Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮೂವತ್ತು ಕೋಟಿ ವೆಚ್ಚದಲ್ಲಿ ತಯಾರಾಗಲಿದೆ ‘ಮದರ್ ತೆರೇಸಾ’ ವೆಬ್ ಸರಣಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ಮೂವತ್ತು ಕೋಟಿ ವೆಚ್ಚದಲ್ಲಿ ತಯಾರಾಗಲಿದೆ ‘ಮದರ್ ತೆರೇಸಾ’ ವೆಬ್ ಸರಣಿ

Cinema

ಮೂವತ್ತು ಕೋಟಿ ವೆಚ್ಚದಲ್ಲಿ ತಯಾರಾಗಲಿದೆ ‘ಮದರ್ ತೆರೇಸಾ’ ವೆಬ್ ಸರಣಿ

Public TV
Last updated: May 18, 2024 10:16 am
Public TV
Share
3 Min Read
mother teresa 1
SHARE

ಬಡವರು ಹಾಗೂ ದೀನದಲಿತರ ಸೇವೆಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದ ಮಹಿಳೆ, ಪದ್ಮಶ್ರೀ ಪುರಸ್ಕೃತೆ, ಶಾಂತಿಗಾಗಿ ನೋಬೆಲ್ ಪ್ರಶಸ್ತಿ ಪಡೆದ  ಮದರ್ ತೆರೇಸಾ (Mother Teresa)  ಅವರ ಜೀವನ ಚರಿತ್ರೆ ಇದೀಗ  ವೆಬ್ ಸರಣಿಯಲ್ಲಿ (Web Series) ಮೂಡಿಬರಲಿದೆ.  ಸಾಹಿತಿ, ಚಿತ್ರಕಥೆಗಾರ ದಿ. ಜಾನ್‌ ಪಾಲ್ ಪುತ್ತುಸ್ಸೆರಿ, ಹಾಗೂ ನಿರ್ದೇಶಕ ಪಿ. ಚಂದ್ರಕುಮಾರ್‌ ಸೇರಿ ಮೂರು ವರ್ಷಗಳಿಂದ ಇವರ ಬಗ್ಗೆ ಮಾಹಿತಿ ಕಲೆಹಾಕಿ ಈ ಸೀರೀಸ್ ಮಾಡುತ್ತಿದ್ದಾರೆ. ಮದರ್ ತೆರೇಸಾ ವೆಬ್ ಸರಣಿಯ ಶೀರ್ಷಿಕೆ ಹಾಗೂ ಬ್ಯಾನರ್ ಅನಾವರಣ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.  ಈಗಾಗಲೇ ಮಲಯಾಳಂ ಚಿತ್ರರಂಗದಲ್ಲಿ ದೊಡ್ಡ  ಹೆಸರುವ  ಮಾಡಿರುವ  ಚಂದ್ರಶೇಖರ್ ಅವರು ಹಿಂದಿ. ಕನ್ನಡ ಸೇರಿದಂತೆ   ಬಹುಭಾಷೆಗಳಲ್ಲಿ ತಯಾರಾಗಲಿರುವ ಈ ಪ್ಯಾನ್ ಇಂಡಿಯಾ ವೆಬ್ ಸೀರೀಸ್ ನ್ನು ಸುಮಾರು 30 ಕೋಟಿ ರೂ.ಗಳ‌ ಬಿಗ್ ಬಜೆಟ್ ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ವಿಶೇಷವಾಗಿ ಈ ವೆಬ್ ಸರಣಿಯಲ್ಲಿ ಹಿರಿಯನಟ ಮಿಥುನ್ ಚಕ್ರವರ್ತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

