– 2 ತಿಂಗಳ ಹಿಂದೆಯೇ ಮದ್ವೆಯಾಗಿದ್ದ ಪುತ್ರ
– ಮನೆಗೆ ಸೇರಿಸದೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಅಮ್ಮ
ಲಕ್ನೋ: ಕೊರೊನಾದಿಂದ ದೇಶಾದ್ಯಂತ ಲಾಕ್‍ಡೌನ್ ಜಾರಿಯಲ್ಲಿದೆ. ಜನರು ಅಗತ್ಯ ವಸ್ತುಗಳ ಖರೀದಿಗಾಗಿ ಮಾತ್ರ ಮನೆಯಿಂದ ಹೊರ ಬರುತ್ತಿದ್ದಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ದಿನಸಿ ಸಾಮಗ್ರಿಗಳನ್ನು ಖರೀದಿಸಲು ಮನೆಯಿಂದ ಹೊರ ಬಂದಿದ್ದು, ಪತ್ನಿಯೊಂದಿಗೆ ವಾಪಸ್ ಮನೆಗೆ ಹೋಗಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‍ನಲ್ಲಿ ನಡೆದಿದೆ.
ಈ ಘಟನೆ ನಗರದ ಸಾಹಿಬಾಬಾದ್ ಪ್ರದೇಶದಲ್ಲಿ ನಡೆದಿದೆ. 26 ವರ್ಷದ ಗುಡ್ಡು ಪತ್ನಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ. ದಿಢೀರನೇ ಮದುವೆಯಾದ ಮಗನನ್ನು ನೋಡಿ ತಾಯಿ ಆಘಾತಗೊಂಡಿದ್ದು, ಈ ಮದುವೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಇಬ್ಬರನ್ನು ಮನೆಗೆ ಸೇರಿಸಲಿಲ್ಲ. ಅಲ್ಲದೇ ತಾಯಿ ತನ್ನ ಮಗನ ಬಗ್ಗೆ ದೂರು ನೀಡಲು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
Advertisement
Advertisement
ನಾನು ಮನೆಗೆ ದಿನಸಿ ಸಾಮಗ್ರಿಗಳನ್ನು ತರಲು ಮಗನನ್ನು ಹೊರಗೆ ಕಳುಹಿಸಿದ್ದೆ. ಆದರೆ ಸ್ವಲ್ಪ ಸಮಯದ ನಂತರ ಆತ ಪತ್ನಿಯ ಜೊತೆ ಮನೆಗೆ ವಾಪಸ್ ಬಂದಿದ್ದಾನೆ. ಹೀಗಾಗಿ ನಾನು ಈ ಮದುವೆಯನ್ನು ಒಪ್ಪಿಕೊಳ್ಳಲು ಸಿದ್ಧಳಿಲ್ಲ ಎಂದು ತಾಯಿ ಕಣ್ಣೀರು ಹಾಕಿದ್ದಾರೆ.
Advertisement
ಎರಡು ತಿಂಗಳ ಹಿಂದೆ ಹರಿದ್ವಾರ್ ನ ಆರ್ಯ ಸಮಾಜ ಮಂದಿರದಲ್ಲಿ ಈ ಮದುವೆ ನಡೆದಿದೆ. ಆದರೆ ಲಾಕ್‍ಡೌನ್ ಮುಗಿದ ನಂತರ ನವದಂಪತಿ ಮ್ಯಾರೇಜ್ ಸರ್ಟಿಫಿಕೆಟ್ ತೆಗೆದುಕೊಳ್ಳಲು ನಿರ್ಧರಿಸಿದ್ದರು. ಬಳಿಕ ಪತ್ನಿ ಸವಿತಾ ದೆಹಲಿಯಲ್ಲಿ ಬಾಡಿಗೆ ಮನೆಯಲ್ಲಿದ್ದಳು. ಗುಡ್ಡು ಲಾಕ್‍ಡೌನ್ ಇದ್ದರೂ ಪತ್ನಿಯನ್ನು ಮನೆಗೆ ಕರೆದುಕೊಂಡು ಬರಲು ನಿರ್ಧರಿಸಿದ್ದ.
Advertisement
Mother sends son to buy groceries, he returns with wife
Read @ANI Story | https://t.co/no1NZNCGLQ pic.twitter.com/xW9kT9e64H
— ANI Digital (@ani_digital) April 29, 2020
ಸಾಕ್ಷಿಗಳ ಕೊರತೆಯಿಂದಾಗಿ ನಾವು ಆ ಸಮಯದಲ್ಲಿ ಮ್ಯಾರೇಜ್ ಸರ್ಟಿಫಿಕೇಟ್ ಪಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ನಾನು ಮತ್ತೆ ಹರಿದ್ವಾರ್ ಗೆ ಹೋಗಲು ನಿರ್ಧರಿಸಿದ್ದೆ. ಆದರೆ ಲಾಕ್‍ಡೌನ್‍ನಿಂದ ಸಾಧ್ಯವಾಗಲಿಲ್ಲ. ದೆಹಲಿಯಲ್ಲಿ ಬಾಡಿಗೆ ಮನೆ ಖಾಲಿ ಮಾಡುವಂತೆ ಪತ್ನಿಗೆ ತಿಳಿಸಿದ್ದೆ. ಹೀಗಾಗಿ ಪತ್ನಿಯನ್ನು ಮನೆಗೆ ಕರೆತರಲು ನಿರ್ಧರಿಸಿದ್ದೆ ಎಂದು ಗುಡ್ಡು ಹೇಳಿದ್ದಾರೆ.
ಸದ್ಯಕ್ಕೆ ಸಾಹಿಬಾಬಾದ್ ಪೊಲೀಸರು ಸವಿತಾ ವಾಸಿಸುತ್ತಿದ್ದ ದೆಹಲಿಯ ಬಾಡಿಗೆ ಮನೆ ಮಾಲೀಕರಿಗೆ ಮನವಿ ಮಾಡಿಕೊಂಡಿದ್ದು, ದಂಪತಿ ವಾಸಮಾಡಲು ಅವಕಾಶ ಮಾಡಿಕೊಡುವಂತೆ ತಿಳಿಸಿದ್ದಾರೆ.
Mother sent son to buy grocery, he returned with a bride. Mom didn’t allow them to enter the house, took them to police station. Couple has no proof that they got married. The priest who got them married told them he can give a certificate only after the lockdown. ????#UP ki batein pic.twitter.com/MPQG1MQaQY
— Smita Prakash (@smitaprakash) April 29, 2020