Connect with us

Crime

ಪ್ರಿಯಕರನ ಪಕ್ಕದಲ್ಲಿ ಮಲಗಿದ್ದನ್ನ ನೋಡಿದ್ದೇ ತಪ್ಪಾಯ್ತು – ಮಗನನ್ನೇ ಕೊಂದ್ಳು

Published

on

– ಬೆಡ್‍ರೂಮಿನಲ್ಲಿ ಮೂರು ಮಕ್ಕಳ ತಾಯಿ ನಗ್ನ

ಶಿಮ್ಲಾ: ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯೊಂದಿಗೆ ಮಲಗಿದ್ದನ್ನು ನೋಡಿದ್ದಕ್ಕೆ ಸ್ವಂತ ಮಗನನ್ನೇ ತಾಯಿ ಅಮಾನವೀಯವಾಗಿ ಕೊಲೆ ಮಾಡಿರುವ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ.

ಕಾಂಗ್ರಾ ಜಿಲ್ಲೆಯ ಇಂದೋರಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಆರೋಪಿ ಪೂನಾ ದೇವಿ ಮತ್ತು ಆಕೆಯ ಪ್ರಿಯಕರ ಸೇವಾ ಕುಮಾರ್ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಏನಿದು ಪ್ರಕರಣ?
ಆರೋಪಿ ಪೂನಾ ದೇವಿಗೆ ಬಲ್ವಂತ್ ಸಿಂಗ್ ಜೊತೆ ಮದುವೆಯಾಗಿತ್ತು. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಇತ್ತೀಚೆಗೆ ಪೂನಾ ದೇವಿ ತನ್ನ ಪತಿಗೆ ಗೊತ್ತಿಲ್ಲದಂತೆ ಸೇವಾ ಕುಮಾರ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಪತಿ ಮನೆಯಲ್ಲಿ ಇಲ್ಲದಿದ್ದಾಗ ಆತನೊಂದಿಗೆ ಅಕ್ರಮ ಸಂಬಂಧ ಹೊಂದುತ್ತಿದ್ದಳು. ಎಂದಿನಂತೆ ಶುಕ್ರವಾರ ಬಲ್ವಂತ್ ಸಿಂಗ್ ಕೆಲಸಕ್ಕೆಂದು ಮನೆಯಿಂದ ಹೊರ ಹೋಗಿದ್ದಾನೆ. ಆಗ ಪೂನಾ ದೇವಿ ತನ್ನ ಪ್ರಿಯಕರನಿಗೆ ಫೋನ್ ಮಾಡಿ ಮನೆಗೆ ಬರುವಂತೆ ಕರೆದಿದ್ದಾಳೆ. ತನ್ನ ಪ್ರಿಯಕರ ಮನೆಗೆ ಬಂದ ತಕ್ಷಣ ಇಬ್ಬರು ಬೆಡ್‍ರೂಮಿಗೆ ಹೋಗಿದ್ದರು.

ಪೂನಾ ದೇವಿಯ ಏಳುವ ವರ್ಷದ ಮಗ ವಿನಯ್ ಮನೆಗೆ ಬಂದು ರೂಮಿಗೆ ಹೋಗಿದ್ದಾನೆ. ಅಲ್ಲಿ ತನ್ನ ತಾಯಿ ಹಾಸಿಗೆಯ ಮೇಲೆ ಇನ್ನೊಬ್ಬ ವ್ಯಕ್ತಿಯೊಂದಿಗೆ ಬೆತ್ತಲೆಯಾಗಿ ಮಲಗಿದ್ದನ್ನು ನೋಡಿದ್ದಾನೆ. ಈ ವೇಳೆ ಗಾಬರಿಗೊಂಡ ಪೂನಾ ದೇವಿ ಪ್ರಿಯಕರನ ಸಹಾಯದಿಂದ ಮಗನನ್ನೇ ಕೊಲೆ ಮಾಡಿ, ಮೃತದೇಹವನ್ನು ಸಮೀಪದ ಕಾಡಿಗೆ ತೆಗೆದುಕೊಂಡು ಹೋಗಿ ಎಸೆದಿದ್ದಾರೆ.

ಸ್ವಲ್ಪ ಸಮಯದ ನಂತರ ಮನೆಗೆ ಬಂದ ಬಲ್ವಂತ್ ಸಿಂಗ್, ಮಗ ಎಲ್ಲಿ ಎಂದು ಕೇಳಿದ್ದಾನೆ. ಆಗ ಪತ್ನಿ, ಹೊರಗಡೆ ಆಟವಾಡಲು ಹೋಗಿದ್ದನು. ತುಂಬಾ ಸಮಯದಿಂದ ನಾನು ನೋಡಿಲ್ಲ ಎಂದಿದ್ದಾಳೆ. ನಂತರ ಬಲ್ವಂತ್ ಸಿಂಗ್ ಎಲ್ಲಾ ಕಡೆ ಹುಡುಕಾಡಿದ್ದಾನೆ. ಎಲ್ಲೂ ಮಗ ಪತ್ತೆಯಾಗಿಲ್ಲ. ಇದರಿಂದ ಗಾಬರಿಗೊಂಡು ಸಿಂಗ್ ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಗೊಂಡು ತನಿಖೆ ನಡೆಸಿದ್ದಾರೆ. ಆಗ ಪೂನಾ ದೇವಿಯ ನಡವಳಿಕೆ ಅನುಮಾನಾಸ್ಪದವಾಗಿ ಕಾಣಿಸಿದೆ. ತಕ್ಷಣ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಆಗ ನಡೆದ ಘಟನೆಯ ಬಗ್ಗೆ ವಿವರಿಸಿದ್ದಾಳೆ. ಸದ್ಯಕ್ಕೆ ಪೊಲೀಸರು ಪೂನಾ ದೇವಿ ಮತ್ತು ಆಕೆಯ ಪ್ರಿಯರಕನನ್ನು ಬಂಧಿಸಿದ್ದಾರೆ.

Click to comment

Leave a Reply

Your email address will not be published. Required fields are marked *