ಹಾವೇರಿ: ಭಾಷೆ ವಿಚಾರ ಬಂದಾಗ ಮಾತೃಭಾಷೆಯೇ ಮೊದಲು. ಯಾರೇ ಆಗಿರಲಿ, ದೇಶದಲ್ಲಿ ಆಗಲಿ, ಪ್ರಪಂಚದಲ್ಲೇ ಆಗಲಿ ಎಲ್ಲರಿಗೂ ಮಾತೃ ಭಾಷೆಯೇ ಮೊದಲು. ಸಣ್ಣ ಮಗುವಿದ್ದಾಗ ಭಾಷೆ ಕಲಿಸಿದರೆ ಬಹುಭಾಷೆ ಕಲಿಯುತ್ತವೆ. ಆಸಕ್ತಿ ಇದ್ದವರು ಬೇರೆ ಭಾಷೆಯನ್ನು ಕಲಿಯುತ್ತಾರೆ. ಭಾಷಾ ಕಲಿಕೆ ಆಸಕ್ತಿ ಮೇಲೆ ಹೋಗುತ್ತೆ. ಆದರೆ ಮಾತೃಭಾಷೆಯೆ ಶ್ರೇಷ್ಠ ಎಂದು ಬಿಜೆಪಿ ಸಂಸದ ಶಿವಕುಮಾರ್ ಉದಾಸಿ ಹೇಳಿದ್ದಾರೆ.
Advertisement
ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದ ಬಳಿ ರೈಲ್ವೆ ಮೇಲ್ಸೇತುವೆ ಲೋಕಾರ್ಪಣೆ ನಂತರ ಮಾತನಾಡಿದ ಅವರು, ಇದು ಯಾಕೆ ಇಷ್ಟು ದೊಡ್ಡ ನ್ಯೂಸ್ ಆಗ್ತಿದೆ. ನನಗೆ ಗೊತ್ತಿಲ್ಲ. ಬಿಜೆಪಿಗೆ ಬಂದು ತಪ್ಪು ಮಾಡಿದೆ ಎಂಬ ಸಚಿವ ಎಂಟಿಬಿ ನಾಗರಾಜ್ ಹೇಳಿಕೆ ಬಗ್ಗೆ ಅವರನ್ನೆ ಕೇಳಬೇಕು. ನಾನು ಒಬ್ಬ ಲೋಕಸಭಾ ಸದಸ್ಯ ಅಷ್ಟೇ. ಪಕ್ಷದ ಬಗ್ಗೆ ಮಾತಾಡೋಕೆ ಅಧ್ಯಕ್ಷರಿದ್ದಾರೆ. ನಾನೊಬ್ಬ ಎಂಪಿಯಾಗಿ ನನ್ನ ಆವೃತ್ತಿಯಲ್ಲಿ ಬರುವ ಕೆಲಸ ಮಾಡುವವನು. ಈ ಬಗ್ಗೆ ಪಕ್ಷದವರು ಪ್ರೆಸ್‍ಮೀಟ್ ಮಾಡು ಎಂದರೆ ನಾನು ಮಾಡಬೇಕು ಎಂದರು. ಇದನ್ನೂ ಓದಿ: ಏಪ್ರಿಲ್‍ನಲ್ಲಿ 7.83% ಕ್ಕೆ ಏರಿದೆ ಭಾರತದ ನಿರುದ್ಯೋಗ ದರ
Advertisement
Advertisement
ಪಿಎಸ್‍ಐ ನೇಮಕಾತಿಯಲ್ಲಿ ರದ್ದು ಮಾಡಿ, ಸರ್ಕಾರ ಮರುಪರೀಕ್ಷೆ ಮಾಡುವ ತೀರ್ಮಾನ ಕೈಗೊಂಡಿದೆ. ತನಿಖೆಯೂ ಅದರ ಜೊತೆಗೆ ನಡೆಯುತ್ತಿದೆ. ಈ ದ್ವಂದ್ವ ಇದ್ದೇ ಇರುತ್ತೆ. ತಪ್ಪು ಮಾಡಿದವರನ್ನು ಬಿಟ್ಟು ಉಳಿದವರಿಗೆ ಪರೀಕ್ಷೆ ಮಾಡಲಾಗ್ತಿದೆ. ತನಿಖೆಯಲ್ಲಿ ಇರೋ ಅಭ್ಯರ್ಥಿಗಳನ್ನು ಬಿಟ್ಟು ಉಳಿದವರಿಗೆ ಮರುಪರೀಕ್ಷೆ ನಡೆಯುತ್ತದೆ. ಸಾಮಾನ್ಯವಾಗಿ ನಾನೂ ಪ್ರಾಮಾಣಿಕವಾಗಿ ಪರೀಕ್ಷೆ ಬರೆದಿದ್ದೆ ಅಂದರೆ ನನಗೂ ಹಾಗೆ ಅನಿಸುತ್ತಿತ್ತು. ಆದರೆ ಹೊಸ ಅಭ್ಯರ್ಥಿಗಳನ್ನೇನೂ ಸೇರ್ಪಡೆ ಮಾಡಲ್ಲ ಎಂದು ಈಗಾಗಲೇ ಸರ್ಕಾರ ಹೇಳಿದೆ. ಅಪ್ರಮಾಣಿಕರ್ಯಾರು ಅವರು ಹೊರಗಡೆ ಹೋಗಬೇಕಿದೆ ಎಂದರು.