ಹೈದರಾಬಾದ್: ತೆಲಂಗಾಣದ ಉದ್ಯಮಿ ಹಾಗೂ ಆತನ ತಾಯಿಯ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್)ಯ 6 ಮುಖಂಡರನ್ನು ಮಂಗಳವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಿಆರ್‌ಎಸ್ ಮುಖಂಡರು ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಉದ್ಯಮಿ ಗಂಗಮ್ ಸಂತೋಷ್ ಹಾಗೂ ಅವರ ತಾಯಿ ಗಂಗಮ್ ಪದ್ಮಾ ಏಪ್ರಿಲ್ 16 ರಂದು ಕಾಮರೆಡ್ಡಿಯ ಲಾಡ್ಜ್‌ನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದನ್ನೂ ಓದಿ: ಮೇ 9 ರಂದು ಎಲ್ಲಾ ದೇವಾಲಯಗಳಲ್ಲೂ ಲೌಡ್ ಸ್ಪೀಕರ್ ಖಚಿತ: ಮುತಾಲಿಕ್ ಎಚ್ಚರಿಕೆ
Advertisement
Advertisement
ಗಂಗಮ್ ಸಂತೋಷ್ ಆತ್ಮಹತ್ಯೆಗೂ ಮುನ್ನ ರಾಮಯಂಪೇಟೆ ಪುರಸಭೆ ಅಧ್ಯಕ್ಷ ಪಲ್ಲೆ ಜಿತೇಂದರ್ ಗೌಡ್, ಇತರ 5 ಟಿಆರ್‌ಎಸ್ ಮುಖಂಡರು ಸೇರಿದಂತೆ ಸರ್ಕಲ್ ಇನ್ಸ್ಪೆಕ್ಟರ್ ನಾಗಾರ್ಜುನ ರೆಡ್ಡಿ ಹೆಸರಿನೊಂದಿಗೆ ಫೊಟೋಗಳನ್ನು ತೋರಿಸಿ, ಚಿತ್ರಹಿಂಸೆ ನೀಡಿರುವುದಾಗಿ ಹೇಳಿರುವ ವೀಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದರು. ಇದನ್ನೂ ಓದಿ: ಕೋವಿಡ್ ಉಲ್ಬಣದಿಂದ ದೆಹಲಿಯಲ್ಲಿ ಶಾಲೆಗಳು ಬಂದ್? – ತಜ್ಞರ ಸಮಿತಿಯ ಸಲಹೆಗಳೇನು?
Advertisement
ಸಂತೋಷ್ ಹಾಗೂ ಅವರ ತಾಯಿ ಆತ್ಮಹತ್ಯೆ ವೇಳೆ ಡೆತ್ ನೋಟ್ ಕೂಡಾ ಬರೆದಿದ್ದು, ಇವರೆಲ್ಲರೂ ನನ್ನ ವ್ಯವಹಾರಗಳನ್ನು ಹಾಳು ಮಾಡಿ, ನನ್ನ ಜೀವನವನ್ನು ಕಷ್ಟಕರವಾಗಿಸಿದ್ದಾರೆ. ನಾನು ಸತ್ತ ಬಳಿಕವಾದರೂ ನ್ಯಾಯ ಸಿಗಲಿ ಎಂದು ಬರೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.