ಕಾರವಾರ: ಆನಾರೋಗ್ಯದಿಂದ ಮೃತಪಟ್ಟ ಮಗನ ಶವದೊಂದಿಗೆ ಹೆತ್ತ ತಾಯಿ ನಾಲ್ಕು ದಿನ ಮನೆಯಲ್ಲಿ ದಿನ ಕಳೆದ ಮನಕಲಕುವ ಘಟನೆಯೊಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಮಠಕೇರಿಯಲ್ಲಿ ನಡೆದಿದೆ.
ವಿನಯ್ ಭಟ್ ಎಂಬವರು ತೀವ್ರ ಮದ್ಯವ್ಯಸನಿಯಾಗಿದ್ದು, ನಾಲ್ಕು ದಿನದ ಹಿಂದೆ ಲಿವರ್ ಸಮಸ್ಯೆಯಿಂದ ಮೃತಪಟ್ಟಿದ್ರು. ಇತ್ತ 80 ವರ್ಷದ ತಾಯಿ ಆಶಾ ವಿಷ್ಣುಭಟ್ ಕೂಡ ವಯೋಸಹಜತೆಯಿಂದ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದು, ಮಾತನಾಡುವ ಸ್ಥಿತಿಯಲ್ಲಿ ಕೂಡ ಇರಲಿಲ್ಲ. ಹೀಗಾಗಿ ಮನೆಯಲ್ಲಿ ಯಾರೂ ಇಲ್ಲದಿದ್ದರಿಂದ ತಾಯಿಗೂ ಕೂಡ ಮಗ ಸಾವನ್ನಪ್ಪಿರುವುದು ತಿಳಿದರೂ ಕೂಡ ಮನೆಯ ಬಾಗಿಲು ತೆರೆದು ಬೇರೆಯವರಿಗೆ ಹೇಳುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಮಗನ ಶವದ ಮುಂದೆಯೇ ಕುಳಿತು ರೋಧಿಸುವಂತಾಗಿತ್ತು.

ಮಗ ಸತ್ತು ನಾಲ್ಕು ದಿನ ಕಳೆದಿದ್ದ ಪರಿಣಾಮ ಹೆಣ ಕೊಳೆತ ವಾಸನೆ ಬಂದಿದ್ದರಿಂದ ಅಕ್ಕಪಕ್ಕದವರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಮನೆಯ ಬಾಗಿಲು ಒಡೆದು ಒಳಹೋದಾಗ ವಿಷಯ ಬೆಳಕಿಗೆ ಬಂದಿದೆ.
ಸದ್ಯ ಅನಾರೋಗ್ಯ ಪೀಡಿತ ತಾಯಿ ಆಶಾರವರನ್ನು ಅಂಕೋಲದ ಎ.ಜೆ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚೇತರಿಸಿಕೊಳ್ಳುತಿದ್ದಾರೆ ಅಂತ ಾಸ್ಪತ್ರೆ ಮೂಲಗಳು ತಿಳಿಸಿವೆ.







