ಕೋಲ್ಕತ್ತಾ: ಮಹಿಳೆಯೊಬ್ಬಳು (Women) ತನ್ನ ಬಳಿ ಬ್ಯೂಟಿಷಿಯನ್ ಕೋರ್ಸ್ (Beautician Course) ಕಲಿಯುತ್ತಿದ್ದ ಬಾಲಕಿಯನ್ನ ಮನೆಗೆ ಕರೆದು ಊಟ ಹಾಕಿ, ತನ್ನ ಮಗನಿಂದಲೇ ಅತ್ಯಾಚಾರ ಮಾಡಿಸಿರುವ ಅಮಾನವೀಯ ಘಟನೆ ಕೋಲ್ಕತ್ತಾದ (Kolkata) ಹರಿದೇವಪುರ ಪ್ರದೇಶದಲ್ಲಿ ನಡೆದಿದೆ.
ಎರಡು ತಿಂಗಳ ಹಿಂದೆ ನಡೆದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ತಾಯಿ ಹಾಗೂ ಕಾಮುಕ ಮಗ ಇಬ್ಬರನ್ನೂ ಕೋಲ್ಕತ್ತಾ ಪೊಲೀಸರು (Kolkata Police) ಬಂಧಿಸಿದ್ದು, ಪೋಕ್ಸೋ ಕೇಸ್ (POCSO Case) ದಾಖಲಿಸಿದ್ದಾರೆ. ಇದನ್ನೂ ಓದಿ: `ಹಿಂದೂ’ ಪದ ಅಶ್ಲೀಲ ಅನ್ನೋನು ಸನ್ನಿ ಲಿಯೋನ್ ಮಗನಾ? – ಧನಂಜಯ ಭಾಯ್ ವಿವಾದಿತ ಹೇಳಿಕೆ
ಸಂತ್ರಸ್ತ ಬಾಲಕಿ ಆರೋಪಿ ಮಹಿಳೆ ಬಳಿ ಬ್ಯೂಟಿಷಿಯನ್ ಕೋರ್ಸ್ ಕಲಿಯುತ್ತಿದ್ದಳು. ಹೀಗಿರುವಾಗ ಮಹಿಳೆ ಅಕ್ಟೋಬರ್‌ನಲ್ಲಿ ತನ್ನ ಮನಗೆ ಆಹ್ವಾನಿಸಿದ್ದಳು. ಈ ವೇಳೆ ಆಕೆಗೆ ಊಟ ಕೊಡುವಾಗ ಅದರಲ್ಲಿ ಮಾದಕವಸ್ತು ಮಿಶ್ರಣ ಮಾಡಿಕೊಟ್ಟಿದ್ದಾಳೆ. ಊಟ ಸೇವಿಸಿದ ಬಾಲಕಿ ಕೆಲ ಕ್ಷಣಗಳಲ್ಲೇ ಪ್ರಜ್ಞೆತಪ್ಪಿದ್ದಾಳೆ. ನಂತರ ಕಾಮುಕ ಮಗ ಎರಡು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಜಾತಿ ಆಧಾರದಲ್ಲಿ ಸಿಎಂ ಆಯ್ಕೆ ಮಾಡಲ್ಲ- ಜಿ.ಪರಮೇಶ್ವರ್
ಸಂತ್ರಸ್ತೆ ಪೊಲೀಸರಿಗೆ ದೂರು ನೀಡಲು ಹೆದರುತ್ತಿದ್ದಳು. ನಂತರ ಆಕೆಯ ಸ್ನೇಹಿತರ ಸಹಕಾರದೊಂದಿಗೆ ದೂರು ನೀಡಿದ್ದು, ಕೇಸ್ ದಾಖಲಿಸಲಾಯಿತು. ಇದೀಗ ತಾಯಿ-ಮಗ ಇಬ್ಬರನ್ನೂ ಬಂಧಿಸಿದ್ದು, ತನಿಖೆ ಮುಂದುವರಿದಿದೆ.