mother teresa 3

ಮದರ್ ತೆರೇಸಾ ಅವರ ಬಾಲ್ಯ, ಹರೆಯದ ಜೀವನ ಹೇಗಿತ್ತು. ಹಾಗೂ ಅವರ ಹಿರಿಯ ವಯಸಿನಲ್ಲಿ ನಡೆದ ಘಟನೆಗಳು, ಸಮಾಜಸೇವೆ  ಇದನ್ನೆಲ್ಲ ಈ ಪ್ಯಾನ್ ಇಂಡಿಯಾ ವೆಬ್ ಸೀರೀಸ್ ಮೂಲಕ ನಿರ್ದೇಶಕ ಚಂದ್ರಶೇಖರ್ ಹೇಳಹೊರಟಿದ್ದಾರೆ. ಮದರ್ ತೆರೇಸಾ  ಅವರು ಎಲ್ಲೆಲ್ಲಿ ಹೋಗಿದ್ದರು, ಅವರು ಹೆಜ್ಜೆ ಇಟ್ಟ ನೆಲದಲ್ಲೇ ಶೂಟಿಂಗ್ ಮಾಡಲಾಗುತ್ತಿದೆ. ಅವರು ನೆಲೆಸಿದ್ದ ರೋಮ್. ಜೆರುಸಲೆನಿಯಂ, ಟೆಥ್‌ಲೆಹೆಮ್, ಮ್ಯಾಸಿಡೋನಿಯಾ. ಯುಕೆ. ಮತ್ತು ಇಟಲಿಯಂತಹ  ಸ್ಥಳಗಳ ಜೊತೆಗೆ ಮದರ್ ತೆರೇಸಾ ಅವರ ಜೀವನದ ಮೇಲೆ ಪ್ರಭಾವ ಬೀರಿದ ಪಶ್ಚಿಮ ಬಾಂಗಾಳ, ಬಾಂಗ್ಲಾದೇಶ, ಮುಂಬೈ, ಕೇರಳ. ಬಿಹಾರ. ಕರ್ನಾಟಕ ಮುಂತಾದ ಪ್ರಮುಖ ಸ್ಥಳಗಳಲ್ಲೆ ಚಿತ್ರೀಕರಣ ನಡೆಯಲಿದೆ. ತನ್ನ19ನೇ ವಯಸಿನಲ್ಲೇ  ಚಿತ್ರರಂಗಕ್ಕೆ ಬಂದ ನಿರ್ದೇಶಕ ಪಿ. ಚಂದ್ರಕುಮಾರ್ ಅವರು ಈಗಾಗಲೇ 150ಕ್ಕೂ ಹೆಚ್ಚು ಚಲನಚಿತ್ರಗಳನ್ನು ನಿರ್ದೇಶಿಸಿ, ರಾಜ್ಯಪ್ರಶಸ್ತಿ, ರಾಷ್ಟ್ರಪ್ರಶಸ್ತಿಗಳನ್ನು ಗಳಿಸಿದ್ದಾರೆ.

