ಮುಂಬೈ: 19 ವರ್ಷದ ಯುವತಿಯನ್ನು ತಾಯಿಯ ಗೆಳೆಯನೇ ಅತ್ಯಾಚಾರ ಎಸಗಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.
ಆರೋಪಿಯನ್ನು 36 ವರ್ಷದ ರಿತೇಶ್ ಪಾದ್ಗಲ್ವಾರ್ ಎಂದು ಗುರುತಿಸಲಾಗಿದ್ದು, ಈ ಕುರಿತು ನಾಗ್ಪುರ ನಗರದ ಜರಿಪಾತ್ಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸದ್ಯಕ್ಕೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Advertisement
ಆರೋಪಿ ನಾಗ್ಪುರದ ಹುಡ್ಕೊ ಪ್ರದೇಶದಲ್ಲಿ ವಾಸಿಸುತ್ತಿದ್ದು, ಸ್ವಂತ ಕ್ಯಾಟರಿಂಗ್ ವ್ಯಾಪಾರ ಮಾಡುತ್ತಿದ್ದನು. ಸಂತ್ರಸ್ತೆಯ ತಾಯಿ ಕೂಡ ಅದೇ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಸಂತ್ರಸ್ತೆಯ ತಾಯಿ ಪತಿಯನ್ನು ಬಿಟ್ಟು ಮಗಳ ಜೊತೆ ಬೇರೆ ವಾಸಿಸುತ್ತಿದ್ದರು. ಈ ಕಾರಣದಿಂದ ತಾಯಿಗೆ ಹತ್ತಿರವಾಗಲು ಪ್ರಯತ್ನಿಸುತ್ತಿದ್ದನು. ಬಳಿಕ ಸಂತ್ರಸ್ತೆಯ ತಾಯಿಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದು, ಪದೇ ಪದೇ ರಿತೇಶ್ ಮನೆಗೆ ಬಂದು ಹೋಗುತ್ತಿದ್ದನು.
Advertisement
Advertisement
ದಿನ ಕಳೆದಂತೆ ಆರು ತಿಂಗಳ ನಂತರ ಆರೋಪಿ ರಿತೇಶ್ ಸಂತ್ರಸ್ತೆ ಮನೆಯಲ್ಲಿ ಅವರೊಂದಿಗೆ ವಾಸಿಸುತ್ತಿದ್ದನು. ಈ ವೇಳೆ ಆರೋಪಿ ಸಂತ್ರಸ್ತೆ ಬಾತ್ರೂಮಿಗೆ ಹೋಗುತ್ತಿದ್ದಾಗ ಅಥವಾ ಬಟ್ಟೆ ಬದಲಾಯಿಸುವಾಗ ಯಾವಾಗಲೂ ಕಿರುಕುಳ ನೀಡುತ್ತಿದ್ದನು. ಆದರೆ ತನ್ನ ತಾಯಿ ಬೇಸರ ಮಾಡಿಕೊಳ್ಳುತ್ತಾರೆ ಎಂದು ಈ ಬಗ್ಗೆ ತಾಯಿಗೂ ಹೇಳಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಮಂಗಳವಾರ ಮಧ್ಯಾಹ್ನ ಸಂತ್ರಸ್ತೆ ತಾಯಿ ಕೆಲಸಕ್ಕೆ ಹೋಗಿದ್ದಾರೆ. ಆಗ ಆರೋಪಿ ಈ ಸಮಯವನ್ನು ದುರುಪಯೋಗ ಪಡಿಸಿಕೊಂಡು ಸಂತ್ರಸ್ತೆಯ ಬಳಿ ಒಂದು ಲೋಟ ನೀರು ಕೇಳಿದ್ದಾನೆ. ಬಳಿಕ ತನ್ನೊಂದಿಗೆ ದೈಹಿಕ ಸಂಬಂಧ ಬೆಳೆಸುವಂತೆ ಕೇಳಿಕೊಂಡಿದ್ದಾನೆ. ಆದರೆ ಇದಕ್ಕೆ ಸಂತ್ರಸ್ತೆ ನಿರಾಕರಿಸಿದ್ದಾಳೆ. ಆಗ ಆರೋಪಿ ಬಲವಂತವಾಗಿ ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅಷ್ಟೇ ಅಲ್ಲದೇ ಈ ಘಟನೆಯ ಬಳಿಕ ಈ ಬಗ್ಗೆ ಯಾರಾದರೂ ಹೇಳಿದರೆ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಆದರೆ ತಾಯಿ ಮನೆಗೆ ಬಂದ ತಕ್ಷಣ ನಡೆದ ಘಟನೆಯನ್ನು ವಿವರಿಸಿದ್ದಾರೆ. ಕೂಡಲೇ ಇಬ್ಬರು ಜರಿಪತ್ಕಾ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ.
ಸದ್ಯಕ್ಕೆ ಐಪಿಸಿ ಸೆಕ್ಷನ್ 376 (2)(ಎಫ್) ಮತ್ತು 506 (ಬಿ) ಅಡಿಯಲ್ಲಿ ಆರೋಪಿ ರಿತೀಶ್ ವಿರುದ್ಧ ದೂರು ದಾಖಲಾಗಿದ್ದು, ಆತನನ್ನು ಬಂಧಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv