-ಅಮ್ಮನ ಮುಖ ನೋಡಲಿಲ್ಲವೆಂದು ಪುತ್ರನ ಕಣ್ಣೀರು
ಹುಬ್ಬಳ್ಳಿ: ಲಾಕ್‍ಡೌನ್ ನಿಂದಾಗಿ ಪುತ್ರನೋರ್ವ ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಆಗದೇ ಕಣ್ಣೀರು ಹಾಕುತ್ತಿದ್ದಾರೆ.
ಹುಬ್ಬಳ್ಳಿಯ ಮಂಜುನಾಥ ನಗರದ ನಿವಾಸಿ ಸಮೀರ್ ಪುರೋಹಿತ್ ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗದೇ ಕಣ್ಣೀರಿಡುತ್ತಿದ್ದಾರೆ. ಸಮೀರ್ ಚೆನ್ನೈನ ನಿಸ್ಸಾನ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಲಾಕ್‍ಡೌನ್ ಪರಿಣಾಮ ಚೆನ್ನೈನಲ್ಲಿಯೇ ಉಳಿದುಕೊಂಡಿದ್ದರು. ಇತ್ತ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಸಮೀರ್ ತಾಯಿಯವರನ್ನು ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಅಮ್ಮನ ಅನಾರೋಗ್ಯದ ವಿಷಯ ತಿಳಿದ ಸಮೀರ್ ಹುಬ್ಬಳ್ಳಿಗೆ ಬರಲು ಪ್ರಯತ್ನಿಸಿದ್ದರು.
Advertisement
Help Mr Sameer purohit @DgpKarnataka Email: [email protected] Mob 9769322406 to reach from chenai TN to Hubli karnataka #KIMS Hospital old age parents are in critical conditions #doctors Doc enclosed Travelling purposes @chennaipolice_ #JKTripathy pic.twitter.com/mDAz5vRBJe
— Sameer Purohit (@serv27) April 13, 2020
Advertisement
ತಮಗೆ ವಿನಾಯ್ತಿಯ ಪಾಸ್ ನೀಡುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ, ಧಾರವಾಡದ ಪೊಲೀಸ್ ಆಯುಕ್ತರಿಗೆ ದಾಖಲೆ ಸಹಿತ ಟ್ವೀಟ್ ಮೂಲಕ ಮನವಿ ಮಾಡಿಕೊಂಡಿದ್ದರು. ಸೋಮವಾರ ಸಮೀರ್ ಅವರ ತಾಯಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು. ಮಗನ ಆಗಮನ ತಡವಾದ ಹಿನ್ನೆಲೆಯಲ್ಲಿ ಸಂಬಂಧಿಕರು ಅಂತ್ಯಕ್ರಿಯೆ ನಡೆಸಿದ್ದರು.
Advertisement
@PMOIndia @narendramodi
Modi Sir need ur help. Mother serious at hometown Hubli, Karnataka. I need to travel from Chennai to Hubli but not able to get travel pass. Pls help as health situation of mother is critical. pic.twitter.com/jA8rMH20Zi
— Sameer Purohit (@serv27) April 13, 2020
Advertisement
ಟ್ವೀಟ್ ನಿಂದಾಗಿ ಪಾಸ್ ಲಭ್ಯವಾದ್ರೂ ಚೆನ್ನೈನಿಂದ ಹುಬ್ಬಳ್ಳಿಗೆ ಬರುವಷ್ಟರಲ್ಲಿ ಅಮ್ಮನ ಅಂತ್ಯಕ್ರಿಯೆ ನಡೆಸಲಾಗಿತ್ತು. ಪ್ರಯಾಣದ ವಿನಾಯ್ತಿ ಪಾಸ್ ತಡವಾಗಿ ಲಭ್ಯವಾದ ಹಿನ್ನೆಲೆಯಲ್ಲಿ ಸಮೀರ್ ಅವರಿಗೆ ಕೊನೆಯ ಬಾರಿ ಅಮ್ಮನ ಮುಖ ನೋಡಲು ಆಗಲಿಲ್ಲ.