ಮಡಿಕೇರಿ: ತನ್ನ 20 ದಿನದ ಹಸುಗೂಸನ್ನು ರಕ್ಷಿಸಿಕೊಳ್ಳಲು ಪ್ರವಾಹದಲ್ಲೇ ಓಡಿದ ತಾಯಿಯೊಬ್ಬರು, ತನ್ನ ಮಡಿಲಲ್ಲೆ ಮಗುವನ್ನು ಕಳೆದುಕೊಂಡ ಹೃದಯವಿದ್ರಾವಕ ಘಟನೆ ಕೊಡಗಿನ ಮುಕ್ಕೋಡ್ಲು ಬಳಿ ನಡೆದಿದೆ.
ಹೌದು. ಭಾನುವಾರ ಸುರಿದ ಭಾರಿ ಮಳೆಯಿಂದಾಗಿ ತಾಯಿಯೊಬ್ಬಳು ತನ್ನ ಮಡಿಲಲ್ಲೇ 20 ದಿನದ ಹಸುಗೂಸನ್ನು ಕಳೆದುಕೊಂಡಿರುವ ಕರುಣಾಜನಕ ಕಥೆ ಮುಕ್ಕೋಡ್ಲು ಬಳಿ ನಡೆದಿದೆ. ತನ್ನ ಮಡಿಲಲ್ಲೇ ಮಗುವನ್ನು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿದ್ದು, ಜವರಾಯನಾಗಿ ಬಂದ ಮಳೆರಾಯ ತಾಯಿಯ ಕಂಕುಳಲ್ಲಿದ್ದ ಮಗುವಿನ ಪ್ರಾಣಪಕ್ಷಿಯನ್ನೇ ಕಿತ್ತುಕೊಂಡು ಹೋಗಿದ್ದಾನೆ. ಇದನ್ನೂ ಓದಿ: ಅಜ್ಜಿಯನ್ನು ಹುಡುಕಿಕೊಡುವಂತೆ ಮೊಮ್ಮಗಳ ಮನವಿ – ಅಧಿಕಾರಿಗಳ ಜೊತೆ 5 ಕಿ.ಮೀ. ನಡೆದ ಸಾ.ರಾ.ಮಹೇಶ್
ಶನಿವಾರ ಮುಕ್ಕೋಡ್ಲು ಬಳಿ ಸುರಿದ ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು, ಈ ವೇಳೆ ಗ್ರಾಮದಲ್ಲಿದ್ದ ಮುತ್ತು ಹಾಗೂ ಸರಸ್ವತಿ ದಂಪತಿಯ ಮನೆ ಕುಸಿದು ಬಿದ್ದಿದೆ. ದಂಪತಿ ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ತಮ್ಮ 20 ದಿನದ ಹಿಂದೆ ಹುಟ್ಟಿದ್ದ ಹೆಣ್ಣು ಮಗುವನ್ನು ಕೈಯಲ್ಲಿ ಹಿಡಿದುಕೊಂಡು ಪ್ರವಾಹದ ಮಧ್ಯೆ ಓಡಿದ್ದಾರೆ. ಈ ವೇಳೆ ಸರಸ್ವತಿ ಮಗುವಿನೊಂದಿಗೆ ಮಣ್ಣಿನ ಗುಡ್ಡೆಯೊಂದರಲ್ಲಿ ಕುಸಿದು ಬಿದ್ದುಬಿಟ್ಟರು. ಬಿದ್ದ ರಭಸಕ್ಕೆ ಕೈಯಲ್ಲಿದ್ದ ಮಗುವಿನ ಪ್ರಾಣಪಕ್ಷಿ ಹಾರಿಹೋಗಿದೆ. ಅವರು ಸಹ ತಮ್ಮ ಕಾಲನ್ನು ಕಳೆದುಕೊಂಡಿದ್ದಾರೆ.
ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಾಯಿಯು, ಕಾಲು ಕಳೆದ ಕೊಂಡ ನೋವನ್ನೂ ಲೆಕ್ಕಿಸದೆ, ಮಗುವಿನ ಚಿಂತೆಯಲ್ಲಿ ಮುಳುಗಿದ್ದಾರೆ. ತನ್ನ ಮಡಿಲಿನಿಂದಲೇ ಕೂಸನ್ನು ಕಿತ್ತುಕೊಂಡ ಜವರಾಯನಿಗೆ ಹಿಡಿಶಾಪ ಹಾಕುತ್ತಿದ್ದಾಳೆ. ಮಗುವನ್ನು ಕಳೆದುಕೊಂಡು ದಂಪತಿಯು ಶೋಕ ಸಾಗರದಲ್ಲಿ ಮುಳುಗಿದ್ದಾರೆ. ಇದನ್ನೂ ಓದಿ: ಕೋಟ್ಯಾಧಿಪತಿಯಾಗಿದ್ದ ತಂದೆ ಒಂದು ಪ್ಯಾಂಟು ಶರ್ಟಿಗೆ ಕೈ ಚಾಚಿದ್ದನ್ನು ಕಂಡು ಕಣ್ಣೀರಿಟ್ಟ ಮಗಳು!
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv