ಕಲಬುರಗಿ: ತಾಯಿಯೊಬ್ಬಳು ಹಣದಾಸೆಗೆ ತನ್ನ ಕರುಳ ಕುಡಿಯನ್ನು ಮಾರಾಟ ಮಾಡಿದ ಪ್ರಕರಣವೊಂದು ಕಲಬುರಗಿಯ ಜೇವರ್ಗಿ ತಾಲೂಕಿನ ನರಿಬೋಳ ಗ್ರಾಮದಲ್ಲಿ ನಡೆದಿದೆ.
ರಜಿಯಾ ಹಣಕ್ಕಾಗಿ ಮಗುವನ್ನು ಮಾರಾಟ ಮಾಡಿದ ತಾಯಿ. ರಜಿಯಾ ಕಳೆದ 20 ದಿನಗಳ ಹಿಂದೆ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆ ಆಗುವುದರ ಜೊತೆಗೆ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿ ನಂತರ ಆಸ್ಪತ್ರೆಯಿಂದ ಡಿಸ್ಚಾಜ್9 ಕೂಡ ಆಗಿದ್ದಳು. ಆದರೆ ಮಗುವಿನ ತೂಕ ಕಡಿಮೆ ಇದ್ದ ಕಾರಣ ಪುನಃ ಆಸ್ಪತ್ರೆಗೆ ದಾಖಲಿಸಲಾಗಿತ್ತು.
Advertisement
ಈ ವೇಳೆ ಸಂಬಂಧಿ ನಗರದ ಟಿಪ್ಪು ಚೌಕ್ ಬಡಾವಣೆ ನಿವಾಸಿ ರೆಹಮತ್ ಉನ್ನಿಸಾ ಎಂಬಾಕೆ ಯೋಗಕ್ಷೇಮ ವಿಚಾರಿಸಲು ಬಂದಾಗ ಮಗುವಿನ ತಾಯಿ ರಜಿಯಾ ತನ್ನ ಕಡು ಬಡತನದ ಕಥೆ ಆಕೆಯ ಮುಂದೆ ಬಿಚ್ಚಿಟ್ಟು ನನಗೆ ಮಗುವನ್ನು ಸಾಕೋಕೆ ಆಗ್ತಿಲ್ಲ. ಕಂಡವರ ಮನೆ ಕಸ ಮುಸುರೆ ಕೆಲಸ ಮಾಡಿದರೆ ಹೊಟ್ಟೆ ತುಂಬುವುದು ಅಂತಾ ತನ್ನ ಅಳಲನ್ನ ತೋಡಿಕೊಂಡಳು.
Advertisement
Advertisement
ನಾನು ಮಗು ಮಾರಾಟ ಮಾಡುತ್ತೇನೆ ನೀನೇ ತಗೋ ಅಂತಾ ಹೇಳಿದ್ದಾಳೆ. ಅದಕ್ಕೆ ಸಂಬಂಧಿ ರೆಹಮತ್ ಉನ್ನಿಸಾ, ನಿನಗೆ 10 ಸಾವಿರ ರೂ. ಹಣ ಕೊಡುತ್ತೇನೆ. ಮಗು ನನಗೆ ಕೊಡು ಅಂತಾ ಹೇಳಿ ಐದು ಸಾವಿರ ರೂ. ಅಡ್ವಾನ್ಸ್ ಕೊಟ್ಟು ಮಗುವನ್ನು ತೆಗೆದುಕೊಂಡು ಹೋಗಿದ್ದಾಳೆ. ಈ ವಿಷಯ ರಜಿಯಾ ಗಂಡನಿಗೆ ಗೊತ್ತಿಲ್ಲದೆ ತನ್ನ ಗಂಡು ಮಗುವನ್ನು ಮಾರಾಟ ಮಾಡಿದ್ದಾಳೆ.
Advertisement
ರಜಿಯಾಗೆ ಎರಡು ಹೆಣ್ಣು ಮಕ್ಕಳಿದ್ದು ಇದೀಗ ಮೂರನೇಯದಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಕಡು ಬಡತನವಿದ್ದ ಕಾರಣ ಪತಿ ಕೂಲಿ ಕೆಲಸಕ್ಕೆ ಹೋದರೆ ಈಕೆ ಮನೆ ಮನೆಗೆ ಹೋಗಿ ಮುಸುರೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಳು. ಆದರೆ ಇತ್ತೀಚಿಗಷ್ಟೆ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆದರೆ ತುತ್ತು ಅನ್ನಕ್ಕೂ ಪರದಾಡುವ ಗಂಭೀರ ಪರಿಸ್ಥಿತಿಯಲ್ಲಿ ಮಕ್ಕಳನ್ನು ಹೇಗೆ ಸಾಕಲಿ ಎನ್ನುವ ಚಿಂತೆಗೆ ರಜಿಯಾ ಜಾರಿದ್ದಳು.
ಮಾರಾಟ ಮಾಡುವ ನಿರ್ಧಾರಕ್ಕೆ ಬಂದ ರಜಿಯಾ ಕೇವಲ 10 ಸಾವಿರ ರೂ.ಗೆ ಮಾರಾಟ ಮಾಡಿದ್ದಾಳೆ. ಇದೇ ವೇಳೆ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಂದಿದ್ದ ನರಿಬೋಳ ಗ್ರಾಮದ ಮಹಿಳೆಯೊಬ್ಬಳು ನಿನ್ನ ಮಗು ಹೇಗಿದೆ ಅಂತಾ ಪ್ರಶ್ನಿಸಿದ್ದಾಳೆ. ಈ ವೇಳೆ ತಾನು ಮಗು ಮಾರಾಟ ಮಾಡಿದ್ದಾಗಿ ಹೇಳಿದ್ದಾಳೆ. ತಕ್ಷಣವೇ ಈ ವಿಷಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಗೊತ್ತಾಗಿದೆ. ಇದರಿಂದ ಕಾರ್ಯಪ್ರವೃತ್ತರಾದ ಮಕ್ಕಳ ರಕ್ಷಣಾ ಘಟಕದ ಸದಸ್ಯರು ತಾಯಿಯನ್ನು ವಿಚಾರಣೆಗೊಳಪಡಿಸಿದಾಗ ಮಾಹಿತಿ ಬಹಿರಂಗಗೊಂಡಿದೆ. ನಂತರ ಮಹಿಳಾ ಪೊಲೀಸ್ ಠಾಣೆಗೆ ತಾಯಿ ರಜಿಯಾ ಮತ್ತು ಮಗು ಪಡೆದ ರೆಹಮತ್ ಉನ್ನಿಸಾರನ್ನು ಒಪ್ಪಿಸಿದ್ದಾರೆ. ಸದ್ಯ ಮಗು ಅಪೌಷ್ಟಿಕಯಿಂದ ಬಳಲುತ್ತಿರುವ ಕಾರಣ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv