– ಅಮ್ಮನಿಗೆ 20 ಬಾರಿ ಇರಿದು ಕೊಲೆ
– ಕೊಲೆ ಮಾಡಲು ಬ್ಲೂ ಪ್ರಿಂಟ್ ರೆಡಿ ಮಾಡಿದ್ಳು
– ಹೈದ್ರಾಬಾದ್ ಅಂತ ಹೇಳಿ ಅಂಡಮಾನ್‍ಗೆ ಟಿಕೆಟ್ ಬುಕ್ಕಿಂಗ್
ಬೆಂಗಳೂರು: ಮಲಗಿದ್ದ ತಾಯಿಗೆ 20 ಬಾರಿ ಇರಿದು ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಮಗಳನ್ನು ಕೊನೆಗೂ ಬೆಂಗಳೂರಿನ ಕೆ.ಆರ್.ಪುರಂ ಪೊಲೀಸರು ಅಂಡಮಾನ್‍ಅಲ್ಲಿ ಬಂಧಿಸಿದ್ದಾರೆ. ಜೊತೆಗೆ ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ತಾಯಿಯನ್ನೇ ಕೊಂದ ಟೆಕ್ಕಿ ಪ್ರಕರಣಕ್ಕೆ ಟ್ವಿಸ್ಟ್ – ಕೊಲೆ ಮಾಡಿ ಲವ್ವರ್ ಜೊತೆ ಜೂಟ್
ಕೊಲೆಗೆ ಸ್ಕೆಚ್:
ಅಮೃತಾ ತನ್ನ ತಾಯಿ ಮತ್ತು ತಮ್ಮನನ್ನು ಕೊಲೆ ಮಾಡುವುದಕ್ಕೆ ಕಳೆದ 15 ದಿನದ ಹಿಂದೆಯೇ ಸ್ಕೆಚ್ ಹಾಕಿಕೊಂಡಿದ್ದಳು. ಅದರಂತೆ ತಾಯಿಯನ್ನು ಹತ್ಯೆ ಮಾಡೋದಕ್ಕೆ ಬ್ಲೂ ಪ್ರಿಂಟ್ ಅನ್ನು ರೆಡಿಮಾಡಿಕೊಂಡಿದ್ದಳು. ಫೆಬ್ರವರಿ 2ರಂದು ತಾಯಿಯನ್ನು ಕೊಲೆ ಮಾಡಬೇಕು ಅಂದುಕೊಂಡಿದ್ದ ಅಮೃತಾ ತನ್ನ ಪ್ರಿಯಕರ ಶ್ರೀಧರ್ ನೊಂದಿಂಗೆ ಟ್ರಿಪ್ ಹೋಗಲು ಜನವರಿ 15ರಂದೇ ತನ್ನ ಮೊಬೈಲ್ ನಂಬರ್ ಅನ್ನು ಬಳಸಿ ಟಿಕೆಟ್ ಬುಕ್ ಮಾಡಿದ್ದಳು. ಅದರಂತೆ ಬೆಳಗಿನ ಜಾವ 6:30ಕ್ಕೆ ವಿಮಾನ ಕೂಡ ನಿಗದಿಯಾಗಿತ್ತು.
Advertisement
Advertisement
ಬೆಳಗ್ಗೆ 4 ಗಂಟೆಗೆ ತಾನು ಅಂದುಕೊಂಡಿದ್ದ ಹಾಗೇ ತಾಯಿಯನ್ನು ಕೊಂದು ಪ್ರಿಯಕರನೊಂದಿಗೆ ಎಸ್ಕೇಪ್ ಆಗಿದ್ದಳು. ತಾಯಿಯನ್ನು ಕೊಲೆ ಮಾಡಿದ ಅಮೃತಾ ಬಳಿಕ ತನ್ನ ತಮ್ಮನನ್ನು ಕೊಲ್ಲಲು ಹೋಗಿದ್ದಾಗ ಹರೀಶ್‍ನ ಮುಂದೆ ನಾನು ಹೈದ್ರಾಬಾದ್‍ಗೆ ಹೋಗೋದಾಗಿ ಹೇಳಿದ್ದಳು.
