– ಕೊನೆಗೂ 8 ತಿಂಗ್ಳ ನಂತ್ರ ಮಗನ ಸೇರಿದ ತಾಯಿ
ಮಡಿಕೇರಿ: ತಾಯಿಯನ್ನು ಕಳೆದುಕೊಂಡ ಮಗ, ಹೆತ್ತ ಮಗನಿಂದ ದೂರಾದ ತಾಯಿ ಕೊನೆಗೂ 8 ತಿಂಗಳ ಬಳಿಕ ತಾಯಿ ಮಗ ಒಂದಾದ ಮನಕಲುಕುವ ಘಟನೆ ಮಂಜಿನ ನಗರಿ ಮಡಿಕೇರಿ ನಗರದಲ್ಲಿ ನಡೆದಿದೆ.
ವೃದ್ಧೆ ಮುಕ್ಕು ಮಗನ ಸೇರಿದ ತಾಯಿ. ಇನ್ನೂ ಮಗ ಎಂಟು ತಿಂಗಳಿನಿಂದ ನಾಪತ್ತೆಯಾಗಿದ್ದ ತಾಯಿಯನ್ನು ಹುಡುಕಿಕೊಂಡು 3000 ಕಿಲೋಮೀಟರ್ ದೂರದ ಉತ್ತರ ಪ್ರದೇಶದಿಂದ ಮಡಿಕೇರಿಗೆ ಬಂದಿದ್ದನು. ತಕ್ಷಣ ತಾಯಿಯನ್ನ ಕಂಡು ಮಗ ಬಿಕ್ಕಿಬಿಕ್ಕಿ ಕಣ್ಣೀರಿಟ್ಟನು. ಮಗ ಕಣ್ಣೀರು ಹಾಕುತ್ತಿದ್ದನ್ನು ನೋಡಿ ತಾಯಿಯೂ ಕೂಡ ಕಣ್ಣೀರು ಹಾಕಿ, ಮಗನ ಕಣ್ಣೀರು ಒರೆಸಿದರು. ನಂತರ ಮಗನ ತಲೆಯನ್ನು ನೇವರಿಸಿ ಮುದ್ದಾಡಿದರು.
ಉತ್ತರ ಪ್ರದೇಶದ ಡಾಣಿಣ್‍ಪುರ್ ಗ್ರಾಮದ ವೃದ್ಧೆ ಮುಕ್ಕು 8 ತಿಂಗಳ ಹಿಂದೆ ಜಾತ್ರೆಗೆಂದು ಹೋಗಿದ್ದವರು ಆಕಸ್ಮಿಕವಾಗಿ ರೈಲು ಹತ್ತಿ ಮೈಸೂರು ಸೇರಿದ್ದರು. ಅಲ್ಲಿಂದ ಮಡಿಕೇರಿಗೆ ಬಂದವರು ಬದುಕುವುದಕ್ಕಾಗಿ ಭಿಕ್ಷೆ ಬೇಡುತ್ತಿದ್ದರು.
ವೃದ್ಧೆಯನ್ನು ಕಂಡ ತನಲ್ ವೃದ್ಧಾಶ್ರಮದ ಮುಖ್ಯಸ್ಥ ಮೊಹಮ್ಮದ್ ಮತ್ತು ಎಫ್‍ಎಂಸಿ ಕಾಲೇಜಿನ ಪ್ರೊಫೆಸರ್ ರಂಗಪ್ಪ ಇಬ್ಬರು ಮಗನ ಬಳಿಗೆ ಸೇರಿಸಲು ಎರಡು ತಿಂಗಳಿನಿಂದ ನಿರಂತರ ಪ್ರಯತ್ನಿಸಿದರು. ಕೊನೆಗೂ ಎರಡು ತಿಂಗಳ ಬಳಿಕ ಮಗನನ್ನು ಕರೆಸಿಸಿ ತಾಯಿ-ಮಗನ ಒಂದು ಮಾಡಿದ್ದಾರೆ.