mother teresa 2

ಅವರು  ಚಿತ್ರದ ಕುರಿತಂತೆ ಮಾತನಾಡುತ್ತ  ಮದರ್ ತೆರೇಸಾ ಅವರ  ಹುಟ್ಟು,ಬಾಲ್ಯದಿಂದ ಆರಂಭಿಸಿ,ಅವರು ಭಾರತಕ್ಕೆ ಬಂದ ಮೇಲೆ ಏನೆಲ್ಲ‌ ಆಯಿತು ಅವರ ಸೋಷಿಯಲ್ ಸರ್ವೀಸ್ ಇದನ್ನೆಲ್ಲ ಇಟ್ಟುಕೊಂಡು ಸ್ಕ್ರಿಪ್ಟ್ ಹೆಣೆಯಲಾಗಿದೆ‌. ಪ್ರತಿ ಎಪಿಸೋಡಿಗೆ ಒಂದು ಕೋಟಿ ಬಜೆಟ್ ಹಾಕಿಕೊಂಡಿದ್ದೇವೆ.  ಅವರ ಹರೆಯದ ಪಾತ್ರಕ್ಕಾಗಿ ಹೊಸ ಪ್ರತಿಭೆಗಳ ಹುಡುಕಾಟ ನಡೆಯುತ್ತಿದ್ದು, ರಾಜ್ಯದಲ್ಲೂ  ಅಡಿಶನ್‌ ಮಾಡಲಾಗುತ್ತದೆ. ಹೆಸರಾಂತ ಕಲಾವಿದೆಯನ್ನು ಹಾಕಿಕೊಳ್ಳುವ ಸಲಹೆ ಬಂದರೂ ಅಂಥವರಲ್ಲಿ ತೆರೆಸಾ ಅವರನ್ನು ಕಾಣಲು ಸಾಧ್ಯವಿಲ್ಲ ಎಂದು ಹೊಸ ಮುಖಗಳನ್ನೇ ಹುಡುಕುತ್ತಿದ್ದೇವೆ. ಅವರು ಡಾರ್ಜಿರ್ಲಿಂಗ್ ನಲ್ಲಿ ಶಿಕ್ಷಕರಾಗಿ ಹೆಚ್ಚು ಕಾಲ ಕಳೆದಿದ್ದಾರೆ. ಅಲ್ಲದೆ ಅವರ ಬಗ್ಗೆ ಸಾಕಷ್ಟು ಕಾಂಟ್ರವರ್ಸಿ ಇದ್ದು, ಅದನ್ನೆಲ್ಲ ಈ  ಕಥೆಯಲ್ಲಿ ತಂದಿದ್ದೇವೆ. ತುಂಬಾ ನೈಜವಾಗಿ ಈ ಸೀರೀಸ್ ಮೂಡಿ ಬರಲಿದೆ ಎಂದರು.

 

ನಿರ್ಮಾಪಕ ಚಂದ್ರಶೇಖರ್ ಮಾತನಾಡುತ್ತ ಈಗಾಗಲೇ ಮಲಯಾಳಂ, ತಮಿಳು, ತೆಲುಗು, ಹಿಂದಿಯಲ್ಲಿ ಹಲವಾರು  ಸಿನಿಮಾ‌ಗಳನ್ನು ನಿರ್ಮಿಸಿದ್ದು ಕನ್ನಡದಲ್ಲಿ  ಮೊದಲಬಾರಿಗೆ ಮಾಡುತ್ತಿದ್ದೇವೆ. ಯಂಗ್ ತೆರೇಸಾ ಪಾತ್ರಕ್ಕಾಗಿ ಹುಡಕಾಟ ನಡೆದಿದೆ. ನಾಲ್ಕು ವರ್ಷದ ಹಿಂದೆಯೇ ಇದರ  ಪ್ಲ್ಯಾನ್ ಮಾಡಿದ್ದೆವು. ಮೂರು ಸೀಜನ್ ನಲ್ಲಿ ಒಟ್ಟು 30 ಎಪಿಸೋಡ್ ಗಳಲ್ಲಿ ಮದರ್ ತೆರೇಸಾ ಅವರ  ಕಥೆ ಮೂಡಿಬರಲಿದೆ. ಮುಂದಿನ ತಿಂಗಳು ಚಿತ್ರೀಕರಣ ಪ್ರಾರಂಭಿಸುತ್ತಿದ್ದೇವೆ. ಒಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಈ ಸೀರೀಸ್  ರಿಲೀಸಾಗಲಿದ್ದು, ಈ ಬಗ್ಗೆ ಮಾತುಕತೆ ಕೂಡ  ನಡೆಯುತ್ತಿದೆ. ಪತ್ರಕರ್ತರೊಬ್ಬರ ದೃಷ್ಟಿಕೋನದಲ್ಲಿ  ಮದರ್ ತೆರೆಸಾ ಅವರ ಜೀವನಗಾಥೆ  ಮೂಡಿಬರಲಿದೆ ಎಂದು ಹೇಳಿದರು. ಪಿ.ಸುಕುಮಾರ್ ಅವರ  ಛಾಯಾಗ್ರಹಣ, ಜರೀ ಅಮರದೇವ ಅವರ ಸಂಗೀತ ಇದ್ದು, ಅನಿತಾ ಮೆನ್ನನ್, ತನಿಮಾ ಮೆನ್ನನ್,  ಸಾಪಿಕೌರ್, ಜೋಷಿ ಜೋಸೆಫ್ ಪ್ರಮುಖ ತಾರಾಗಣದಲ್ಲಿದ್ದಾರೆ.