Advertisement
ಕೊಲೆ ಮಾಡಿದ ಬಳಿಕ ಮನೆಯಿಂದ ಬ್ಯಾಗ್ ಜೊತೆ ಹೊರಬಂದು ಪ್ರಿಯಕರನ ಜೊತೆ ಬೈಕಿನಲ್ಲಿ ಎಸ್ಕೇಪ್ ಆಗುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅಮೃತಾ ಹೈದ್ರಾಬಾದ್‍ಗೆ ಹೋಗಿರಬಹುದು ಎಂದು ಭಾವಿಸಿ ಪೊಲೀಸರು ಅತ್ತ ಕಡೆ ಹೋಗಿ ಮೊದಲು ಸಣ್ಣ ಎಡವಟ್ಟು ಮಾಡಿಕೊಂಡರು.
Advertisement
ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಬಳಸಿಕೊಂಡು ತನಿಖೆ ನಡೆಸಿದ ಪೊಲೀಸರ ತಂಡ ತಲೆ ಮರೆಸಿಕೊಂಡಿದ್ದ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದರು. ಅಮೃತಾ ಮತ್ತು ಶ್ರೀಧರ್ ಫ್ಲೈಟ್‍ನಲ್ಲಿ ಎಸ್ಕೇಪ್ ಆದ ಬೆನ್ನಲ್ಲೇ ಬೆಂಗಳೂರಿನಿಂದ ಫ್ಲೈಟ್‍ಗಳ ಮೂಲಕ ಬೇರೆ ಕಡೆ ಹೋಗಿದ್ದ ಪ್ರಯಾಣಿಕರ ಮಾಹಿತಿ ಸಂಗ್ರಹ ಮಾಡಿದ್ದಾರೆ.
ಆಗ ಅದೇ ದಿನ ಅಮೃತಾ ಚಂದ್ರಶೇಖರ್ ಹಾಗೂ ಶ್ರೀಧರ್ ಎಂಬ ಮತ್ತೊಂದು ಜೋಡಿ ಮುಂಬೈಗೆ ಹೋಗಿತ್ತು. ಆಗ ಪೊಲೀಸರು ಅವರೇ ಪ್ರಕರಣದ ಹಂತಕರು ಅಂತ ಮುಂಬೈ ಮೇಲೆ ಕಣ್ಣಿಟ್ಟ ಕಾರಣ ಆರೋಪಿಗಳು ಜಸ್ಟ್ ಮಿಸ್ ಆಗಿದ್ದರು. ಬಳಿಕ ಮತ್ತಷ್ಟು ಮಾಹಿತಿಯನ್ನು ಕಲೆ ಹಾಕಿ ಅಂಡಮಾನ್‍ನ ಜೈಲಿನ ಮುಂದೆಯೇ ಪ್ರೇಮಿಗಳಿಬ್ಬರು ಓಡಾಡುತ್ತಿದ್ದರು. ಅಲ್ಲಿನ ಸ್ಥಳೀಯ ಪೋಲಿಸರ ನೆರವಿನಿಂದ ಅಮೃತಾ ಹಾಗೂ ಪ್ರಿಯಕರ ಶ್ರೀಧರ್ ರಾವ್‍ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಲೆ ಮಾಡಿದ್ದು ಯಾಕೆ?
ಕೊಲೆ ಮಾಡೋದಕ್ಕೆ ನಿಖರ ಕಾರಣ ಏನು ಅನ್ನೋದು ಇನ್ನೂ ಕೂಡ ನಿಗೂಢವಾಗಿಯೇ ಉಳಿದಿದೆ. ಆದರೆ ಅಂಡಮಾನ್‍ನ ಪ್ರಖ್ಯಾತ ಕಲಪಾನಿ ಜೈಲ್ ಬಳಿ ಓಡಾಡುತ್ತಿದ್ದ ಅಮೃತಾ ಮತ್ತು ಶ್ರೀಧರ್ ನನ್ನು ಸ್ಥಳಿಯ ಪೊಲೀಸರ ಸಹಾಯದಿಂದ ಬಂಧಿಸಿದ್ದಾರೆ. ತಾಯಿಯನ್ನು ಕೊಂದಂತಹ ಟೆಕ್ಕಿ ಅಮೃತಾ ಮತ್ತು ಆಕೆಯ ಪ್ರಿಯಕರ ಶ್ರೀಧರ್ ಇಬ್ಬರು ಅಂಡಮಾನ್ ಅಲ್ಲಿ ಟ್ರಿಪ್ ಮಾಡುತ್ತಿದ್ದರು.