ಭಾರತ ಮಾತೆಯೇ ಬಿಜೆಪಿಯವರಿಂದ ಬಿಡಿಸಿಕೊಂಡು ಓಡುವ ಪ್ರಯತ್ನದಲ್ಲಿದ್ದಾಳೆ: ವಿಶ್ವನಾಥ್ ವ್ಯಂಗ್ಯ

Public TV
2 Min Read
H Vishwanath

ನವದೆಹಲಿ: ಭ್ರಷ್ಟಾಚಾರ ಮಾಡಿದವರನ್ನು ಬಿಜೆಪಿ (BJP) ರಕ್ಷಿಸುತ್ತಿದೆ. ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಕುತಂತ್ರದಿಂದ ಬಿಡುಗಡೆ ಮಾಡಿಸಿ, ನಾಯಕರು ಭಾರತ್ ಮಾತಾಕೀ ಜೈ ಎನ್ನುತ್ತಾರೆ. ಇವರಿಂದ ಬಿಡಿಸಿಕೊಂಡು ಓಡಿ ಹೋಗಲು ಭಾರತ ಮಾತೆಯೇ ಪ್ರಯತ್ನಿಸುತ್ತಿದ್ದಾಳೆ ಎಂದು ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ (H Vishwanath) ವ್ಯಂಗ್ಯವಾಡಿದ್ದಾರೆ.

ನವದೆಹಲಿಯಲ್ಲಿ (New Delhi) ಮಾತನಾಡಿದ ಅವರು, ವಿದೇಶಗಳಲ್ಲಿ ರಾಹುಲ್ ಗಾಂಧಿ ಪ್ರಬುದ್ಧವಾಗಿ ಮಾತನಾಡುತ್ತಿದ್ದಾರೆ. ಅನುಭವಗಳೊಂದಿಗೆ ಮಾತನಾಡುತ್ತಿದ್ದಾರೆ. ಲಂಡನ್‌ನಲ್ಲಿ ಮಾತನಾಡಿರುವುದು ಭಾರತದ ವಿರುದ್ಧ ಅಲ್ಲ, ಭಾರತದಲ್ಲಿರುವ ನಾಯಕತ್ವ ವಿರುದ್ಧ. ಆದರೆ ನರೇಂದ್ರ ಮೋದಿ ವಿರುದ್ಧ ಮಾತನಾಡಿದರೆ ಇಡಿ ದಾಳಿ ನಡೆಸುತ್ತದೆ. ದೇಶದ್ರೋಹಿ ಎನ್ನಲಾಗುತ್ತದೆ. ನಾವು ಎಂತಹ ಪರಿಸ್ಥಿತಿಯಲ್ಲಿದ್ದೇವೆ ಎಂದು ಕೇಳಿದರು.

H Vishwanath 2

ಭ್ರಷ್ಟಾಚಾರ ಮಾಡಿದ ವ್ಯಕ್ತಿಯನ್ನು ಅದ್ದೂರಿಯಾಗಿ ಸ್ವಾಗತ ಮಾಡಲಾಗುತ್ತದೆ. ಅಲ್ಲಿ ಭಾರತ್ ಮಾತಾಕೀ ಜೈ ಎನ್ನುತ್ತಾರೆ. ಇದನ್ನು ಕಂಡು ಭಾರತ ಮಾತೆ ಬಿಜೆಪಿಗರ ಕೈಯಿಂದ ಬಿಡಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾಳೆ. ಭಾರತದಲ್ಲಿ ದ್ವೇಷ ರಾಜಕಾರಣ ನಡೆಯುತ್ತಿದೆ. ಮನೀಶ್ ಸಿಸೋಡಿಯಾ ಅವರನ್ನು ಏಕೆ ಬಂಧಿಸಲಾಗಿದೆ? ಚುನಾವಣೆ ಬರುತ್ತಿದ್ದಂತೆ ಜನಾರ್ದನ ರೆಡ್ಡಿ ಅವರ ವಿರುದ್ಧ ಮತ್ತೆ ತನಿಖೆ ಶುರುವಾಗಿದೆ. ಡಿಕೆ ಶಿವಕುಮಾರ್ ವಿರುದ್ಧವೂ ಇದೇ ಸಂಚು ನಡೆಯುತ್ತಿದೆ. ಅವರ ಒಡೆತನದ ಶಾಲೆಗಳ ಮಕ್ಕಳ ಶುಲ್ಕ ಕೂಡಾ ತನಿಖೆ ಮಾಡಲಾಗುತ್ತಿದೆ. ಹಾಗಾದರೆ ಬಿಜೆಪಿ ನಾಯಕರ ಎಷ್ಟು ಶಾಲೆಗಳಿವೆ? ಅವರ ತನಿಖೆ ನಡೆದಿದೆಯೇ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಕರ್ನಾಟಕದ ಬೆಳವಣಿಗೆಗೆ ಪೂರಕ – ಮೋದಿ ಬಣ್ಣನೆ

