ಆನೇಕಲ್: ಪತಿಯೊಂದಿಗೆ (Husband) ಜಗಳವಾಡಿ ಪತ್ನಿಯೊಬ್ಬಳು ತನ್ನ ಒಂದುವರೆ ವರ್ಷದ ಮಗುವನ್ನು ಬೇರೆಯವರಿಗೆ ಮಾರಾಟ ಮಾಡಿದ್ದು, ನಾಲ್ಕುವರೆ ವರ್ಷದ ತಂದೆಯ (Father) ಬಳಿಕ ತಂದೆಗೆ ಸಿಕ್ಕಿರುವ ಘಟನೆ ಬೆಂಗಳೂರು (Bengaluru) ಹೊರವಲಯದಲ್ಲಿ ನಡೆದಿದೆ.
ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬಳ್ಳೂರು ಗ್ರಾಮದಲ್ಲಿ ಮಮತಾ ಹಾಗೂ ಬಾಲಮಣಿ 2012ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಅದಾದ ಬಳಿಕ ಆನೇಕಲ್‍ನಲ್ಲೇ ತನ್ನ ಪತಿಯೊಂದಿಗೆ ಮನೆ ಮಾಡಿಕೊಂಡು ವಾಸವಿದ್ದಳು. ಆದರೆ 2018ರಲ್ಲಿ ಗಂಡ – ಹೆಂಡತಿ ನಡುವೆ ಜಗಳ ಆಗಿತ್ತು. ಆ ವೇಳೆ ಬಾಲಮಣಿ ಬೆಂಗಳೂರಿನ ಜಯನಗರದ ನಿವಾಸಕ್ಕೆ ಹೋಗಿದ್ದಾನೆ.
ಬಾಲಮಣಿ ಮತ್ತೇ 45 ದಿನಗಳ ಬಳಿಕ ಮರಳಿ ಬಳ್ಳೂರಿಗೆ ಬಂದಾಗ ಮನೆಯಲ್ಲಿ ಹೆಣ್ಣು ಮಗು ಮಾತ್ರ ಇತ್ತು. ಗಂಡು ಮಗು ಇರಲಿಲ್ಲ. ಆಗ ಪತ್ನಿ ಮಮತಾಳನ್ನು ಪ್ರಶ್ನೆ ಮಾಡಿದಾಗ ಹಾಸ್ಟೆಲ್‍ನಲ್ಲಿ ಮಗು ಇರುವುದಾಗಿ ಹೇಳಿದ್ದಾಳೆ. ವಾರ ಕಳೆದರೂ ಕೂಡ ಮಗು ಎಲ್ಲಿದೆ ಎನ್ನುವ ಬಗ್ಗೆ ಸರಿಯಾದ ಮಾಹಿತಿಯನ್ನು ಮಮತಾ ಪತಿಗೆ ನೀಡಲಿಲ್ಲ. ಆಗ ಮಮತಾ ಮಗುವನ್ನು ಏನೋ ಮಾಡಿದ್ದಾಳೆ ಎಂದು ಬಾಲಮಣಿ ಆತಂಕಕ್ಕೆ ಒಳಗಾಗಿದ್ದಾನೆ. ಇದನ್ನೂ ಓದಿ: ಶ್ರದ್ಧಾ ಭೀಕರ ಹತ್ಯೆ ಪ್ರಕರಣ – ಪೊಲೀಸರ ಮುಂದೆ ಸತ್ಯ ಬಾಯ್ಬಿಟ್ಟ ಕಿರಾತಕ
ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದು ಮಮತಾ ಹೊಸೂರು ಸಮೀಪದ ಸಿಪ್‍ಕಾಟ್ ಪೊಲೀಸ್ ಠಾಣೆಯಲ್ಲಿ ಗಂಡನ ವಿರುದ್ಧ ದೂರು ನೀಡಿದ್ದಾಳೆ. ಪೊಲೀಸರು ಠಾಣೆಗೆ ಬಾಲಮಣಿಯನ್ನು ಕರೆದು ಬುದ್ಧಿವಾದ ಹೇಳುತ್ತಿದ್ದಾರೆ. ಆದರೆ ಇನ್ನೊಂದು ಹೆಣ್ಣು ಮಗುವನ್ನು ಪತಿಯನ್ನು ಸಹ ತಾಯಿ ಮಮತಾಳನ್ನು ಬಿಟ್ಟು ಹೋಗಿದ್ದಾಳೆ. ಬಾಲಮಣಿ ಹೆಣ್ಣು ಮಗುವನ್ನು ಹಾಸ್ಟೆಲ್‍ಗೆ ಸೇರಿಸಿ ವಿದ್ಯಾಭ್ಯಾಸ ನೀಡುತ್ತಾ, ಕಳೆದ ನಾಲ್ಕೂವರೆ ವರ್ಷದಿಂದ ತನ್ನ ಮಗನಿಗಾಗಿ ತಮಿಳುನಾಡಿನ ಹಲವಡೆ ಹುಡುಕಾಟ ನಡೆಸಿದ್ದಾನೆ. ಇದನ್ನೂ ಓದಿ: ಪಾರಂಪರಿಕವಾಗಿ ಗುಂಬಜ್ ನಿರ್ಮಾಣ – ತಜ್ಞರನ್ನು ಕಳಿಸಲು ಸರ್ಕಾರಕ್ಕೆ ರಾಮದಾಸ್ ಪತ್ರ
ಕೊನೆಗೂ ಮಗು ಇರುವುದು ಗೊತ್ತಾದರೂ ಸಹ ಪೊಲೀಸರು ಸಹಕಾರ ನೀಡದ ಹಿನ್ನೆಲೆ ಕರೆದುಕೊಂಡು ಬರಲು ಸಹಾಯ ಆಗಿರಲಿಲ್ಲ. ಬಳಿಕ ಜಯನಗರದ ಆಮ್ ಆದ್ಮಿ ಪಾರ್ಟಿಯ ಸದಸ್ಯರು ಭಾಸ್ಕರ್ ರಾವ್ ಮೂಲಕ ಅತ್ತಿಬೆಲೆ ಪೊಲೀಸರಿಗೆ ಮಾಹಿತಿ ತಿಳಿಸಿದ ಬಳಿಕ ಪೊಲೀಸರು ತಮಿಳುನಾಡಿನ ಈ ರೋಡ್‍ನಲ್ಲಿರುವ ಮಗುವನ್ನು ಅತ್ತಿಬೆಲೆ ಠಾಣೆಗೆ ಕರೆತಂದು ಮಗುವಿನ ತಂದೆಗೆ ಒಪ್ಪಿಸಿದ್ದು, ಮಗನನ್ನು ನೋಡಿದ ಬಾಲಮಣಿ ತಬ್ಬಿಕೊಂಡು ಮಗುವನ್ನು ಮುದ್ದಾಡಿದ್ದಾನೆ. ಇನ್ನೊಂದೆಡೆ ತಮಿಳುನಾಡಿನಲ್ಲಿ ನಾಲ್ಕೈದು ಜನರ ಕೈ ಬದಲಾಗಿ ಹಳ್ಳಿಯೊಂದರಲ್ಲಿ ಸೇರಿದ್ದ ಮಗುವನ್ನು ಮರಳಿ ಸೇರಿಸಲು ಜೊತೆಗೆ ನಿಂತ ಆಮ್ ಆದ್ಮಿ ಪಾರ್ಟಿಯ ಸದಸ್ಯರು ಖುಷಿ ಪಟ್ಟಿದ್ದಾರೆ.