ಯಾದಗಿರಿ: ತಾಯಿಯೊಬ್ಬಳು ತನ್ನ ಆರು ತಿಂಗಳ ಗಂಡು ಮಗುವನ್ನು ರೈಲಿನಲ್ಲಿಯೇ ಬಿಟ್ಟುಹೋಗಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಗುಂತಕಲ್-ಗುಲ್ಬರ್ಗಾ ಪ್ಯಾಸೆಂಜರ್ ರೈಲಿನಲ್ಲಿ ಮಗು ಪತ್ತೆಯಾಗಿದೆ. ಮಗು ಅನಾಥವಾಗಿರುವುದು ಯಾದಗಿರಿ ರೈಲು ನಿಲ್ದಾಣದಲ್ಲಿ ಪತ್ತೆಯಾಗಿದ್ದು, ಮಗುವಿನ ಜೊತೆ ಒಂದು ಬ್ಯಾಗ್ ಸಹ ಸಿಕ್ಕಿದೆ. ಬ್ಯಾಗ್‍ನಲ್ಲಿ ರಾಯಚೂರುನಿಂದ ಯಾದಗಿರಿ ವರೆಗಿನ ರೈಲ್ವೆ ಟಿಕೆಟ್, ತಾಯಿಯ ಫೋಟೋ ಮತ್ತು ಒಂದು ಮೊಬೈಲ್ ಪತ್ತೆಯಾಗಿದೆ.
- Advertisement
- Advertisement
ಪ್ರಯಾಣಿಕರ ಸಹಾಯದಿಂದ ಮಗುವನ್ನು ಗುಲ್ಬರ್ಗಾ ರೈಲು ನಿಲ್ದಾಣಕ್ಕೆ ತಲುಪಿಸಲಾಗಿದೆ. ಮಗುವನ್ನು ವಶಕ್ಕೆ ಪಡೆದ ಆರ್‍ಪಿಎಫ್ ಪೊಲೀಸರು ಮಕ್ಕಳ ಸಂರಕ್ಷಣ ಕೇಂದ್ರಕ್ಕೆ ಹಸ್ತಾಂತರಿಸಿದ್ದಾರೆ. ಪೊಲೀಸರು ತಾಯಿಯ ಪತ್ತೆಗಾಗಿ ಜಾಲ ಬೀಸಿದ್ದಾರೆ. ವಾಡಿ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
- Advertisement