ಭೋಪಾಲ್: ಮಧ್ಯಪ್ರದೇಶದ ಕ್ಯಾಬಿನೆಟ್‍ನ ಕ್ರೀಡಾ ಸಚಿವೆ ಯಶೋಧರ ರಾಜೆ ಸಿಂಧಿಯಾ ಅವರು ವೇದಿಕೆಯಲ್ಲಿ ತಾಯಿಯ ಭಾವಚಿತ್ರ ಇಲ್ಲದ್ದಕ್ಕೆ ಬಿಜೆಪಿ ಮುಖಂಡರು ಉಪಸ್ಥಿತರಿದ್ದ ಪಕ್ಷದ ರಾಜ್ಯ ಕಾರ್ಯಕಾರಿ ಸಭೆಯಿಂದ ಹೊರ ಬಂದಿದ್ದಾರೆ.
ರಾಜ್ಯ ಬಿಜೆಪಿ ಕಾರ್ಯಕಾರಿ ಸಭೆಯಲ್ಲಿ ಎಲ್ಲ ಬಿಜೆಪಿ ಹಿರಿಯ ಮುಖಂಡರ ಭಾವಚಿತ್ರವಿತ್ತು. ಆದರೆ ಅವರ ತಾಯಿಯ ಭಾವಚಿತ್ರ ಇಲ್ಲದ್ದಕ್ಕೆ ಕೋಪಗೊಂಡು ಸಭೆಯಿಂದ ಹೊರಗೆ ಬಂದಿದ್ದಾರೆ.
ಮಧ್ಯಪ್ರದೇಶದಲ್ಲಿ ಬಿಜೆಪಿ ಅಸ್ಥಿತ್ವಕ್ಕೆ ಬರಲು ನಮ್ಮ ತಾಯಿ ರಾಜಮಾತಾ ವಿಜಯ ರಾಜೆ ಸಿಂಧಿಯಾ ಕಾರಣ. ಅಟಲ್ ಬಿಹಾರಿ ವಾಜಪೇಯಿ, ದೀನ್ ದಯಾಳ್ ಉಪಾಧ್ಯಾಯ, ಶಮಾ ಪ್ರಸಾದ್ ಮುಖರ್ಜಿ, ಕುಸಾಭಾ ಠಾಕ್ರೆ ಅವರಂತಹ ಇತರರ ಭಾವಚಿತ್ರಗಳೊಂದಿಗೆ ನಮ್ಮ ತಾಯಿಯ ಚಿತ್ರ ಏಕೆ ಇಲ್ಲವೆಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೇ ರಾಜಾಮಾತಾ ಕೂಡ ಈ ಪಕ್ಷದ ಸ್ಥಾಪಕ ಸದಸ್ಯರಾಗಿದ್ದಾರೆ. ತನ್ನ ಇಡೀ ಜೀವನವನ್ನೇ ಪಕ್ಷಕ್ಕಾಗಿ ಮುಡಿಪು ಇಟ್ಟಿದ್ದಾರೆ ಎಂದು ಯಶೋಧರಾ ಆಕ್ರೋಶ ಹೊರಹಾಕಿದ್ದಾರೆ.
ಸ್ಥಳದಲ್ಲಿದ್ದ ಬಿಜೆಪಿ ನಾಯಕರು ತಪ್ಪನ್ನು ಒಪ್ಪಿಕೊಂಡು ರಾಜಾಮಾತೆಯ ಭಾವಚಿತ್ರವನ್ನು ವೇದಿಕೆಯಲ್ಲಿ ಇರಿಸಿ, ಸಿಂಧಿಯಾ ಅವರ ಬಳಿ ಕ್ಷಮೆಯಾಚಿಸಿದರು ಸಭೆಗೆ ಮರಳಿ ಬರಲು ನಿರಾಕರಿಸಿದ್ದಾರೆ.
ಭೋಪಾಲ್ ನಲ್ಲಿ ಸೆಪ್ಟಂಬರ್ 25 ರಂದು ದೀನ್ ದಯಾಳ್ ಉಪಾಧ್ಯಯ ಜನ್ಮದಿನಾಚರಣೆ ಅಂಗವಾಗಿ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಮುಖ್ಯಸ್ಥ ಅಮಿತ್ ಶಾ ಆಗಮಿಸಲಿದ್ದಾರೆ. ಹೀಗಾಗಿ ಕಾರ್ಯಕರ್ತ ಮಹಾಕುಂಬಕ್ಕೆ ಸಿದ್ಧತೆಗಳನ್ನು ಪರಿಶೀಲಿಸಲು ಈ ಸಭೆಯನ್ನು ಕರೆಯಲಾಗಿತ್ತು.
ಸಿಂಧಿಯಾ ಅವರು ಮಾತ್ರವಲ್ಲದೇ ಮಾಜಿ ರಾಜ್ಯ ಬಿಜೆಪಿ ಅಧ್ಯಕ್ಷ ನಂದ್ ಕುಮಾರ್ ಚೌಹಣ್ ಅವರು ಕೂಡ ವೇದಿಕೆಯಲ್ಲಿ ಸ್ಥಳ ನೀಡದೇ ಇದ್ದುದಕ್ಕೆ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv