ಜಮೀನು ಮಾರಿ ಹಣ ಜೊತೆ ಎಸ್ಕೇಪ್ ಆಗಿದ್ದ ಮಗನಿಗಾಗಿ ತಾಯಿ ಹುಡಕಾಟ!

Public TV
1 Min Read
Belagavi 2 1

ಬೆಳಗಾವಿ: ಸರ್ಕಾರಿ ನೌಕರಿಯಲ್ಲಿರುವ ನನ್ನ ಮಗನನ್ನು ಹುಡುಕಿ ಕೊಡಿ ಎಂದು ರಾಮದುರ್ಗ ತಾಲೂಕಿನ ಖಾನಪೇಟ ನಗರದ ವೃದ್ಧೆ ಜಿಲ್ಲಾಧಿಕಾರಿ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಿದ್ದಾರೆ.

ಕಳೆದ 18 ವರ್ಷಗಳ ಹಿಂದೆ ನನ್ನ ಹಿರಿಯ ಮಗನಾದ ಬಸಪ್ಪ ಕೋರಿಶೆಟ್ಟಿ ನನಗೆ 2 ಎಕರೆ ಹೊಲವನ್ನು ನೀಡಿ ಇರುವ ಮೂರು ಮನೆಗಳಲ್ಲಿ ಒಂದನ್ನು ನಾನು ಬದುಕಿರುವರೆಗೂ ವಾಸಿಸಲು ನೀಡಿದ್ದನು. ಆದರೆ ನನ್ನ ಕಿರಿಯ ಮಗನಾದ ಶಿಂಗಪ್ಪಾ ಕೋರಿಶೆಟ್ಟಿ ನನಗೆ ನೀಡಿದ ಹೊಲವನ್ನು ಮಾರಲು ಪ್ರಚೋದಿಸಿದ. ಆ ಹೊಲವನ್ನು 2 ಲಕ್ಷ 50 ಸಾವಿರ ರೂ.ಗಳಿಗೆ ನಾನು ಮಾರಾಟ ಮಾಡಿ ನಂತರ ಹಣವನ್ನು ಬ್ಯಾಂಕ್‍ನಲ್ಲಿ ಸುರಕ್ಷಿತವಾಗಿ ನನ್ನ ಹೆಸರಿಲ್ಲಿ ಇಡುವುದಾಗಿ ಹೇಳಿ ನನಗೆ ವಂಚಿಸಿದ್ದಾನೆ. ಇತ್ತ ಇರುವ ಮನೆಯನ್ನು ಬೀಳಿಸಿ ಹೋಗಿದ್ದಾನೆ. ಇದರಿಂದ ನನಗೆ ವಾಸಿಸಲು ಸ್ಥಳವಿಲ್ಲ ಮತ್ತೊಬ್ಬರ ಮನೆಯ ಕಟ್ಟೆಯ ಮೇಲೆ ಜೀವನ ನಡೆಸುತ್ತಿದ್ದೇನೆ ಎಂದು ದೂರಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನ ಸಮುದ್ರ, ಭೂ-ಆಧಾರಿತ ಪ್ರದೇಶದ ಮೇಲೆ ರಷ್ಯಾ ದಾಳಿ!

Belagavi 1 1

ಕಳೆದ 15 ದಿನಗಳ ಹಿಂದೆ ರಾಮದುರ್ಗದಲ್ಲಿ ಅವನನ್ನು ನಾನು ನೋಡಿದ್ದೇನೆ. ಹತ್ತಾರು ಬಾರಿ ಬೆಂಗಳೂರಿಗೆ ಹೋಗಿ ಅವನನ್ನು ಹುಡುಕಿದರೂ ಸಿಕ್ಕಿರಲಿಲ್ಲ. ಸದ್ಯ ಅವನು ಧಾರವಾಡದಲ್ಲಿ ಇರುವುದಾಗಿ ಮಾಹಿತಿ ಇದೆ. ನಾನು ನನ್ನ ಉಪಜೀವನಕ್ಕಾಗಿ ಇಲ್ಲಿ ಕೂಲಿ ಮಾಡಿ ಜೀವನ ನಡೆಸುತ್ತಿದ್ದೆ. ಆದರೆ ನನಗೆ ವಯಸ್ಸಾದ ಕಾರಣ ನಾನು ಅಶಕ್ತಳಾಗಿದ್ದೇನೆ. ಆ ಕಾರಣ ಸರಕಾರಿ ನೌಕರಿಯಲ್ಲಿರುವ ನನ್ನ ಮಗನನ್ನು ಹುಡುಕಿಕೊಡಿ ಎಂದು ಮನವಿಯಲ್ಲಿ ವಿನಂತಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನ ಸಮುದ್ರ, ಭೂ-ಆಧಾರಿತ ಪ್ರದೇಶದ ಮೇಲೆ ರಷ್ಯಾ ದಾಳಿ!

Share This Article
Leave a Comment

Leave a Reply

Your email address will not be published. Required fields are marked *