ಹೆತ್ತ ತಾಯಿಯೇ 9 ವರ್ಷದ ಮಗಳನ್ನು ಎರಡನೇ ಮಹಡಿಯಿಂದ ಎಸೆದು ಕೊಲೆ ಮಾಡಿದ್ಳು!

Public TV
2 Min Read
bng mother

ಬೆಂಗಳೂರು: ಹೆತ್ತ ತಾಯಿಯೇ 9 ವರ್ಷ ಮಗಳನ್ನು ಕಟ್ಟಡದ ಎರಡನೇ ಮಹಡಿಯಿಂದ ಎಸೆದು ಕೊಲೆ ಮಾಡಿರುವ ಶಾಕಿಂಗ್ ಘಟನೆ ಭಾನುವಾರ ಮಧ್ಯಾಹ್ನ ಜೆಪಿ ನಗರದಲ್ಲಿ ನಡೆದಿದೆ.

ಶ್ರೇಯಾ(9) ಕೊಲೆಯಾದ ಬಾಲಕಿ. ಮಗಳನ್ನು ತಳ್ಳಿದ ಆರೋಪದ ಅಡಿ ತಾಯಿ ಸ್ವಾತಿಯನ್ನು ಪುಟ್ಟೇನಹಳ್ಳಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಬೆಂಗಳೂರಿನ ಜೆಪಿ ನಗರದ ಜರಗನಹಳ್ಳಿಯಲ್ಲಿ ಕೋಲ್ಕತ್ತಾ ಮೂಲದ ಸರ್ಕಾರ್ ಮತ್ತು ಸ್ವಾತಿ ನೆಲೆಸಿದ್ದರು. ಪತಿ ಸರ್ಕಾರ್ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಶಿಕ್ಷಕಿಯಾಗಿದ್ದ ಸ್ವಾತಿ ಎರಡು ವರ್ಷಗಳಿಂದ ಮನೆಯಲ್ಲಿದ್ದಳು. ಕಳೆದ ಒಂದು ವರ್ಷದಿಂದ ಸರ್ಕಾರ್ ಬೇರೆ ಕಡೆ ನೆಲೆಸಿದ್ದರು.

ಇಂದು ಏನಾಯ್ತು?
ಮಧ್ಯಾಹ್ನ 3.30ರ ವೇಳೆಗೆ ಮನೆಯ 3 ಮಹಡಿಯಿಂದ ಸ್ವಾತಿ ಶ್ರೇಯಾಳನ್ನು ಎಸೆದಿದ್ದಾಳೆ. ನಂತರ ಕೆಳಗೆ ಬಂದು ನೋಡಿದಾಗ ಸ್ವಾತಿ ಜೀವಂತ ಇರುವುದನ್ನು ನೋಡಿದ್ದಾಳೆ. ಪುನಃ ಮಗುವನ್ನು ಎತ್ತಿಕೊಂಡು ಅದೇ ಜಾಗಕ್ಕೆ ಹೋಗಿ ಎರಡನೇ ಬಾರಿ ಮೇಲಿನಿಂದ ಕೆಳಗಡೆ ಎಸೆದಿದ್ದಾಳೆ.

ಗೊತ್ತಾಗಿದ್ದು ಹೇಗೆ?
ಸ್ವಾತಿ ಎರಡನೇ ಬಾರಿ ಬಂದು ಮಗುವನ್ನು ಎತ್ತಿಕೊಂಡು ಹೋಗಿ ಮೇಲಿನಿಂದ ಎಸೆದಿರುವುದನ್ನು ಅಲ್ಲಿದ್ದ ಪ್ರತ್ಯಕ್ಷದರ್ಶಿಗಳು ನೋಡಿದ್ದಾರೆ. ಮಗಳನ್ನು ಎಸೆಯುವುದನ್ನು ನೋಡಿದ ನಂತರ ಆಕೆಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಪೊಲೀಸರಿಗೆ ತಿಳಿಸಿದ್ದಾರೆ.

ಸ್ವಾತಿ ಮಾನಸಿಕ ಅಸ್ವಸ್ಥೆ ಎನ್ನುವ ಶಂಕೆ ವ್ಯಕ್ತವಾಗಿದೆ. 9 ವರ್ಷದ ಶ್ರೇಯಾಗೆ ಮಾತು ಬರುತ್ತಿರಲಿಲ್ಲ ಎನ್ನುವ ಲಭ್ಯವಾಗಿದೆ. ಪೊಲೀಸರು ಈಗ ಸ್ವಾತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪ್ರತ್ಯಕ್ಷದರ್ಶಿಗಳು ವಿವರಿಸಿದ್ದು ಹೀಗೆ:
ಶ್ರೇಯಾ ಬಿದ್ದದ್ದನ್ನು ಗಮನಿಸಿ ನನ್ನ ಮಗಳು ಮನೆಗೆ ಬಂದು ಅಮ್ಮ ಮಗು ಮೇಲಿನಿಂದ ಬಿದ್ದಿದ್ದಾಳೆ ಎಂದು ಹೇಳಿದಳು. ಕೂಡಲೇ ನಾನು ಮನೆಯ ಹೊರಗಡೆ ಬಂದೆ. ಆಗ ಆಕೆ ಮಗಳನ್ನು ಎತ್ತಿಕೊಂಡು ಮೇಲಕ್ಕೆ ಹೋಗುತ್ತಿದ್ದಳು. ಆಕೆಯನ್ನು ನಾನು ಹಿಂಬಾಲಿಸಿ ಹೋದೆ. ಅಷ್ಟರಲ್ಲಿ ಆಕೆ ಮೇಲುಗಡೆಗೆ ಹೋಗಿ ಮಗಳನ್ನು ಎಸೆದೇ ಬಿಟ್ಟಳು. ಶ್ರೇಯಾ ಕೆಳಗಡೆ ಬಿದ್ದ ಕೂಡಲೇ ನಮ್ಮ ಯಜಮಾನರಿಗೆ ಗೊತ್ತಾಯಿತು. ಅವರು ನೋಡಿದಾಗ ಆಕೆ ಮೃತಪಟ್ಟಿರುವುದು ಗೊತ್ತಾಯಿತು. 15 ನಿಮಿಷ ಆದ ಬಳಿಕ ಆಕೆ ನೈಟಿಯನ್ನು ಬದಲಾಯಿಸಿ ಚೂಡಿಧಾರ್ ಧರಿಸಿ ಮನೆಯಿಂದ ಕೆಳಗಡೆ ಇಳಿದಳು. ಮಗಳಿಗೆ ಸರಿಯಾಗಿ ಮಾತು ಬರುತ್ತಿರಲಿಲ್ಲ. ಪ್ರತಿದಿನ ಮಗಳ ಜೊತೆ ಸ್ವಾತಿ ಆಟವಾಡುತ್ತಿದ್ದಳು. ಆದರೆ ಇಂದು ಏನಾಯ್ತು ಗೊತ್ತಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.

bng mother girl 2

bng mother girl 5

bng mother girl 6

bng mother girl 1

bng mother 2 1

bng mother girl 3

bng mother girl 4

bng mother 2 2

Share This Article
Leave a Comment

Leave a Reply

Your email address will not be published. Required fields are marked *