TAGGED:ChandrasekharMother TeresaWeb Seriesಚಂದ್ರಶೇಖರ್ಮದರ್ ತೆರೇಸಾವೆಬ್ ಸರಣಿ
Share This Article
Facebook Whatsapp Whatsapp Telegram

Cinema news

Dhurandhar 2 1
ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡ್ತಿದೆ ‘ಧುರಂಧರ್‌ 2’; 800 ಕೋಟಿ ಕ್ಲಬ್‌ ಸೇರುವತ್ತ ಓಟ
Bollywood Cinema Latest Top Stories
Dhurandhar 2
ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ ‘ಧುರಂಧರ್‌ 2’ – ಮೂರೇ ದಿನದಲ್ಲಿ ವಿಶ್ವಾದ್ಯಂತ 500 ಕೋಟಿ ಕಲೆಕ್ಷನ್‌
Bollywood Cinema Latest Top Stories
Puneeth Rajakumar
800 ಕೆ.ಜಿ ಕಂಚಿನ ಅಪ್ಪು ಪುತ್ಥಳಿ ಅನಾವರಣ
Bengaluru City Cinema Districts Karnataka Latest Sandalwood Top Stories
Moogathi Malli
ಮೂಗುತಿ ಮಲ್ಲಿ: ಚೂಟಿ ಹುಡುಗಿ, ಘಾಟಿ ಬೆಡಗಿ!
Cinema Latest Sandalwood Top Stories

You Might Also Like

Basavaraj Rayareddy Shivalinge Gowda UT Khader
Bengaluru City

ವಿಧಾನಸಭೆಯಲ್ಲಿ ಶಿವಲಿಂಗೇಗೌಡ VS ರಾಯರೆಡ್ಡಿ ಇಂಗ್ಲೀಷ್ ವಾರ್

Public TV
By Public TV
4 minutes ago
21 people arrested from 2 communities Mundaragi Gadgag
Districts

ನೀರಿನ ವಿಚಾರಕ್ಕೆ ಗಲಾಟೆ – 2 ಸಮುದಾಯದ 21 ಮಂದಿ ಅರೆಸ್ಟ್‌

Public TV
By Public TV
19 minutes ago
7 Dogs Kidnapped Outsmart Thieves And Walk 17 km Back Home In Incredible True Story
Latest

ಮಾಂಸದ ವ್ಯಾಪಾರಿಗಳಿಂದ ಪಾರಾಗಿ 17 ಕಿ.ಮೀ. ಕ್ರಮಿಸಿ ಮರಳಿ ಹಳ್ಳಿ ಸೇರಿದ 7 ನಾಯಿಗಳು

Public TV
By Public TV
38 minutes ago
Supreme Court
Court

ಹಿಂದೂ, ಬೌದ್ಧ, ಸಿಖ್‌ ಬಿಟ್ಟು ಬೇರೆ ಧರ್ಮಕ್ಕೆ ಮತಾಂತರಗೊಂಡರೆ ಎಸ್‌ಸಿ ಸ್ಥಾನಮಾನ ರದ್ದು: ಸುಪ್ರೀಂ ಕೋರ್ಟ್

Public TV
By Public TV
38 minutes ago
Delhi Assembly Bomb Threat
Crime

ದೆಹಲಿ ವಿಧಾನಸಭೆ, ಮೆಟ್ರೋ ಸ್ಟೇಷನ್‌ಗೆ ಬಾಂಬ್ ಬೆದರಿಕೆ

Public TV
By Public TV
48 minutes ago
Mudigere Police Station
Chikkamagaluru

PUC ಹುಡ್ಗ, SSLC ಹುಡ್ಗಿ ಪ್ರೇಮಕ್ಕೆ ಲವ್ ಜಿಹಾದ್ ಆರೋಪ, ಹಲ್ಲೆ – ದೂರಿಗೆ ಪ್ರತಿದೂರು

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?