ಬೆಂಗಳೂರು-ಮೈಸೂರು ಹೆದ್ದಾರಿ ಕ್ರೆಡಿಟ್ ವಾರ್ ಬಗ್ಗೆ ಮಾತನಾಡಿ ಸಂಸದ ಪ್ರತಾಪ ಸಿಂಹಗೆ ಹೆಚ್ ವಿಶ್ವನಾಥ್ ಬುದ್ಧಿವಾದ ಹೇಳಿದರು. ಎಸ್‌ಎಂ ಕೃಷ್ಣ ಕಾಲದಲ್ಲಿ ರಸ್ತೆ ಅಭಿವೃದ್ಧಿಗೆ ಚಾಲನೆ ಸಿಕ್ಕಿತ್ತು. 2012 ರಲ್ಲಿ ಕೇಂದ್ರ ಸಚಿವರಾಗಿದ್ದ ಆಸ್ಕರ್ ಫರ್ನಾಂಡೀಸ್ ಇದಕ್ಕೆ ಯೋಜನೆ ರೂಪಿಸಿದರು. ಅನೇಕ ಸಭೆಗಳನ್ನು ನಡೆಸಿ ಯೋಜನೆ ಅಂತಿಮ ಮಾಡಿದರು. ಯುಪಿಎ 2 ಸರ್ಕಾರದಲ್ಲಿ ಮಾಡಿದ ಯೋಜನೆ ಇದು ಎಂದರು.

H Vishwanath 1

ಜನರ ದುಡ್ಡಲ್ಲಿ ಯೋಜನೆ ನಡೆಯುತ್ತಿದೆ. ನಾನೇ ಮಾಡಿದೆ ಎನ್ನುವುದರಲ್ಲಿ ಅರ್ಥ ಇಲ್ಲ. ಸಂಸದ ಸ್ಥಾನದ ಘನತೆ ನಿಮ್ಮ ನಡವಳಿಕೆಯಿಂದ ಹಾಳಾಗಬಾರದು. ನಿಮ್ಮ ನಡವಳಿಕೆಯಿಂದ ಸಂಸದ ಸ್ಥಾನದ ಘನತೆ ಹೆಚ್ಚಬೇಕು. ಆ ನಿಟ್ಟಿನಲ್ಲಿ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: ಸಿದ್ದರಾಮಯ್ಯ ಹರಕೆಯ ಕುರಿ, ಕಾಂಗ್ರೆಸ್‍ಗೆ ದಮ್ಮಿದ್ರೆ ಅವರನ್ನ ಸಿಎಂ ಅಭ್ಯರ್ಥಿಯಾಗಿ ಘೋಷಿಸಲಿ: ಶ್ರೀರಾಮುಲು ಸವಾಲು

ಸುಮಲತಾ ಬಿಜೆಪಿ ಬೆಂಬಲ ಬಗ್ಗೆ ಮಾತನಾಡಿದ ಅವರು, ಸುಮಲತಾ ಆಯ್ಕೆಯಾಗಿದ್ದು ಕಾಂಗ್ರೆಸ್, ಅರ್ಧ ಜೆಡಿಎಸ್ ನಾಯಕರಿಂದ. ಅಂಬರೀಶ್ ಅಭಿಮಾನಿಗಳು ಸಮಲತಾರನ್ನು ಗೆಲ್ಲಿಸಿದ್ದರು. ಮಂಡ್ಯದಲ್ಲಿ ಬಿಜೆಪಿ ಏನೂ ಇಲ್ಲ. ಮುಂದೆ ಏನಾಗುತ್ತೋ ಕಾದುನೋಡಬೇಕು ಎಂದರು.

Share This Article
Leave a Comment

Leave a Reply

Your email address will not be published. Required fields are marked *