ಬೆಂಗಳೂರು: ನವಮಾಸಗಳನ್ನ ಹೆತ್ತು ಹೊತ್ತ ತಾಯಿ ತನ್ನ ಮಕ್ಕಳ ಮೇಲೆ ಕ್ರೌರ್ಯ ನಡೆಸಿರುವ ಉದಾಹರಣೆ ತೀರಾ ಕಡಿಮೆ. ಜೆಜೆ ನಗರದಲ್ಲೊಬ್ಬಳು ಮಹಾತಾಯಿ ಮೊದಲ ಗಂಡನ ಮೇಲಿನ ಕೋಪಕ್ಕಾಗಿ ಮಕ್ಕಳಿಗೆ ಕಚ್ಚಿ, ಐಸ್ ನೀರು (Ice Water) ಸುರಿದು ಹಿಂಸೆಕೊಟ್ಟಿದ್ದಾಳೆ.
ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಅಂತಾರಲ್ಲ ಇದು ಅದಕ್ಕಿಂತ ಕ್ರೂರ. ಬಾಯ್ ಫ್ರೆಂಡ್ ಜೊತೆ ಸೇರಿ ಮೊದಲ ಗಂಡನ ಮಕ್ಕಳ ಮೇಲೆ ತಾಯಿಯೊಬ್ಬಳು ವಿಕೃತಿ ಮೆರೆದಿದ್ದಾಳೆ. 2013 ರಲ್ಲಿ ಆಯೇಷಾ ಹಾಗೂ ಇಮ್ರಾನ್ ಮದ್ವೆಯಾಗಿದ್ದರು. ಇಬ್ಬರಿಗೆ ಒಂದು ಗಂಡು ಒಂದು ಹೆಣ್ಣು ಮಕ್ಕಳು. ಕೌಟುಂಬಿಕ ಕಲಹ ಹಿನ್ನೆಲೆ 2020 ರಲ್ಲಿ ಇಬ್ಬರೂ ದೂರವಾಗಿದ್ದರು. ಆದರೆ ಮಕ್ಕಳು ತಾಯಿಯ ಜೊತೆಗೆ ಇರಬೇಕೆಂದು ಕೋರ್ಟ್ ಆದೇಶ ಮಾಡಿದ್ದರಿಂದ ಆಯೇಷಾ ಬಳಿ ಮಕ್ಕಳನ್ನ ಬಿಡಬೇಕಾಯ್ತು. ಆಗಾಗ ಇಮ್ರಾನ್ ಮಕ್ಕಳನ್ನ ನೋಡಿಕೊಂಡು ಹೋಗ್ತಿದ್ದ. ಆದರೆ ಮಕ್ಕಳು ಇದವರೆಗೂ ತಾಯಿ ಕೊಡುತ್ತಿದ್ದ ಕಿರುಕುಳದ ಬಗ್ಗೆ ಬಾಯ್ಬಿಟ್ಟಿರಲಿಲ್ಲ.
ಮಕ್ಕಳು ಹೇಳಿದ್ದೇನು..?: ಇತ್ತ ತಾಯಿಯ ಟಾರ್ಚರ್ ಯಾವಾಗ ಹೆಚ್ಚಾಯ್ತೋ ತಡೆದುಕೊಳ್ಳಲು ಸಾಧ್ಯವಾಗದೆ ಪುತ್ರಿ ತಂದೆಯ ಬಳಿ ಎಲ್ಲವನ್ನೂ ಹೇಳಿ ಬಿಟ್ಟಿದ್ದಳು. ಸಲೀಂ ಹಾಗೂ ಜಬೀರ್ ಅನ್ನೋ ಆಯೇಷಾಳ ಫ್ರೆಂಡ್ ಗಳು ಆಗಾಗ ಮನೆಗೆ ಬರುತ್ತಿದ್ದರಂತೆ. ಈ ವಿಚಾರ ಮಕ್ಕಳು ತಂದೆಯ ಬಳಿ ಹೇಳ್ತಾರೆ ಎಂದು ಬೆದರಿಸಿ ಹಲ್ಲೆ ಮಾಡ್ತಿದ್ರಂತೆ. ಅಲ್ಲದೇ ಜಬೀರ್ ಎಂಬಾತ ಸಿಗರೇಟ್ ತರಲು ಹೇಳಿ ಅದೇ ಸಿಗರೇಟ್ ನಿಂದ ಸುಡುತ್ತಿದ್ದನಂತೆ. ತಾನು ಮನೆಗೆ ಬರುವುದು ತಂದೆಯ ಬಳಿ ಹೇಳಿದರೆ ಕೊಲ್ಲೋದಾಗಿ ಬೆದರಿಕೆ ಹಾಕ್ತಿದ್ನಂತೆ. ಜೋರಾಗಿ ಅತ್ತರೆ ಬಾಸುಂಡೆ ಬರುವಂತೆ ಹೊಡೀತಿದ್ನಂತೆ. ಇನ್ನು ತಾಯಿ ಆಯೇಷಾ ಗಂಡ ಇಮ್ರಾನ್ ಮೇಲಿನ ಸಿಟ್ಟಿಗೆ ಮಗುವಿನ ಕೈ ಕಚ್ಚಿ ಫ್ರಿಡ್ಜ್ ನಲ್ಲಿರುವ ತಣ್ಣೀರನ್ನ ಎರಚುತ್ತಿದ್ದಳಂತೆ. ತಿಳುವಳಿಕೆ ಇರುವ ಹೆಣ್ಣು ಮಗಳ ಬಳಿ, ಏನಾದ್ರು ವಿಚಾರ ನಿನ್ನ ತಂದೆಗೆ ಹೇಳಿದ್ರೆ ನಿನ್ನ ತಂದೆ ಹಾಗೂ ಸಹೋದರನನ್ನ ಕೊಲ್ಲೋದಾಗಿ ಹೆದರಿಸಿದ್ದರಿಂದ ಆ ಮಕ್ಕಳು ತಂದೆಯ ಬಳಿ ಏನೂ ಹೇಳಿಲ್ಲ. ಪೊಲೀಸ್ ಠಾಣೆಗೆ ಕರೆ ತಂದಾಗ ತಮ್ಮನ್ನ ಸಾಯಿಸಿ, ಆದರೆ ತಾಯಿಯ ಬಳಿ ಕಳಿಸಬೇಡಿ ಎಂದು ಗೋಗರೆದಿದೆಯಂತೆ.
ಸದ್ಯ ಮಕ್ಕಳು ತಂದೆ ಇಮ್ರಾನ್ ಖಾನ್ ಸುಪರ್ದಿಯಲ್ಲಿದ್ದು, ಮಕ್ಕಳಿಗೆ ಚಿಕಿತ್ಸೆ ಕೊಡಿಸಿ ತನ್ನ ಬಳಿಯೆ ಮಕ್ಕಳನ್ನ ಇರಿಸಿಕೊಂಡಿದ್ದಾನೆ. ಸದ್ಯ ಈ ಸಂಬಂಧ ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಜುವೆನಿಲ್ ಜಸ್ಟಿಸ್ ಕೇಸ್ ನಡಿ ದೂರು ದಾಖಲಾಗಿದೆ. ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಅಮಾನವೀಯ ಕೃತ್ಯ – ತಾಯಿಯಿಂದಲೇ ಮಗುವಿನ ಮೇಲೆ ಮಾರಣಾಂತಿಕ ಹಲ್ಲೆ