ಬಳ್ಳಾರಿ: ಹೆಣ್ಣು ಮಗು (Girl Child) ಹುಟ್ಟಿದ್ದಕ್ಕೆ ಹೆತ್ತ ತಾಯಿಯೇ ಎರಡು ತಿಂಗಳ ಹಸುಗೂಸು ಕಾಲುವೆಗೆ ಎಸೆದು ಕೊಲೆ ಮಾಡಿರುವ ಘಟನೆ ಬಳ್ಳಾರಿ (Ballari) ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ ನಲ್ಲಿ ನಡೆದಿದೆ.
ಪ್ರಿಯಾಂಕಾ ದೇವಿ ತನ್ನ ಮಗುವನ್ನ ಕಾಲುವೆಗೆ ಎಸೆದು ಕೊಲೆ ಮಾಡಿದ ಪಾಪಿ. ಪ್ರಿಯಾಂಕಾದೇವಿ ಪತಿ ಸರೋಜ್ ಕುಮಾರ್ ಖಾಸಗಿ ಕಂಪನಿಯಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: 15 ತಿಂಗಳ ಗೃಹಲಕ್ಷ್ಮಿ ಹಣ ಕೂಡಿಟ್ಟು ಸಿಎಂ ಭಾವಚಿತ್ರದ ಬಾಗಿಲು ಕೆತ್ತಿಸಿದ ಮಹಿಳೆ
ಬಿಹಾರ (Bihar) ಮೂಲದ ದಂಪತಿ ತೋರಣಗಲ್‌ನಲ್ಲಿ ವಾಸವಾಗಿದ್ದರು. ಪ್ರಿಯಾಂಕಾ ದೇವಿ- ಸರೋಜ್ ಕುಮಾರ್ ದಂಪತಿಗೆ ಮೊದಲು ಇಬ್ಬರು ಹೆಣ್ಣು ಮಕ್ಕಳು ಜನಿಸಿದ್ದರು. ಮೂರನೇ ಹೆಣ್ಣು ಮಗು ಜನಿಸಿ ಎರಡು ತಿಂಗಳಾಗಿತ್ತು. ಮೂರನೆಯದ್ದೂ ಹೆಣ್ಣು ಮಗು ಆದ ಕಾರಣ ಪ್ರಿಯಾಂಕಾ ದೇವಿಯೇ ಮಗುವನ್ನು ಕಾಲುವೆಗೆ ಎಸೆದು ಕೊಲೆ ಮಾಡಿದ್ದಾಳೆ. ಆ ಬಳಿಕ ಮಗು ಇಲ್ಲ ಎಂದು ಗೋಳಾಡಿದ್ದಳು.
ಅಮಾಯಕಳಂತೆ ಪೊಲೀಸರ ಮುಂದೆ ಮಗು ಇಲ್ಲ ಎಂದು ಕಣ್ಣೀರಾಕಿದ್ದಳು. ಆ ಪತಿ ಸರೋಜ್ ಕುಮಾರ್ ತೋರಣಗಲ್ ಪೊಲೀಸ್ ಠಾಣೆಯಲ್ಲಿ ಮಗು ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದ. ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದಿದ್ದ ಪೊಲೀಸರು ಸಿಸಿ ಕ್ಯಾಮರಾ ಪರಿಶೀಲಿಸಿದಾಗ ತಾಯಿಯೇ ಮಗುವನ್ನ ಎತ್ತಿಕೊಂಡು ಹೋಗಿದ್ದು ಬೆಳಕಿಗೆ ಬಂದಿದೆ. ವಿಚಾರಣೆ ನಡೆಸಿದಾಗ ತಾನೇ ಮಗುವನ್ನು ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾಳೆ. ಪ್ರಿಯಾಂಕಾದೇವಿ ತೋರಣಗಲ್ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.