ನವದೆಹಲಿ: ಸೋಮವಾರ 10ನೇ ತರಗತಿಯ ಸಿಬಿಎಸ್‍ಸಿ ಫಲಿತಾಂಶ ಹೊರಬಿದಿದ್ದು, 13 ವಿದ್ಯಾರ್ಥಿಗಳು 500ಕ್ಕೆ 499 ಅಂಕಗಳನ್ನು ಪಡೆದಿದ್ದಾರೆ. ಹೀಗಿರುವಾಗ ತಾಯಿಯೊಬ್ಬರು ತನ್ನ ಮಗ 10ನೇ ತರಗತಿ ಪರೀಕ್ಷೆಯಲ್ಲಿ ಶೇ. 60ರಷ್ಟು ಅಂಕಗಳಿಸಿದ್ದಾನೆ ಎಂದು ಹಾಕಿದ ಪೋಸ್ಟ್ ವೈರಲ್ ಆಗುತ್ತಿದೆ.
ಮಕ್ಕಳು ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕಗಳಿಸಬೇಕು, ಶೇ. 90 ಕಿಂತ ಹೆಚ್ಚು ಅಂಕಗಳಿಸಬೇಕು ಎಂದು ಮಕ್ಕಳ ಮೇಲೆ ಒತ್ತಡ ಹೇರುವ ಪೋಷಕರಿದ್ದಾರೆ. ಅದರೆ ದೆಹಲಿಯ ಮಹಿಳೆ ತನ್ನ ಮಗ ಶೇ. 60 ಅಂಕಗಳಿಸಿರುವುದಕ್ಕೆ ಖುಷಿಪಟ್ಟು ಅದನ್ನು ತನ್ನ ಫೇಸ್‍ಬುಕ್ ಖಾತೆಯಲ್ಲಿ ಹೆಮ್ಮೆಯಿಂದ ಹಂಚಿಕೊಂಡಿದ್ದಾರೆ.
Advertisement
Advertisement
ವಂದನಾ ಸುಫಿಯಾ ಕಟೊಚ್ ಎಂಬ ಮಹಿಳೆ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಮಗ ಶೇ. 60ರಷ್ಟು ಅಂಕಗಳಿಸಿರುವುದಕ್ಕೆ ಹೆಮ್ಮೆ ಇದೆ ಎಂದು ಪೋಸ್ಟ್ ಮಾಡಿದ್ದಾರೆ. ನನಗೆ ನನ್ನ ಮಗ ಶೇ.60 ಅಂಕಗಳನ್ನು ತೆಗೆದಿರುವುದು ಹೆಮ್ಮೆ ಇದೆ. ಹೌದು ಅವನು ಶೇ.90 ತೆಗೆದಿಲ್ಲ ಅದರೂ ನನಗೆ ಖುಷಿ ಇದೆ. ಏಕೆಂದರೆ ಅವನು ಕೆಲವೊಂದು ವಿಷಯದಲ್ಲಿ ತುಂಬ ದುರ್ಬಲನಾಗಿದ್ದನು. ಅದರೆ ಅದನ್ನು ಮೀರಿ ಅಂಕಗಳಿಸಿರುವುದು ನನಗೆ ಸಂತೋಷವಾಗಿದೆ. ನಿನ್ನ ಕುತೂಹಲ ಮತ್ತು ಬುದ್ಧಿವಂತಿಕೆಯನ್ನು ಜೀವಂತವಾಗಿ ಇಟ್ಟಿಕೊ. ನನ್ನ ಪ್ರೀತಿಯ ಮಗನೇ ನಿನಗೆ ಒಳ್ಳೆಯದು ಅಗಲಿ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
Advertisement
ತಾಯಿಯ ಈ ಪೋಸ್ಟ್ ಗೆ ಹಲವಾರು ಮಂದಿ ಕಮೆಂಟ್ ಮಾಡಿದ್ದು, ಮಗನಿಗೆ ಶುಭಾಷಯಗಳನ್ನು ತಿಳಿಸಿದ್ದಾರೆ. ಮತ್ತು ಕೆಲವರು ನಿಮ್ಮಂತಹ ತಾಯಿಯನ್ನು ಪಡೆಯಲು ನಿಮ್ಮ ಮಗ ಪುಣ್ಯ ಮಾಡಿದ್ದಾನೆ ಎಂದು ತಾಯಿಯ ಪೋಸ್ಟ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.