊಂದರೆ ತೆಗೆದುಕೊಳ್ಳಬಾರದು ಎಂದು ವೈದ್ಯರು ಸಲಹೆ ನೀಡುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv