ಲಕ್ನೋ: ನಾಲ್ಕು ಮಕ್ಕಳ ತಾಯಿ ಅಳಿಯನ (Son In Law) ತಂದೆಯೊಂದಿಗೆ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಬದೌನ್‌ನಲ್ಲಿ (Badaun) ನಡೆದಿದೆ.
ಮಮತಾ (43) ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯ ನಿವಾಸಿ ಶೈಲೇಂದ್ರ (46) ಜೊತೆ ಮನೆಯಲ್ಲಿ ಆಭರಣ, ನಗದು ಮತ್ತು ಇತರ ಬೆಲೆಬಾಳುವ ವಸ್ತುಗಳೊಂದಿಗೆ ಓಡಿಹೋಗಿದ್ದಾರೆ ಎಂದು ಮಹಿಳೆಯ ಪತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಇಂದು ಆರ್‌ಸಿಬಿ-ಪಂಜಾಬ್ ಮುಖಾಮುಖಿ – ಸೇಡು ತೀರಿಸಿಕೊಳ್ಳಲು ಬೆಂಗಳೂರು ರಣಕಲಿಗಳ ಕಾತರ!
ಮಮತಾ ಅವರ ಪತಿ ಸುನಿಲ್ ಕುಮಾರ್ ಸಿಂಗ್ ಟ್ರಕ್ ಚಾಲಕರಾಗಿದ್ದರು. ಸುನಿಲ್ ತಿಂಗಳಿಗೆ ಎರಡು ಬಾರಿ ಮಾತ್ರ ಮನೆಗೆ ಭೇಟಿ ನೀಡುತ್ತಿದ್ದರು. ಆದರೆ ನಿಯಮಿತವಾಗಿ ಮನೆಗೆ ಹಣವನ್ನು ಕಳುಹಿಸುತ್ತಿದ್ದರು. ಮಮತಾ ತನ್ನ ಗಂಡನ ಅನುಪಸ್ಥಿತಿಯಲ್ಲಿ ಶೈಲೇಂದ್ರ ಅವರನ್ನು ಮನೆಗೆ ಕರೆಯುತ್ತಿದ್ದರು. ಮಮತಾ ಸುಮಾರು ಒಂದು ವರ್ಷದಿಂದ ಶೈಲೇಂದ್ರ ಅವರೊಂದಿಗೆ ಸಂಬಂಧ ಹೊಂದಿದ್ದಾರೆಂದು ಸುನಿಲ್ ಅನುಮಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ರೇವಣ್ಣಗೆ ಇಲ್ಲ ಜಾಮೀನು
ನಾನು ಟ್ರಕ್ ಓಡಿಸುತ್ತೇನೆ. ತಿಂಗಳಿಗೆ ಒಂದು ಅಥವಾ ಎರಡು ಬಾರಿ ಮಾತ್ರ ಮನೆಗೆ ಬರುತ್ತೇನೆ. ನಾನು ಸಮಯಕ್ಕೆ ಸರಿಯಾಗಿ ಹಣ ಕಳುಹಿಸುತ್ತಿದ್ದೆ. ಆದರೆ ನನ್ನ ಹೆಂಡತಿ ಮಮತಾ ನನ್ನ ಮಗಳ ಮಾವನನ್ನು ಮನೆಗೆ ಕರೆದು ಸಂಬಂಧ ಬೆಳೆಸಿದ್ದಾಳೆ. ಈಗ ಆಭರಣ ಮತ್ತು ಹಣವನ್ನು ತೆಗೆದುಕೊಂಡು ಅವನೊಂದಿಗೆ ಓಡಿಹೋಗಿದ್ದಾಳೆ ಎಂದು ಪತಿ ಹೇಳಿದ್ದಾರೆ. ಇದನ್ನೂ ಓದಿ: ಸಹೋದರಿಯನ್ನು ಚುಡಾಯಿಸಿದ್ದಕ್ಕೆ ಯುವಕನಿಗೆ ಚಾಕು ಇರಿದ ಅಪ್ರಾಪ್ತ!
ಮಮತಾ ಪ್ರತಿ ಮೂರು ದಿನಗಳಿಗೊಮ್ಮೆ ಶೈಲೇಂದ್ರಗೆ ಕರೆ ಮಾಡಿ ಮಕ್ಕಳನ್ನು ಬೇರೆ ಕೋಣೆಗೆ ಕಳುಹಿಸುತ್ತಿದ್ದರು ಎಂದು ಅವರ ಮಗ ಸಚಿನ್ ಹೇಳಿದ್ದಾರೆ. ಮಮತಾ ತಮ್ಮ ಮಗಳ ಮಾವನನ್ನು ಆಗಾಗ್ಗೆ ತಮ್ಮ ಮನೆಗೆ ಕರೆಯುತ್ತಿದ್ದರು ಎಂದು ನೆರೆಮನೆಯ ಅವಧೇಶ್ ಕುಮಾರ್ ಕೂಡ ದೃಢಪಡಿಸಿದ್ದಾರೆ. ಶೈಲೇಂದ್ರ ರಾತ್ರಿಯಲ್ಲಿ ಮಮತಾ ಮನೆಗೆ ಬಂದು ಬೆಳಗ್ಗೆ ಬೇಗನೆ ಹೊರಡುತ್ತಿದ್ದರು ಎಂದು ಅವಧೇಶ್ ತಿಳಿಸಿದ್ದಾರೆ. ಇದನ್ನೂ ಓದಿ: ಜನಿವಾರ ವಾರ್ – ಬೀದರ್ ಪ್ರಾಂಶುಪಾಲ, ಎಸ್‌ಡಿಎ ಕೆಲಸದಿಂದಲೇ ವಜಾ
ಸುನಿಲ್ ಕುಮಾರ್ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಶೈಲೇಂದ್ರ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಬಗ್ಗೆ ವಿವರವಾದ ತನಿಖೆ ಆರಂಭಿಸಲಾಗಿದೆ. ಇದನ್ನೂ ಓದಿ: ದಲಿತ ಯುವತಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ – ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ಸೂಸೈಡ್ ಆರೋಪ