Districts
ನನ್ನ ಪಾತ್ರ ಇರಲ್ಲ, ದಸರಾ ಉಸ್ತುವಾರಿ ಅಮ್ಮನೇ ನೋಡಿಕೊಳ್ಳುತ್ತಾರೆ: ಯದುವೀರ್ ಒಡೆಯರ್

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2017ರ ಅರಮನೆಯಲ್ಲಿ ಸಿಂಹಾಸನ ಜೋಡಣೆಯಲ್ಲಿ ನನ್ನ ಪಾತ್ರ ಇರುವುದಿಲ್ಲ. ಎಲ್ಲ ಕಾರ್ಯಕ್ರಮಗಳನ್ನು ಅಮ್ಮನೆ ನೋಡಿಕೊಳ್ಳುತ್ತಾರೆ ಎಂದು ಯದುವಂಶದ ಮಹಾರಾಜ ಯದುವೀರ್ ಒಡೆಯರ್ ಹೇಳಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇಂದು ಸಂಪ್ರದಾಯದಂತೆ ಸಿಂಹಾಸನ ಜೋಡಣೆಯಾಗಿದೆ. ಎಲ್ಲ ಕಾರ್ಯಕ್ರಮಗಳು ಅರಮನೆ ಸಂಪ್ರದಾಯದಲ್ಲಿ ನಡೆಯಲಿವೆ. ಅಮ್ಮನೆ ಎಲ್ಲ ಉಸ್ತುವಾರಿ ವಹಿಸಿಕೊಂಡು ಸಿದ್ಧತೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ವಿಜಯದಶಮಿಯ ಕಾರ್ಯಕ್ರಮಗಳು ಸಹ ನಿಗದಿಯಂತೆ ನಡೆಯಲಿವೆ. ಹಿರಿಯರು ನಡೆಸಿಕೊಂಡು ಬಂದಿರುವಂತೆ ಸಂಪ್ರದಾಯದ ಬದ್ಧವಾಗಿ ದಸರಾ ನಡೆಯಲಿದೆ. ನಾನು ಸಹ ದಸರಾ ಪೂಜೆಗಳಿಗೆ ಸಿದ್ಧವಾಗುತ್ತಿದ್ದೇನೆ. ಕಂಕಣಧಾರಣೆ ಕಾರ್ಯಕ್ರಮವು ನಿಗದಿಯಂತೆ ನಡೆಯಲಿದೆ ಎಂದು ಹೇಳಿದರು.
