ಲಕ್ನೋ: ತಾಯಿಯೇ ತನ್ನ ಮಗಳನ್ನು 4 ಲಕ್ಷ ರೂ.ಗೆ ಮಾರಾಟ ಮಾಡಿದ ಪ್ರಕರಣ ಉತ್ತರಪ್ರದೇಶದ (Uttar Pradesh) ಗೋರಖ್‍ಪುರದ ಮಹೇಸ್ರಾ ಎಂಬಲ್ಲಿ ನಡೆದಿದೆ. ಹಣ ಕೊಟ್ಟು ಯುವತಿಯನ್ನು ಮದುವೆಯಾದ (Marriage) ಹರಿಯಾಣ (Haryana) ಮೂಲದ ವ್ಯಕ್ತಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗುವಂತೆ ಬಲವಂತಪಡಿಸಿ ನಿರಂತರ ಕಿರುಕುಳ ನೀಡುತ್ತಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.
ಯುವತಿ ಈಗ ನ್ಯಾಯಕ್ಕಾಗಿ ಪೊಲೀಸ್ (Police) ಠಾಣೆಯ ಮೆಟ್ಟಿಲೇರಿದ್ದಾಳೆ. ಚಿಲುತಾಲ್ ಠಾಣೆಯಲ್ಲಿ ಆಕೆ ದೂರು ದಾಖಲಿಸಿದ್ದು, ದೂರಿನಲ್ಲಿ ಹರಿಯಾಣ ಮೂಲದ ವ್ಯಕ್ತಿಯಿಂದ ತನ್ನ ತಾಯಿ ಹಣ ಪಡೆದು ನ.23 ರಂದು ಬಲವಂತದಿಂದ ಮದುವೆ ಮಾಡಿದ್ದಾರೆ. ಈಗ ಅಕ್ರಮ ಚಟುವಟಿಕೆಯಲ್ಲಿ ತೊಡಗುವಂತೆ ನಿರಂತರವಾಗಿ ಆತ ಹಲ್ಲೆ ನಡೆಸುತ್ತಿದ್ದಾನೆ ಎಂದು ಆಕೆ ಆರೋಪಿಸಿದ್ದಾಳೆ. ಇದನ್ನೂ ಓದಿ: BESCOM ನಿರ್ಲಕ್ಷ್ಯಕ್ಕೆ ತಾಯಿ, ಮಗು ಸಾವು ಪ್ರಕರಣ- ಇಂದು ಲೋಕಾಯುಕ್ತಕ್ಕೆ ವರದಿ ಸಲ್ಲಿಕೆ
ಯುವತಿ ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಸಲಾಗುತ್ತದೆ. ಈಗಾಗಲೇ ಪೊಲೀಸರು ಆಕೆಯ ಕುಟುಂಬಸ್ಥರ ಬಳಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಇನ್ನೂ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಪೊಲೀಸ್ ಅಧೀಕ್ಷಕ ಮನೋಜ್ ಅವಸ್ತಿ ತಿಳಿಸಿದ್ದಾರೆ.
ಮಹಿಳೆಯ ಇಬ್ಬರು ಹಿರಿಯ ಸಹೋದರಿಯರು ಸಹ ಹರಿಯಾಣದಲ್ಲಿ ಮದುವೆಯಾಗಿದ್ದಾರೆ. ಆಕೆಯ ತಾಯಿ ಮತ್ತು ಇತರ ಕುಟುಂಬ ಸದಸ್ಯರು ಯುವತಿಯ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತದೆ ಎಂದು ಚಿಲುತಾಲ್ ಪೊಲೀಸ್ ಠಾಣೆ ಎಸ್‍ಎಚ್‍ಒ ಸಂಜಯ್ ಮಿಶ್ರಾ ಹೇಳಿದ್ದಾರೆ. ಇದನ್ನೂ ಓದಿ: ಕಲಬುರಗಿಯಲ್ಲಿ ವಕೀಲನ ಬರ್ಬರ ಹತ್ಯೆ – 6 ಜನರ ವಿರುದ್ಧ ಎಫ್‌ಐಆರ್